ರಾಷ್ಟ್ರ ರಾಜಧಾನಿಯಲ್ಲಿ ತುಂಬಿದ ಶವಾಗಾರ, ಸಮಾಧಿ ಮಾಡಲೂ ಸ್ಥಳವಿಲ್ಲ!

Jun 2, 2020, 2:02 PM IST

ಚೀನಾದಿಂದ ಹರಡಿದ ಕೊರೋನಾ ವೈರಸ್‌ನಿಂದ ವಿಶ್ವದ ಬಹುತೇಕ ರಾಷ್ಟ್ರಗಳು ಸಾವಿನ ಮನೆಯಂತಾಗಿವೆ. ಭಾರತದಲ್ಲೂ ಕೊರೋನಾ ಅಟ್ಟಹಾಸ ದಿನೇ ದಿನೇ ಹೆಚ್ಚಲಾರಂಭಿಸಿದೆ. ಸದ್ಯ ರಾಷಟ್‌ರ ರಾಜಧಾನಿ ದೆಹಲಿಯಲ್ಲಿ ಆಸ್ಪತ್ರೆಗಳು ತುಂಬುವ ಆತಂಕ ಎದುರಾಗಿದೆ. 

ಹೌದು ಆಸ್ಪತ್ರೆಗಳು ನಿಧಾನವಾಗಿ ತುಂಬುತ್ತಿದ್ದು, ಸದ್ಯ ದೊಡ್ಡ ದೊಡ್ಡ ಹಾಲ್‌ಗಳು, ಒಳಾಂಗಣ ಕ್ರೀಡಾಂಗಣಗಳಲ್ಲಿ ಬೆಡ್‌ಗಳನ್ನು ಹಾಕಿ ಕೊರೋನಾ ರೋಗಿಗಳ ಚಿಕಿತ್ಸೆಗೆ ಬೇಕಾದ ಸೌಲಭ್ಯವನ್ನು ಸಿದ್ಧಪಡಿಸುವಂತೆ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ.

ಅಲ್ಲದೇ ಇಲ್ಲಿನ ಶವಾಗಾರಗಳು ತುಂಬುತ್ತಿದ್ದು, ಸದ್ಯ ಒಂದರ ಮೇಲೊಂದರಂತೆ ಶವಗಳನ್ನು ಸಂರಕ್ಷಿಸಲಾಗುತ್ತಿದೆ. ಅಂತ್ಯಸಂಸ್ಕಾರಕ್ಕೂ ಸ್ಥಳದ ಕೊರತೆ ಎದುರಾಗುತ್ತಿದ್ದು, ಇಲ್ಲಿನ ಪರಿಸ್ಥಿತಿ ಜನಸಾಮಾನ್ಯರನ್ನು ಮತ್ತಷ್ಟು ಭಯ ಭೀತಗೊಳಿಸಿದೆ.