ರಾಮನ ಬಳಿಕ ಈಗ ಸೀತಾ ಮಂದಿರ ನಿರ್ಮಾಣ: ಅಮಿತ್‌ ಶಾ

By Kannadaprabha News  |  First Published May 17, 2024, 5:30 AM IST

ಬಿಜೆಪಿ ಎಂದಿಗೂ ಪ್ರತಿಪಕ್ಷಗಳ ರೀತಿ ಮತಬ್ಯಾಂಕ್‌ ರಾಜಕಾರಣ ಮಾಡುವುದಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರದ ರೀತಿ ಸೀತಾಮಢಿಯಲ್ಲೂ ಸೀತಾಮಂದಿರ ನಿರ್ಮಿಸಲಾಗುವುದು ಎಂದು ತಿಳಿಸಿದ ಅಮಿತ್‌ ಶಾ 


ಸೀತಾಮಢಿ(ಮೇ.17):  ಮರ್ಯಾದಾ ಪುರುಷೋತ್ತಮ ಶ್ರೀರಾಮನಿಗೆ ಆತನ ಜನ್ಮಸ್ಥಳ ಅಯೋಧ್ಯೆಯಲ್ಲಿ ಭವ್ಯ ಮಂದಿರದ ಭರವಸೆ ನೀಡಿ ಅದನ್ನು ಈಡೇರಿಸಿದ ಬಿಜೆಪಿ, ಇದೀಗ ರಾಮನ ಧರ್ಮಪತ್ನಿ ಸೀತೆಗೂ ಆಕೆಯ ಹುಟ್ಟೂರು, ಬಿಹಾರ ಸೀತಾಮಢಿಯಲ್ಲಿ ಬೃಹತ್‌ ದೇಗುಲ ನಿರ್ಮಿಸುವುದಾಗಿ ಘೋಷಿಸಿದೆ.

ಬುಧವಾರ ಇಲ್ಲಿ ಬಿಜೆಪಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅಮಿತ್‌ ಶಾ, ‘ಬಿಜೆಪಿ ಎಂದಿಗೂ ಪ್ರತಿಪಕ್ಷಗಳ ರೀತಿ ಮತಬ್ಯಾಂಕ್‌ ರಾಜಕಾರಣ ಮಾಡುವುದಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರದ ರೀತಿ ಸೀತಾಮಢಿಯಲ್ಲೂ ಸೀತಾಮಂದಿರ ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ. 

Tap to resize

Latest Videos

undefined

ಪೂರ್ಣಾವಧಿಗೆ ಮತ್ತೆ ಮೋದಿಯೇ ಪ್ರಧಾನಿ: ಅಮಿತ್‌ ಶಾ

ಇದು ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಬಹಿಷ್ಕರಿಸಿದವರಿಂದ ಸಾಧ್ಯವಿಲ್ಲ. ಕೇವಲ ರಾಮಮಂದಿರದ ಕನಸು ಸಾಕಾರ ಮಾಡಿದ ಬಿಜೆಪಿ ಮತ್ತು ನರೇಂದ್ರ ಮೋದಿಯಿಂದ ಮಾತ್ರ ಸಾಧ್ಯ’ ಎಂದು ವಾಗ್ದಾನ ನೀಡಿದರು.
ಸೀತಾಮಢಿಯಲ್ಲಿ ಹಾಲಿ ಸೀತೆಗೆ ಒಂದು ಸಣ್ಣ ದೇಗುಲ ನಿರ್ಮಿಸಲಾಗಿದೆ.

click me!