ತೆಲುಗಿನಲ್ಲಿ ಅಳುವುದು, ಹಿಂದಿಯಲ್ಲಿ ಅಳುವುದು ಬೇರೆ ಬೇರೆ ಇರುತ್ತಂತೆ. ಒಂದು ಸೀನ್‌ನಲ್ಲಿ ನನ್ನನ್ನು ತೆಲುಗು ಹುಡುಗಿಯಂತೆ ಅಳಬೇಕು ಅಂದರಂತೆ. ಅದೇನೋ ನನಗೆ ಅರ್ಥ ಆಗಲಿಲ್ಲ. ಅಳು ತೆಲುಗಿನಲ್ಲಿ ಒಂದು ರೀತಿ, ಹಿಂದಿಯಲ್ಲಿ ಒಂದು ರೀತಿ ಹೇಗೆ ಇರುತ್ತೆ ಅಂತ ನನಗೆ ಗೊತ್ತಿಲ್ಲ ಅಂದಿದ್ದಾರೆ. ಅಡಿವಿ ಶೇಷ್ ವಿವರಣೆ ಕೊಡಲು ಪ್ರಯತ್ನಿಸುತ್ತಿದ್ದಾಗ, ನೀನು ಚಡಪಡಿಸುತ್ತಿದ್ದೀಯಾ ಅಂತ ಮಹೇಶ್ ಕಾಲೆಳೆದಿದ್ದಾರೆ. ಹಿಂದಿ ಜನ ಒಂದು ರೀತಿ ಅಳುತ್ತಾರೆ, ತೆಲುಗು ಜನ ಮತ್ತೊಂದು ರೀತಿ ಅಳುತ್ತಾರಾ ಅಂತ ಮಹೇಶ್ ಬಾಬು ಅಡಿವಿ ಶೇಷ್‌ಗೆ ಚುಕ್ಕೆ ತೋರಿಸಿದ್ದಾರೆ.