Maldives: ಲಕ್ಷದ್ವೀಪಕ್ಕೆ ಭೇಟಿ ಕೊಟ್ಟಿದ್ದ ಮೋದಿ..! ಮಾಲ್ಡೀವ್ಸ್ ದೇಶಕ್ಕೆ ಬೆಂಕಿ ಬಿದ್ದಿದ್ದೇಕೆ..?

Jan 9, 2024, 3:02 PM IST

ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ(Lakshadweep) ಭೇಟಿ ನೀಡಿದ್ದು ಭಾರಿ ಸಂಚನಲ ಮೂಡಿಸಿತ್ತು. ಭಾರತದ(India) ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಅನ್ನೋ ಆಗ್ರಹ ಮೋದಿಯಿಂದ(Narendra Modi) ಬಂದ ಬೆನ್ನಲ್ಲೇ ಮಾಲ್ಡೀವ್ಸ್(Maldives) ದೇಶಕ್ಕೆ ಭಯಂಕರ ಉರಿ ಬಿದ್ದಿದೆ. ಪ್ರವಾಸಿಗರನ್ನೇ ನೆಚ್ಚಿಕೊಂಡು ಬದುಕ್ತಾ ಇರೋ ದೇಶ ಭಾರತದ ಮೇಲೆ ವಿಷ ಕಾರಿದೆ. ಬಟ್ ಭಾರತೀಯರು ಮಾಲ್ಡೀವ್ಸ್ ದೇಶದ ಸೊಕ್ಕನ್ನ ಅಡಗಿಸಿದ್ದಾರೆ. ಭಾರತದ ಸೆಲಬ್ರೆಟಿಗಳು ಮಾಲ್ಡೀವ್ಸ್ ಅಂಹಕಾರವನ್ನ ಮೆಟ್ಟಿದ್ದಾರೆ. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಾವೆಂತಾ ದೊಡ್ಡ ಇನ್ಫ್ಲೂಯೆನ್ಸರ್ ಅನ್ನೋದನ್ನ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದ ಮೋದಿ ಅಲ್ಲಿ ಸೆರೆ ಹಿಡಿದ ಫೋಟೋ ಹಾಗೂ ವಿಡಿಯೋ ಮೂಲಕ ಭಾರತದ ಪ್ರವಾಸೋದ್ಯಮಕ್ಕೆ ಬೆಂಬಲಿಸಿ ಅನ್ನೋ ಕರೆ ಕೊಟ್ಟಿದ್ದರು.

ಅದೊಂದು ಕರೆ ಎಷ್ಟು ಪ್ರಭಾವಶಾಲಿಯಾಗಿತ್ತು ಅಂದ್ರೆ ಮಾಲ್ಡೀವ್ಸ್ ದೇಶವನ್ನೇ ಅಲ್ಲಾಡಿಸಿತ್ತು. ಮೋದಿ ಲಕ್ಷದ್ವೀಪ ಭೇಟಿಗೆ ಮಾಲ್ಡೀವ್ಸ್ ಉರಿದು ಬೂದಿಯಾಗಿದೆ. ಭಾರತದ ವಿರುದ್ಧ ಮಾಲ್ಡೀವ್ಸ್ ಸಚಿವರು ಬಾಯಿಗೆ ಬಂದ ಹಾಗೇ ಮಾತನ್ನಾಡಿ ದುರ್ವರ್ತನೆ ತೋರಿದ್ದರು. ಮೋದಿ ಲಕ್ಷದ್ವೀಪಕ್ಕೆ ಕೊಟ್ಟ ಪ್ರಚಾರ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡ ಮಾಲ್ಡೀವ್ಸ್  ದೇಶಕ್ಕೆ ಗಂಟಲಲ್ಲಿ ಸಿಕ್ಕ ಮೂಳೆಯಾಗಿತ್ತು. ಭಾರತೀಯರ ಆಕ್ರೋಶಕ್ಕೆ ಗುರಿಯಾಗೋದು ದೊಡ್ಡ ವಿಚಾರವಲ್ಲ. ಆದ್ರೆ ಆಕ್ರೋಶದ ಪರಿಣಾಮವನ್ನ ಎದುರಿಸೋದು ಇದ್ಯಲ್ಲಾ ಅದು ಘೋರ. 

ಇದನ್ನೂ ವೀಕ್ಷಿಸಿ:  ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು.. 11 ಅತ್ಯಾಚಾರಿಗಳು ಮತ್ತೆ ಜೈಲಿಗೆ..!