ವಾಯುಸೇನಾ ದಿನಕ್ಕೆ ಮತ್ತಷ್ಟು ಬಲ ತುಂಬಲಿದೆ ರಫೇಲ್, ಶತ್ರುಗಳಿಗೆ ತೋರಿಸಲಿದೆ ತನ್ನ ತಾಕತ್ತು!

Oct 6, 2020, 11:47 AM IST

ನವದೆಹಲಿ(ಅ.06): ಪೂರ್ವ ಲಡಾಖ್‌ನ ಗಡಿಯಲ್ಲಿ ಐದಾರು ತಿಂಗಳಿನಿಂದ ತಂಟೆ ಮಾಡುತ್ತಿರುವ ಚೀನಾಕ್ಕೆ ಸಂದರ್ಭ ಬಂದರೆ ತಕ್ಕ ಪಾಠ ಕಲಿಸಲು ಭಾರತೀಯ ವಾಯುಪಡೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಯಾವುದೇ ರೀತಿಯ ಆಪತ್ತು ಎದುರಿಸಲು ಸಿದ್ಧವಿರುವುದಾಗಿ ಘೋಷಿಸಿದೆ. ಸಂದರ್ಭ ಬಂದರೆ ಚೀನಾ ಹಾಗೂ ಪಾಕಿಸ್ತಾನ ಜತೆ ಏಕಕಾಲದಲ್ಲಿ ಯುದ್ಧಕ್ಕೆ ಸಜ್ಜಾಗಿರುವುದಾಗಿ ಪ್ರಕಟಿಸಿದೆ.

‘ಹಾಲಿ ಪರಿಸ್ಥಿತಿಗೆ ತಕ್ಕಂತೆ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಯಾವುದೇ ರೀತಿಯ ಆಪತ್ತು ಎದುರಿಸಲು ಭಾರತೀಯ ವಾಯುಪಡೆ ಉತ್ತಮ ಸಿದ್ಧತೆ ಮಾಡಿಕೊಂಡಿದೆ. ಭಾರತೀಯ ವಾಯುಪಡೆಯ ಸಾಮರ್ಥ್ಯವನ್ನು ಚೀನಾ ಕಡೆಗಣಿಸಲು ಸಾಧ್ಯವಿಲ್ಲ. ಅದೇ ವೇಳೆ, ನಾವು ಕೂಡ ಪ್ರತಿಕೂಲ ಸನ್ನಿವೇಶಗಳ ಬಗ್ಗೆ ಕೀಳಂದಾಜು ಮಾಡುವುದಿಲ್ಲ. ಸಂದರ್ಭ ಬಂದರೆ ಉತ್ತರ ಮತ್ತು ಪಶ್ಚಿಮದ ಎರಡೂ ಗಡಿಯಲ್ಲಿ ಏಕಕಾಲಕ್ಕೆ ಯುದ್ಧ ನಡೆಸಲು ನಾವು ಸಿದ್ಧರಿದ್ದೇವೆ’ ಎಂದು ವಾಯುಪಡೆಯ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ಆರ್‌ಕೆಎಸ್‌ ಭದೌರಿಯಾ ಹೇಳಿದ್ದಾರೆ.

ಇನ್ನು ಭಾರತೀಯ ವಾಯುಸೇನಾ ದಿನದ ಪ್ರಯುಕ್ತ ಇಂಡಿಯನ್ ಏರ್‌ ಪೋರ್ಸ್‌ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ರಫೇಲ್, ತೇಜಸ್‌ನಂತಹ ಯುದ್ಧ ವಿಮಾನಗಳ ಬಲ ಪ್ರದರ್ಶನ ತೋರಿಸಿದೆ,