ಚೀನಾಗೆ ಮತ್ತೆ ಪೆಟ್ಟು ಕೊಟ್ಟ ಮೋದಿ; 370 ವಸ್ತುಗಳ ಮೇಲೆ ನಿರ್ಬಂಧ..!

Jul 28, 2020, 6:10 PM IST

ನವದೆಹಲಿ(ಜು.28)"ಲಡಾಖ್ ಪೂರ್ವ ಭಾಗದಲ್ಲಿನ ಗಲ್ವಾನ್ ಪ್ರದೇಶದಲ್ಲಿ ಕಾಲುಕೆರೆದುಕೊಂಡು ಯುದ್ಧಕ್ಕೆ ಬಂದಿದ್ದ ಚೀನಾಗೆ ಮತ್ತೊಂದು ಗುದ್ದು ನೀಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಭಾರತ ಸರ್ಕಾರ 106 ಚೀನಿ ಆ್ಯಪ್‌ಗಳನ್ನು ಬ್ಯಾನ್ ಮಾಡಿತ್ತು. ಇದೀಗ ನೆರೆ ರಾಷ್ಟ್ರಕ್ಕೆ ಮತ್ತೊಂದು ಪೆಟ್ಟು ನೀಡಿದೆ 

ಹೌದು, ಚೀನಾದ 370 ವಸ್ತುಗಳ ಮೇಲೆ ಗುಣಮಟ್ಟ ನಿರ್ಬಂಧವನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೇರಿದೆ. ಆಟದ ಸಾಮಾನುಗಳು, ಸ್ಟೀಲ್ ಬಾರ್, ಸ್ಟೀಲ್ ಟ್ಯೂಬ್, ಕಾಗದ, ರಬ್ಬರ್, ಭಾರೀ ಯಂತ್ರೋಪಕರಣಗಳು ಸೇರಿದಂತೆ 370 ವಸ್ತುಗಳ ಮೇಲೆ ಭಾರತ ಸರ್ಕಾರ ನಿರ್ಬಂಧ ವಿಧಿಸಿದೆ.

ಚೀನಾ ವಿರುದ್ಧ ಭಾರತದ ಎರಡನೇ ಡಿಜಿಟಲ್ ದಾಳಿ: ಮತ್ತೆ 47 ಆ್ಯಪ್ ಬ್ಯಾನ್!

ವಾಣಿಜ್ಯ ಇಲಾಖೆ ಕಳೆದ ವರ್ಷವೇ 370 ವಸ್ತುಗಳನ್ನು ಪಟ್ಟಿ ಮಾಡಿತ್ತು. ಇದೀಗ ಆ ವಸ್ತುಗಳ ಮೇಲೆ ನಿರ್ಬಂಧ ಹೇರಿದೆ. ರಾಜತಾಂತ್ರಿಕ ಹಾಗೂ ವಾಣಿಜ್ಯ ಮಾರ್ಗಗಳ ಮೂಲಕ ಚೀನಾ ಮಣಿಸಲು ಭಾರತ ಮುಂದಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.