ಬ್ರ್ಯಾಂಡ್ ನ್ಯೂ ಜಮ್ಮು ಕಾಶ್ಮೀರದ ಅಸಲಿ ಸತ್ಯವೇನು..? ಮತ್ತೆ ದೇಶದ ಗಮನ ಸೆಳೆದಿದ್ದೇಕೆ ಭಾರತದ ಮುಕುಟ ಮಣಿ!

Sep 2, 2023, 3:46 PM IST

ಜಮ್ಮು ಕಾಶ್ಮೀರ ಚುನಾವಣೆ ಯಾವಾಗ್ಬೇಕಿದ್ರೂ ನಡೀಲಿ, ನಡೆಸೋಕೆ ನಾವ್ ರೆಡಿ ಅಂತ ಕೇಂದ್ರ ಸರ್ಕಾರ(Central government) ಘಂಟಾಘೋಷವಾಗಿ ಹೇಳಿದೆ. ಜಮ್ಮು ಮತ್ತು ಕಾಶ್ಮೀರ(Jammu-Kashmir), ಅದು ಭೂಮಿಯ ಮೇಲಿನ ಸ್ವರ್ಗ. ಪ್ರತಿ ಭಾರತೀಯನೂ ಕೂಡ ಲೈಫ್ ಅಲ್ಲಿ ಒಂದ್ ಸಲ ಆದ್ರೂ, ಕಾಶ್ಮೀರಕ್ಕೆ ಹೋಗ್ಬೇಕು. ಆ ಹಿಮವತ್ ಪರ್ವತ ಶಿಖರ ಶ್ರೇಣಿಗಳನ್ನ ಕಣ್ತುಂಬಿಕೊಳ್ಬೇಕು. ಸ್ವರ್ಗ ಸಮಾನ ವಸುಂಧರೆಯನ್ನ ಒಮ್ಮೆಯಾದ್ರೂ ಪಾದಸ್ಪರ್ಷ  ಮಾಡ್ಬೇಕು ಅಂತ ಆಸೆ ಪಟ್ಟಿರ್ತಾನೆ. ಆದ್ರೆ, ಇಂಥಾ ಭೂಲೋಕ ಸ್ವರ್ಗ ಒಂದಷ್ಟು ವರ್ಷಗಳಿಂದ ನಮಗೆ ಗೋಚರಿಸಿದ್ದು, ಯುದ್ಧಕ್ಷೇತ್ರವಾಗಿ. ಯಾವಾಗೆಲ್ಲಾ ನಾವು ಜಮ್ಮು ಕಾಶ್ಮೀರದ ಸುದ್ದಿನಾ ಟಿವಿಲಿ ನೋಡಿದ್ವೋ, ಆಗೆಲ್ಲಾ ಈ ಭೂಪ್ರದೇಶ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಟೂರಿಸ್ಟ್  ಅಟ್ರಕ್ಷನ್ ಆಗಿ ಅಲ್ಲ, ಟೆರರಿಸ್ಟ್ಗಳ ಆಪರೇಟಿಂಗ್ ಸ್ಪಾಟ್ ಆಗಿ. ಮೋದಿ ಸರ್ಕಾರದ ಅತಿ ದೊಡ್ಡ ಸಾಧನೆಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲೋದು ಕಾಶ್ಮೀರದ ಸ್ಪೆಷಲ್ ಸ್ಟೇಟಸ್  ರಿಮೂವ್ ಮಾಡಿದ್ದು. ಈ ಕಾರ್ಯದಿಂದ, ಇನ್ಮುಂದೆ ಕಾಶ್ಮೀರದಲ್ಲಿ ಭಯೋತ್ಪಾದನೆಯೇ ಇರಲ್ಲ ಅಂತ ನಂಬಲಾಗಿತ್ತು. ಈಗ ಆ ಮಾತಿಗೆ ಪುರಾವೆ ಕೂಡ ಸಿಕ್ಕಂತಾಗಿದೆ. ಮೋದಿ(Narendra modi) ಹಾಗೂ ಅವರ ನೇತೃತ್ವದ ಕೇಂದ್ರ ಸರ್ಕಾರ ಏನೇನು ಹೇಳಿತ್ತೋ, ಅದೀಗ ನಿಜವಾಗಿದೆ ಅನ್ನೋ ಭರವಸೆ ಮೂಡಿದೆ.

ಇದನ್ನೂ ವೀಕ್ಷಿಸಿ:  ಬಂಗಾರಪ್ಪ, ಎಸ್‌.ಎಂ ಕೃಷ್ಣ, ಸಿದ್ದರಾಮಯ್ಯಗೆ ಕಾವೇರಿ ಕೊಟ್ಟದ್ದು ಅದೆಂಥಾ ಕಾಟ..?