ಟೆಲ್ ಅವಿವ್‌ನಲ್ಲಿ ಪ್ರತಿದಾಳಿ
ಇಸ್ರೇಲ್ ತನ್ನ ಸುತ್ತಲೂ ಇರುವ ಮುಸ್ಲಿಮ್ ರಾಷ್ಟ್ರಗಳ ವಿರುದ್ದ ಹೋರಾಡುತ್ತಿದೆ. ತನ್ನ ಮೇಲೆ ದಾಳಿ ನಡೆಸಿದ ಉಗ್ರರ ಹೆಡೆಮುರಿ ಕಟ್ಟುತ್ತಿದೆ. ಭಾನುವಾರ ಇಸ್ರೇಲ್‌ನ ಟೆಲ್ ಅವಿವ್ ನಗರದ ಜನನಿಬಿಡ ಪ್ರದೇಶದಲ್ಲಿ ಬಸ್ ನಿಲ್ದಾಣಕ್ಕೆ ಟ್ರಕ್ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 40 ಜನರು ಗಾಯಗೊಂಡಿದ್ದಾರೆ.
ಉಗ್ರರ ದಾಳಿ
ಟ್ರಕ್ ಚಾಲಕ ಬಸ್ ನಿಲ್ದಾಣಕ್ಕೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದಾನೆ ಎಂದು ಇಸ್ರೇಲ್ ಪೊಲೀಸರು ಶಂಕಿಸಿದ್ದಾರೆ. ಈ ಘಟನೆಯ ತನಿಖೆ ಆರಂಭವಾಗಿದೆ. ಇದು ಭಯೋತ್ಪಾದಕ ಕೃತ್ಯ ಅನ್ನೋದು ಇಸ್ರೇಲ್ ಪೊಲೀಸರ ಪ್ರಾಥಮಿಕ ಮಾಹಿತಿ. ಇಸ್ರೇಲ್ ಟಾರ್ಗೆಟ್ ಮಾಡಿದ ಉಗ್ರರ ಕೃತ್ಯ ಸಾಧ್ಯತೆ ಹೆಚ್ಚು ಎಂದು ಇಸ್ರೇಲ್ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಟೆಲ್ ಅವಿವ್‌ನಲ್ಲಿ ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದ ಟ್ರಕ್ ಚಾಲಕ ಇಸ್ರೇಲ್ ನಾಗರಿಕ
ಸ್ಥಳೀಯ ಕಾಲಮಾನ ಪ್ರಕಾರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಗಿಲ್ಟ್ ಮಿಲಿಟರಿ ನೆಲೆಯ ಬಳಿ ಈ ಘಟನೆ ನಡೆದಿದೆ ಎಂದು ಇಸ್ರೇಲ್ ಪೊಲೀಸರು ತಿಳಿಸಿದ್ದಾರೆ. ಆರೋಪಿ ಟ್ರಕ್ ಚಾಲಕ ಇಸ್ರೇಲ್ ನಾಗರಿಕ. ಘಟನೆ ಕುರಿತ ಸಿಸಿಟಿವಿ ದೃಶ್ಯಗಳು ಸೇರಿದಂತೆ ಇತರ ಮಾಹಿತಿ ಬಹಿರಂಗವಾಗಿದೆ. ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಟ್ರಕ್ ಚಾಲಕನನ್ನು ಗುಂಡಿಕ್ಕಿ ಹತ್ಯೆ
ಇಸ್ರೇಲ್ ನಾಗಕರೀಕರ ಮೇಲೆ ಏಕಾಏಕಿ ಟ್ರಕ್ ನುಗ್ಗಿಸಿ ಮಾರಣ ಹತ್ಯೆಗೆ ಪ್ರಯತ್ನಿಸಿದ ಟ್ರಕ್ ಟಾಲಕ ಆರಂಭಿಕ ಹಂತದಲ್ಲಿ ಯಶಸ್ವಿಯಾಗಿದ್ದಾನೆ. ಈತನ ದಾಳಿಗೆ ಓರ್ವ ಸ್ಥಳದಲ್ಲೆ ಮೃತಪಟ್ಟಿದ್ದ , 40 ಮಂದಿ ಗಾಯಗೊಂಡಿದ್ದಾರೆ. ಸ್ಥಳದಲ್ಲಿದ್ದ ಇಸ್ರೇಲ್ ನಾಗರೀಕರ ತನ್ನ ಬಳಿ ಇದ್ದ ರಿವಾಲ್ವರ್‌ನಿಂದ ಚಾಲಕನ ಹತ್ಯೆ ಮಾಡಿದ್ದಾನೆ.
ಚಿಕಿತ್ಸೆ ವೇಳೆ ಒಬ್ಬರ ಸಾವು, ಕೆಲವರ ಸ್ಥಿತಿ ಗಂಭೀರ
ಟೆಲ್ ಅವಿವ್‌ನ ಇಚಿಲೋವ್ ವೈದ್ಯಕೀಯ ಕೇಂದ್ರ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಗಾಯಾಳುಗಳನ್ನು ದಾಖಲಿಸಲಾಗಿದೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಬ್ಬರು ಮೃತಪಟ್ಟಿದ್ದಾರೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಇಸ್ರೇಲ್ ಪೊಲೀಸರು ತಿಳಿಸಿದ್ದಾರೆ. ಆರೋಪಿ ಟ್ರಕ್ ಚಾಲಕ ಮಧ್ಯ ಇಸ್ರೇಲ್‌ನ ಕಲನ್ಸವಾ ನಗರದ ನಿವಾಸಿ. ಅವರು ಇಸ್ರೇಲ್ ನಾಗರಿಕರಾಗಿದ್ದರೂ, ಅರಬ್ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.