ಈ ಅಹಾರಗಳನ್ನು ತಿಂದರೆ ಇನ್ನಷ್ಟು ವೀಕ್ ಆಗ್ತೀರಿ; ಜೋಕೆ!

Nov 7, 2019, 3:16 PM IST

ಎಲ್ಲರ ಹತ್ತಿರ ಈಗೀಗ ಬೇಕಾದ್ದನ್ನು ಕೊಳ್ಳುವ ಸಾಮರ್ಥ್ಯವಿದೆ. ಏನು ಬೇಕಾದರೂ ತಿನ್ನಬಹುದು. ಆದರೆ, ಕರಗಿಸಿಕೊಳ್ಳುವಂಥ ಆರೋಗ್ಯವಿಲ್ಲ. ದಿನೆ ದಿನೇ ಜನರ ಆರೋಗ್ಯ ಕುಸಿಯುತ್ತಿದ್ದು, ಆರೋಗ್ಯದಲ್ಲಿ ಧನಾತ್ಮಕ ಸುಧಾರಣೆ ಕಾಣಲು ಎಲ್ಲರೂ ಸಸ್ಯಜನ್ಯ ಪಥ್ಯಕ್ಕೆ ಮೊರೆ ಹೋಗುತ್ತಿದ್ದಾರೆ. ಆದರೆ, ಎಲ್ಲ ಸಸ್ಯಗಳು ಅಂದುಕೊಂಡ ಹಾಗೆ ಫಲಿತಾಂಶ ನೀಡಲು ಸಾಧ್ಯವಿಲ್ಲ.

ಏಕ ಸಸ್ಯ ಪಥ್ಯ ಅಥವಾ ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ ಎಲ್ಲ ಸಸ್ಯಜನ್ಯ ಪಥ್ಯ ಒಳ್ಳೇದಲ್ಲ, ಎಂಬುದನ್ನು ಅಧ್ಯಯನವೊಂದು ಸಾಬೀತು ಪಡಿಸಿದೆ. ಸಿರಿವಂತ ದೇಶಗಳಲ್ಲಿ ಈ ರೀತಿ ಪಥ್ಯ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದು, ಅವರ ಆರೋಗ್ಯವೂ ಕ್ಷೀಣಿಸುತ್ತಿರುವುದು ಸಂಶೋಧನೆಯಿಂದ ದೃಢಪಟ್ಟಿದೆ. ಹವಾಮಾನ ಬದಲಾದಂತೆ ಕೆಲವು ಸಸ್ಯಗಳು ವಿಷಕಾರಿಯಾಗುವುದರಿಂದ ಮನುಷ್ಯನ ಆರೋಗ್ಯದ ಮೇಲೆ ಈ ಸಸ್ಯಗಳು ದುಷ್ಪರಿಣಾಮ ಬೀರುತ್ತವೆ.

ಜಗತ್ತಿನಾದ್ಯಂತ ಅಪೌಷ್ಟಿಕತೆಯಿಂದ ಬಳಲುವಂತೆ ಮಾಡುವ ಅಥವಾ ಕೊಲ್ಲುವ ಕೆಲವು ಸಸ್ಯಗಳನ್ನು ಸಂಶೋಧಕರು ಅಧ್ಯಯನದಲ್ಲಿ ಉಲ್ಲೇಖಿಸಿದ್ದಾರೆ. ಅವುಗಳ ಪಟ್ಟಿ ಇಂತಿವೆ....