ದೈನಂದಿನ ಪ್ರಕರಣದಲ್ಲಿ ಭಾರತ ವಿಶ್ವದಲ್ಲೇ ನಂ.2; ಆಸ್ಪತ್ರೆಗಳಲ್ಲಿ ಬೆಡ್‌ಗಳಿಲ್ಲ, ವೆಂಟಿಲೇಟರ್ ಕೊರತೆ

Apr 13, 2021, 4:48 PM IST

ನವದೆಹಲಿ (ಏ. 13): ದೈನಂದಿನ ಕೊರೋನಾ ಕೇಸ್‌ಗಳ ಸಂಖ್ಯೆಯಲ್ಲಿ ಅಮೆರಿಕವನ್ನು ಹಿಂದಿಕ್ಕಿರುವ ಭಾರತ ಇದೀಗ ಸೋಂಕು ಅತೀ ವೇಗವಾಗಿ ಹಬ್ಬುತ್ತಿರುವ ವಿಶ್ವದ 2ನೇ ರಾಷ್ಟ್ರವಾಗಿ ಹೊರಹೊಮ್ಮಿದೆ. 

ಲಾಕ್‌ಡೌನ್ ಆಗುತ್ತಾ..? ಏ. 18 ಕ್ಕೆ ಮಹತ್ವದ ಸಭೆ ಬಳಿಕ ನಿರ್ಧಾರ

24 ಗಂಟೆಗಳ ಅವಧಿಯಲ್ಲಿ 91,097 ಕೊರೋನಾ ಕೇಸ್‌ಗಳನ್ನು ದಾಖಲಿಸಿರುವ ಬ್ರೆಜಿಲ್‌ ವಿಶ್ವದ ನಂ.1 ಕೊರೋನಾ ಹಾಟ್‌ಸ್ಪಾಟ್‌ ರಾಷ್ಟ್ರವಾಗಿದೆ.ಇನ್ನು ಅತಿ ಹೆಚ್ಚು ಕೊರೋನಾ ಸೋಂಕಿತರು ಇರುವ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮತ್ತು ಬ್ರೆಜಿಲ್‌ ನಂತರದ 3ನೇ ಸ್ಥಾನವು ಭಾರತದ ಪಾಲಾಗಿದೆ. ಇನ್ನು ಮಹಾರಾಷ್ಟ್ರದಲ್ಲಿ ನಿತ್ಯ 8000 ಕೇಸ್‌ ಬರುತ್ತಿದ್ದು, 1  ವಾರ ಪುಣೆ ಶಟ್‌ಡೌನ್‌ ಆಗಿದೆ.