
ಮಗುವಿನ ಜನನವು ತಾಯಿಗೆ ನೋವಿನ ಅನುಭವ , ಅದನ್ನು ತಾಯಿ ಮಾತ್ರ ಸಹಿಸಬಲ್ಲಳು. ಆದಾಗ್ಯೂ, ಪ್ರತಿಯೊಬ್ಬ ಮಹಿಳೆ ತನ್ನ ಹೆರಿಗೆ ಸುಲಭವಾಗಿರಬೇಕು ಮತ್ತು ನೋವಿನಿಂದ ಕೂಡಿರಬಾರದು ಎಂದು ಬಯಸುತ್ತಾಳೆ. ಇತ್ತೀಚೆಗೆ ಒಂದು ವಿಡೀಯೋದಲ್ಲಿ ಹಾಲಿನೊಂದಿಗೆ ಬೆರೆಸಿದ ಖರ್ಜೂರವನ್ನು (milk with dates) ಕುಡಿಯುವುದರಿಂದ ಡೆಲಿವರಿ ನೋವಿಲ್ಲದೇ ಸುಲಭವಾಗಿ ಆಗುತ್ತೆ ಎನ್ನಲಾಗುತ್ತಿದೆ. ಈ ವಿಡಿಯೋ ನಿಜವೇ ಸುಳ್ಳೇ ಅನ್ನೋದನ್ನು ನೋಡೋಣ.
ನಾರ್ಮಲ್ ಡೆಲಿವರಿ ಆಗಬೇಕು ಅಂತ ಬಯಸೋರಿಗೆ ಅನುಷ್ಕಾ ಶರ್ಮಾ ಕೊಟ್ಟಿದ್ದಾರೆ ಟಿಪ್ಸ್!
ಒಬ್ಬ ತಾಯಿ ಸಹಿಸಲಸಾಧ್ಯವಾದ ನೋವಿನಿಂದ ಮಗುವನ್ನು ಜಗತ್ತಿಗೆ ತರುತ್ತಾಳೆ. ಹೆರಿಗೆಯ ಸಮಯದಲ್ಲಿ ಮಹಿಳೆ ಅನುಭವಿಸುವ ನೋವನ್ನು ಅಂದಾಜು ಮಾಡುವುದು ಕಷ್ಟ. ತಾಯಿಯಾದವಳು ಸಾಕಷ್ಟು ನೋವನ್ನು ಸಹಿಸಬೇಕಾಗುತ್ತದೆ. ಅದಕ್ಕಾಗಿಯೇ ಪ್ರತಿಯೊಬ್ಬ ಗರ್ಭಿಣಿ ಮಹಿಳೆ ಯಾವುದೇ ನೋವು ಇಲ್ಲದೆ ಸಾಮಾನ್ಯ ಹೆರಿಗೆಯನ್ನು ಹೊಂದಲು ಬಯಸುತ್ತಾರೆ. ಇದಕ್ಕಾಗಿ, ಇಂಟರ್ನೆಟಲ್ಲಿ ಅನೇಕ ರೀತಿಯ ಕ್ರಮಗಳನ್ನು ವಿವರಿಸಲಾಗಿದೆ. ಅದನ್ನು ಕೂಡ ಅನುಸರಿಸುತ್ತಾರೆ. ಇನ್ಸ್ಟಾಗ್ರಾಮ್ ನ ಒಂದು ಪೇಜ್ ನಲ್ಲಿ ರೀಲ್ಸ್ ಒಂದನ್ನು ಅಪ್ ಲೋಡ್ ಮಾಡಿದ್ದು, ಇದು ವೈರಲ್ ಆಗುತ್ತಿದೆ. ಇದರಲ್ಲಿ ಗರ್ಭಿಣಿ ಮಹಿಳೆ ಹಾಲಿನೊಂದಿಗೆ ಖರ್ಜೂರವನ್ನು ಬೆರೆಸಿ ಕುಡಿದರೆ, ನೋವು ಇಲ್ಲದೆ ಸಾಮಾನ್ಯ ಹೆರಿಗೆಯಾಗಬಹುದು ಎಂದು ಹೇಳಲಾಗಿದೆ. ಈ ಹೇಳಿಕೆಯ ಬಗ್ಗೆ ವೈದ್ಯರ ಅಭಿಪ್ರಾಯವೇನು ಎಂದು ತಿಳಿಯೋಣ.
Women Health: ನಾರ್ಮಲ್ ಹೆರಿಗೆಯಿಂದ ತಾಯಿಗೆ ಮಾತ್ರವಲ್ಲ ಮಕ್ಕಳಿಗೂ ಲಾಭವಿದೆ!
ಸಾಮಾನ್ಯ ಹೆರಿಗೆಗಾಗಿ (normal delivery), ನೀವು ಹಾಲಿನಲ್ಲಿ ಖರ್ಜೂರವನ್ನು ಕುಡಿಯಬಹುದು ಎಂದು ವಿಡಿಯೋದಲ್ಲಿ ತಿಳಿಸಲಾಗಿದೆ. ಬೇಸಿಗೆಯಾಗಿದ್ದರೆ, ಖರ್ಜೂರವನ್ನು ಅತಿಯಾಗಿ ಸೇವಿಸಬೇಡಿ. ಎರಡರಿಂದ ಮೂರು ಖರ್ಜೂರಗಳನ್ನು ತೆಗೆದುಕೊಂಡು, ಅವುಗಳನ್ನು ತೊಳೆದು ಬೀಜಗಳನ್ನು ತೆಗೆದುಹಾಕಿ. ನಂತರ ಅದನ್ನು ಹಾಲಿಗೆ ಸೇರಿಸಿ ಚೆನ್ನಾಗಿ ಕುದಿಸಿ. ಹಾಲು ಅರ್ಧದಷ್ಟು ಉಳಿದಾಗ, ಗ್ಯಾಸ್ ಆಫ್ ಮಾಡಿ ಮತ್ತು ಉಗುರು ಬೆಚ್ಚಗಿನ ಹಾಲನ್ನು ಕುಡಿಯಿರಿ. ಈ ರೀತಿಯಾಗಿ ಹಾಲು ಕುಡಿಯುವುದರಿಂದ ಸಾಮಾನ್ಯ ಹೆರಿಗೆ ಆಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಗರ್ಭಾವಸ್ಥೆಯಲ್ಲಿ ನಿಮಗೆ ಮಧುಮೇಹವಿದ್ದರೆ, ನೀವು ಖರ್ಜೂರ ತಿನ್ನುವುದನ್ನು ತಪ್ಪಿಸಬೇಕು.
ವೈದ್ಯರು ಹೇಳಿದ್ದೇನು?
ವೈದ್ಯರು ಈ ವಿಡಿಯೋ ಬಗ್ಗೆ ಮಾತನಾಡಿ, ಇದು ನಿಜ ಅಲ್ಲ ಎಂದಿದ್ದಾರೆ. ಈ ಹೇಳಿಕೆಯನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದಿದ್ದಾರೆ. ತಜ್ಞರ ಪ್ರಕಾರ, ಜೀವನಶೈಲಿ ಮತ್ತು ಹೆರಿಗೆಗಾಗಿ ದೇಹದ ಸಿದ್ಧತೆ ಸೇರಿದಂತೆ ಅನೇಕ ಅಂಶಗಳು ಸಾಮಾನ್ಯ ಹೆರಿಗೆಯ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಹಾಲು ಮತ್ತು ಖರ್ಜೂರ ಸೇವನೆಯಿಂದ ನಾರ್ಮಲ್ ಡೆಲಿವರಿ ಆಗುತ್ತೆ ಅನ್ನೋದು ಸುಳ್ಳು ಎಂದಿದ್ದಾರೆ.
ವೆಸ್ಟರ್ನ್ ಟಾಯ್ಲೆಟ್ ಬಿಟ್ಬಿಡಿ, ಇಂಡಿಯನ್ ಟಾಯ್ಲೆಟ್ ಬಳಸೋದ್ರಿಂದ ಹೆರಿಗೇಯೂ ಆಗುತ್ತೆಈಸಿ!
ವೈದ್ಯರ ಸಲಹೆ
ವೈದ್ಯರ ಪ್ರಕಾರ, ಸಾಮಾನ್ಯ ಹೆರಿಗೆಗೆ ದೇಹವನ್ನು ಸಿದ್ಧಪಡಿಸಲು ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ (balanced food) ಮತ್ತು ಅವಧಿಪೂರ್ವ ಆರೈಕೆಯ ಅಗತ್ಯವಿದೆ. ಹಾಲಿನೊಂದಿಗೆ ಖರ್ಜೂರವನ್ನು ತಿನ್ನುವುದು ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುತ್ತದೆ, ಆದರೆ ಇದರಿಂದ ಯಾವುದೇ ತೊಂದರೆ ಇಲ್ಲದೆ ಸಾಮಾನ್ಯ ಹೆರಿಗೆ ಆಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ನಿಮ್ಮ ಆಹಾರದಲ್ಲಿ ಖರ್ಜೂರವನ್ನು ಸೇರಿಸುವುದು ಪ್ರಯೋಜನಕಾರಿ, ಆದರೆ ಗರ್ಭಾವಸ್ಥೆಯ ಮಧುಮೇಹದಿಂದ ಬಳಲುತ್ತಿರುವ ಜನರು ಅದರ ಬಗ್ಗೆ ಜಾಗರೂಕರಾಗಿರಬೇಕು. ಏಕೆಂದರೆ ಅದರಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಇರೋದರಿಂದ ಸಮಸ್ಯೆ ಹೆಚ್ಚುವ ಸಾಧ್ಯತೆ ಇದೆ.
ಒಟ್ಟಲ್ಲಿ ಈ ವೈರಲ್ ವಿಡೀಯೋ ಬಗ್ಗೆ ಹೇಳೋದಾದರೆ ಹಾಲಿನೊಂದಿಗೆ ಖರ್ಜೂರವನ್ನು ಬೆರೆಸಿ ಕುಡಿದರೆ ನೋವು ಇಲ್ಲದೆ ಸಾಮಾನ್ಯ ಹೆರಿಗೆಯಾಗುತ್ತದೆ ಎಂಬ ಹೇಳಿಕೆ ಸುಳ್ಳು ಎಂದು ಫ್ಯಾಕ್ಟ್ ಚೆಕ್ (fact check) ತಂಡ ಬಹಿರಂಗಪಡಿಸಿದೆ. ತಜ್ಞರ ಪ್ರಕಾರ, ಖರ್ಜೂರವು ನೋವು ಇಲ್ಲದೆ ಸಾಮಾನ್ಯ ಹೆರಿಗೆಗೆ ಸಹಾಯ ಮಾಡುತ್ತೆ ಎಂದು ಹೇಳುವುದು ಸಾಧ್ಯವಿಲ್ಲ. ಇದಕ್ಕಾಗಿ, ಹೆರಿಗೆಗೆ ಮೊದಲು ಆರೋಗ್ಯಕರ, ಸಮತೋಲಿತ ಜೀವನಶೈಲಿ ಮತ್ತು ಉತ್ತಮ ಆರೈಕೆ ಅತ್ಯಗತ್ಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.