ಮುಂದಿನ CJI ಆಗಿ ಜಸ್ಟಿಸ್ ಬಾಬ್ಡೆ ನೇಮಕ; ಇಲ್ಲಿದೆ ಕಿರು ಪರಿಚಯ

Oct 29, 2019, 7:34 PM IST

ಜಸ್ಟಿಸ್ ಶರದ್ ಅರವಿಂದ್ ಬಾಬ್ಡೆ ಅವರನ್ನು ಸುಪ್ರೀಂ ಕೋರ್ಟಿನ ಮುಂದಿನ ಮುಖ್ಯ ನ್ಯಾಯಾಧೀಶರಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಂಗಳವಾರ ನೇಮಿಸಿದರು. 

24 ಏಪ್ರಿಲ್ 1956ರಂದು ಬಾಬ್ಡೆಯವರು ನಾಗಪುರದಲ್ಲಿ ವಕೀಲರ ಮನೆತನದಲ್ಲಿ ಜನಿಸಿದರು.  ಬಾಬ್ಡೆ ತಾತ ವಕೀಲರಾಗಿದ್ದರು. ತಂದೆ ಅರವಿಂದ್ ಬಾಬ್ಡೆ 1980 ರಿಂದ 85ರವರೆಗೆ ಮಹಾರಾಷ್ಟ್ರದ ಅಡ್ವೋಕೇಟ್ ಜನರಲ್ ಆಗಿದ್ದರು. ಸುಪ್ರೀಂ ಕೋರ್ಟ್ ವಕೀಲರಾಗಿದ್ದ ಸಹೋದರ, ದಿವಂಗತ ವಿನೋದ್ ಬಾಬ್ಡೆ ಸಂವಿಧಾನ ತಜ್ಞರಾಗಿದ್ದರು.

ಜಸ್ಟಿಸ್ ರಂಜನ್ ಗೊಗೊಯಿಯವರು ನ.17ರಂದು ನಿವೃತ್ತಿಯಾಗಲಿದ್ದು, ನವೆಂಬರ್ 18 ರಂದು ಜಸ್ಟಿಸ್ ಬಾಬ್ಡೆ ಅಧಿಕಾರ ಸ್ವೀಕರಿಸಲಿದ್ದಾರೆ. ಮುಂದಿನ ಚೀಫ್ ಜಸ್ಟಿಸ್ ಆಫ್ ಇಂಡಿಯಾ ಪರಿಚಯ ಇಲ್ಲಿದೆ....