ಸಚಿವ ತಂಗಡಗಿ ಶಾಸಕ ಆಗೋಕೆ ನನ್ನ ಬಳಿ ದುಡ್ಡು ತಗೊಂಡು ಬಂದವನು. ನನಗೆ ಅವನೊಬ್ಬ ಆಫ್ಟ್ರಾಲ್, ಅವನ ಬಗ್ಗೆ ನಾನು ಮಾತಾಡೊಲ್ಲ ಎಂದು ಸಚಿವ ಶಿವರಾಜ ತಂಗಡಗಿ ವಿರುದ್ಧ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದರು.
ಕೊಪ್ಪಳ (ಮೇ.5): ಸಚಿವ ತಂಗಡಗಿ ಶಾಸಕ ಆಗೋಕೆ ನನ್ನ ಬಳಿ ದುಡ್ಡು ತಗೊಂಡು ಬಂದವನು. ನನಗೆ ಅವನೊಬ್ಬ ಆಫ್ಟ್ರಾಲ್, ಅವನ ಬಗ್ಗೆ ನಾನು ಮಾತಾಡೊಲ್ಲ ಎಂದು ಸಚಿವ ಶಿವರಾಜ ತಂಗಡಗಿ ವಿರುದ್ಧ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದರು.
ಬಿಜೆಪಿಗೆ ಮತ ಹಾಕುವಂತೆ ಬಿಜೆಪಿ ಕಾರ್ಯಕರ್ತನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಇಂದು ಕೊಪ್ಪಳ ಜಿಲ್ಲಾಸ್ಪತ್ರೆಗೆ ತೆರಳಿ ಗಾಯಾಳು ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹಿಟ್ನಾಳ್ ಬ್ರದರ್ಸ್ ಸೋಲುವ ಭೀತಿಯಿಂದ ಜನರಲ್ಲಿ ಭಯ ಬಿತ್ತುವ ಕೆಲಸ ಮಾಡ್ತಿದ್ದಾರೆ ಎಂದು ಹರಿಹಾಯ್ದರು. ಇದೇ ವೇಳೆ ಶಿವರಾಜ ತಂಗಡಗಿ ವಿರುದ್ಧವೂ ವಾಗ್ದಾಳಿ ನಡೆಸಿದರು.
ಕೊಪ್ಪಳದಲ್ಲಿ ಹಿಟ್ನಾಳ್ ಬ್ರದರ್ಸ್ ಬೆಂಬಲಿಗರ ರೌಡಿಸಂ! ಕಾಂಗ್ರೆಸ್ ಮತ ಹಾಕುವಂತೆ ಬಿಜೆಪಿ ಮುಖಂಡನ ಮೇಲೆ ಹಲ್ಲೆ!
ನಾನು ಎಂದಾದರೂ ಅವನ ಮನೆ ಸುತ್ತಾಡಿದ್ದು ನೋಡಿದ್ದೀರಾ? ಅವನ ಮನೆಗೆ ಭೇಟಿ ನೀಡಿದ್ದು ವಿಡಿಯೋದಲ್ಲಾದರೂ ನೋಡಿದ್ದೀರಾ ಎಂದು ಮಾಧ್ಯಮಗಳನ್ನು ಪ್ರಶ್ನಿಸಿದ ಅವರು, ನನಗೆ ಅವನು ಯಾವ ಲೆಕ್ಕ? ಅವನ ಮನೆ ಬಳಿ ಸುತ್ತಾಡೋಕೆ? ಅವನು ಹಿಂದೆ ನನ್ನ ಬಳಿ ಸುತ್ತಾಡಿದ್ದವನು ಈಗ ಹಳೇದೆಲ್ಲ ಮರೆತು ಅಧಿಕಾರದ ಮದ ತೆಲೆಗೇರಿಸಿಕೊಂಡು ದುರಾಹಂಕಾರದಲ್ಲಿ ಮಾತಾಡ್ತಿದ್ದಾನೆ. ಅವನು ತನ್ನ ಯೋಗ್ಯತೆ ಮೀರಿ ರೆಡ್ಡಿ ಬಗ್ಗೆ, ಪ್ರಧಾನಿ ಮೋದಿ ಬಗ್ಗೆ ಮಾತಾಡ್ತಿದ್ದಾನೆ. ಮೋದಿ ಬಗ್ಗೆಯಾಗಲಿ, ನನ್ನ ಬಗ್ಗೆಯಾಗಲಿ ಮಾತಾಡೋಕೆ ಅವನಿಗೆ ಯೋಗ್ಯತೆ ಇಲ್ಲ ಎಂದು ಕಟುವಾಗಿ ತಿರುಗೇಟು ನೀಡಿದರು.