ಕೈಯಲ್ಲಿ ಕೊಡಲಿ ಹಿಡಿದು 'ಲ್ಯಾಂಡ್‌ಲಾರ್ಡ್‌' ಆದ ದುನಿಯಾ ವಿಜಯ್: ಫ್ಯಾನ್ಸ್‌ಗೆ ಮನವಿ ಮಾಡಿದ್ದೇನು?

Published : Jan 20, 2025, 05:35 PM IST

ಪ್ರತಿ ವರ್ಷದಂತೆ ಈ ಬಾರಿ ದುನಿಯಾ ವಿಜಯ್‌ ಅಭಿಮಾನಿಗಳ ಜತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ‘ಹುಟ್ಟುಹಬ್ಬದಂದು ಜಡೇಶ್ ಸಿನಿಮಾ ನಿರ್ದೇಶನದ ಚಿತ್ರದ ಚಿತ್ರೀಕರಣದಲ್ಲಿರುತ್ತೇನೆ.‌ ಹೀಗಾಗಿ ನಿಮ್ಮ ಜತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗುತ್ತಿಲ್ಲ’ ಎಂದು ದುನಿಯಾ ವಿಜಯ್‌ ಹೇಳಿದ್ದಾರೆ.

PREV
16
ಕೈಯಲ್ಲಿ ಕೊಡಲಿ ಹಿಡಿದು 'ಲ್ಯಾಂಡ್‌ಲಾರ್ಡ್‌' ಆದ ದುನಿಯಾ ವಿಜಯ್: ಫ್ಯಾನ್ಸ್‌ಗೆ ಮನವಿ ಮಾಡಿದ್ದೇನು?

ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಇಂದು (ಜ.20) 51ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಹುಟ್ಟುಹಬ್ಬದ ಅಂಗವಾಗಿ ಜಡೇಶ್‌ಕುಮಾರ್‌ ಹಂಪಿ ನಿರ್ದೇಶನದ, ವಿಜಯ್‌ ನಟನೆಯ ಹೊಸ ಸಿನಿಮಾದ ಶೀರ್ಷಿಕೆ ಹಾಗೂ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಚಿತ್ರಕ್ಕೆ ‘ಲ್ಯಾಂಡ್‌ಲಾರ್ಡ್‌’ ಎಂದು ಹೆಸರಿಡಲಾಗಿದೆ.
 

26

ಈ ಚಿತ್ರದಲ್ಲಿ ರಾಜ್‌ ಬಿ ಶೆಟ್ಟಿ ಹಾಗೂ ದುನಿಯಾ ವಿಜಯ್‌ ಪುತ್ರಿ ರಿತನ್ಯಾ ನಟಿಸುತ್ತಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿ ದುನಿಯಾ ವಿಜಯ್‌ ಅಭಿಮಾನಿಗಳ ಜತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ‘ಹುಟ್ಟುಹಬ್ಬದಂದು ಜಡೇಶ್ ಸಿನಿಮಾ ನಿರ್ದೇಶನದ ಚಿತ್ರದ ಚಿತ್ರೀಕರಣದಲ್ಲಿರುತ್ತೇನೆ.‌ ಹೀಗಾಗಿ ನಿಮ್ಮ ಜತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗುತ್ತಿಲ್ಲ’ ಎಂದು ದುನಿಯಾ ವಿಜಯ್‌ ಹೇಳಿದ್ದಾರೆ.
 

36

'ಚಿತ್ರದಲ್ಲಿ ವಿಜಯ್ ಪಾತ್ರದ ಹೆಸರು ರಾಚಯ್ಯ. ಶೇಕಡ 70ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಹಾಡು ಮತ್ತು ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣ ಬಾಕಿಯಿದೆ. ಈ ವರ್ಷ ಆಗಸ್ಟ್‌ನಲ್ಲಿ ಚಿತ್ರವನ್ನು ತೆರೆಗೆ ತರುವ ಆಲೋಚನೆಯಿದೆ. 
 

46

ಇದು ಯಾವುದೇ ಹೋರಾಟ ಅಥವಾ ಭೂಮಿಗೆ ಸಂಬಂಧಿಸಿದ ಕಥೆಯಲ್ಲ. ಭೂಮಿ ಒಡೆಯನಾಗಬೇಕೆಂದು ಹೊರಟವನ ಕಥೆ. ಅಪ್ಪ- ಮಗಳ ಭಾವನಾತ್ಮಕ ಸನ್ನಿವೇಶಗಳನ್ನು ಹೊಂದಿರುವ ಚಿತ್ರ' ಎಂದು ಜಡೇಶ್ ಹೇಳಿದ್ದಾರೆ.

56

'ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ' ಎಂಬ ಟ್ಯಾಗ್‌ಲೈನ್‌ ಹೊಂದಿದೆ. ದೇವಾಲಯದ ಎದುರು ದೇವರ ರಥವೊಂದು ಹೊತ್ತಿ ಉರಿಯುತ್ತಿರುವ ಪೋಸ್ಟರ್ ಅನ್ನು ಚಿತ್ರತಂಡ ಈ ಹಿಂದೆ ಬಿಡುಗಡೆಗೊಳಿಸಿತ್ತು.

66

ಉಮಾಶ್ರೀ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ಅಚ್ಯುತ್‌ ಕುಮಾರ್, ಬಿ.ಸುರೇಶ್ ಮೊದಲಾದವರು ಚಿತ್ರದಲ್ಲಿದ್ದಾರೆ. 'ಸಾರಥಿ' ಸಿನಿಮಾದ ನಿರ್ಮಾಪಕ ಕೆ.ವಿ. ಸತ್ಯಪ್ರಕಾಶ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
 

Read more Photos on
click me!

Recommended Stories