ಪಾಕ್ ಪರ ಘೋಷಣೆ ಪ್ರಕರಣ: ಅಮಾಯಕರ ಬಂಧನ ಎಂದ SDPI!

Jan 2, 2021, 11:12 PM IST

ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆ ದಿನ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ SDPI ಕಾರ್ಯಕರ್ತರು ಪಾಕಿಸ್ತಾನ ಪರ ಘೋಷಣೆ ಕೂಗಿದ ವಿಡಿಯೋ ಭಾರಿ ವಿವಾದ ಸೃಷ್ಟಿಸಿದೆ. ವಿಡಿಯೋ ಆಧರಿಸಿ ಪೊಲೀಸರು ದೇಶದ್ರೋಹ ಆರೋಪದಡಿ 6 SDPI ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಆದರೆ SDPI ಇದು ಅಮಾಯಕರ ಬಂಧನ ಎಂದಿದೆ. ಇಷ್ಟೇ ಅಲ್ಲ ಪೊಲೀಸರಿಗೆ ವಾರ್ನಿಂಗ್ ನೀಡಿದೆ. ಇನ್ನು ಕೊರೋನಾ ಲಸಿಕೆ ಸಿಹಿ ಸುದ್ದಿ, ಚರ್ಚ್ ಪಾದ್ರಿಯೊಳಗೊಬ್ಬ ಕಾಮುಕ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ವಿಡಿಯೋ ಇಲ್ಲಿದೆ.