ಗಡಿಯಲ್ಲಿ ಉದ್ವಿಗ್ನ: ಉಭಯ ದೇಶಗಳ ನಡುವೆ ಯುದ್ಧದ ಭೀತಿ..?

Jun 17, 2020, 1:23 PM IST

ಲಡಾಖ್(ಜೂ.17): ಭಾರತ-ಚೀನಾ ನಡುವೆ ಲಡಾಖ್ ಗಡಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ಉಭಯ ದೇಶಗಳ ಸೈನಿಕರು ಗಡಿಯಲ್ಲಿ ಜಮಾವಣೆಯಾಗುವುದರೊಂದಿಗೆ ಯುದ್ಧವಾಗುತ್ತಾ ಎನ್ನುವ ಅನುಮಾನ ಮತ್ತಷ್ಟು ದಟ್ಟವಾಗುತ್ತಿದೆ. 

ಉಭಯ ದೇಶಗಳ ನಡುವೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಂತಹ ಗಲ್ವಾನ್ ಪ್ರದೇಶದಲ್ಲಿ ಮಂಗಳವಾರ(ಜೂ.16)ದಿಂದಲೂ ಮೇಜರ್ ಜನರಲ್ ಮಟ್ಟದ ಮಾತುಕತೆಗಳು ನಡೆಯುತ್ತಿದೆ. ಆದರೆ ಈ ಮಾತುಕತೆ ಫಲ ನೀಡಿಲ್ಲ. 

ಯುದ್ಧ ಸನ್ನದ್ಧವಾಗುವಂತೆ ಭಾರತೀಯ ಸೇನೆಗೆ ಕೇಂದ್ರದ ಸೂಚನೆ

ಅರುಣಾಚಲ ಪ್ರದೇಶ, ಸಿಕ್ಕಿಂ, ಉತ್ತರಖಂಡ, ಹಿಮಾಚಲ ಪ್ರದೇಶ ಹಾಗೂ ಲಡಾಖ್‌, ಒಟ್ಟಾರೆ 4 ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದೊಂದಿಗೆ ಭಾರತ ಚೀನಾದೊಂದಿಗೆ ಗಡಿ ಹಂಚಿಕೊಂಡಿದೆ. ಮಾತುಕತೆ ಫಲಪ್ರದವಾಗದ ಹಿನ್ನಲೆಯಲ್ಲಿ ಭಾರತ-ಚೀನಾ ಗಡಿ ಪ್ರದೇಶವಾದ ಮೂರುವರೆ ಸಾವಿರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.