vuukle one pixel image

ದೇಶದಲ್ಲಿ ಲಕ್ಷ ದಾಟಿದ ಕೊರೋನಾ: 39 ಸಾವಿರ ಮಂದಿ ಗುಣಮುಖ!

May 19, 2020, 5:40 PM IST

ನವದೆಹಲಿ(ಮೇ.19): ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಒಂದು ಲಕ್ಷ ಗಡಿ ದಾಟಿದೆ. ಲಾಕ್‌ಡೌನ್ ಹೇರಿದ್ದರೂ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಲಾಕ್‌ಡೌನ್ ಸಡಿಲಿಕೆಯೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಯ್ತಾ ಎಂಬ ಅನುಮಾನ ಹುಟ್ಟು ಹಾಕಿದೆ.

ಹೌದು ದೇಶದಲ್ಲಿ ಸದ್ಯ 1,01,385 ಕೊರೋನಾ ಪ್ರಕರಣಗಳು ದಾಖಲಾಗಿದ್ದು, 58,987 ಸಕ್ರಿಯ ಪ್ರಕರಣಗಳಿವೆ. ಇನ್ನು 3158 ಮಂದಿ ಸಾವನ್ನಪ್ಪಿದ್ದು, 39,234 ಮಂದಿ ಮಾಮಾರಿಯಿಂದ ಗುಣಮುಖರಾಗಿದ್ದಾರೆ.