ಬಿಗ್‌ಬಾಸ್ ಕನ್ನಡ 11: ಮಂಜು ಮನೆಯ ಹೊಸ ನಾಯಕ, ಮತ್ತೆ ಬೀಪ್ ಪದ ಬಳಸಿದ ರಜತ್‌ಗೆ ಸಂಕಷ್ಟ?

First Published | Nov 22, 2024, 11:44 PM IST

ಬಿಗ್‌ಬಾಸ್ ಕನ್ನಡ 11ರಲ್ಲಿ ಮಂಜು ಕ್ಯಾಪ್ಟನ್ ಆಗಿದ್ದಾರೆ. ರಜತ್‌ ಅವರ ಆಟಿಟ್ಯೂಡ್‌ಗೆ ಟೀಕೆ ವ್ಯಕ್ತವಾಗಿದ್ದು, ಕಿಚ್ಚ ಕ್ಲಾಸ್ ತೆಗೆದುಕೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ. ಹನುಮಂತನಿಗೆ ಕಿಚ್ಚ ಬಟ್ಟೆ ಕಳುಹಿಸಿದ್ದಾರೆ.

ದಿನದಿಂದ ದಿನಕ್ಕೆ ಬಿಗ್‌ಬಾಸ್ ಕನ್ನಡ 11ರ ಆಟದ ಕುತೂಹಲ ಹೆಚ್ಚುತ್ತಿದೆ. ಇದರ ಜೊತೆಗೆ ಮನೆಯಲ್ಲಿ ಜಗಳ,ಕುತಂತ್ರ,ವಾಗ್ವಾದ, ತಂತ್ರಗಾರಿಕೆ ಇದ್ದೇ ಇದೆ. ಈ ವಾರದ ಟಾಸ್ಕ್ ಮುಗಿದಿದ್ದು, ಮಂಜು ಮನೆಯ ಕ್ಯಾಪ್ಟನ್‌ ಆಗಿ ಹೊರಹೊಮ್ಮಿದ್ದಾರೆ. ಮೋಕ್ಷಿತಾ ಅವರು ಉತ್ತಮ ಮತ್ತು ರಜತ್‌ ಕಳಪೆಯಾಗಿದ್ದಾರೆ.

ಈ ವಾರ ಚೈತ್ರಾ, ಮಂಜು, ತ್ರಿವಿಕ್ರಂ, ಮೋಕ್ಷಿತಾ, ಗೌತಮಿ, ಧರ್ಮ ಹಾಗೂ ಹನುಮಂತ ಮನೆಯಿಂದ ಹೊರಹೋಗಲು ನಾಮಿನೇಟ್‌ ಆಗಿದ್ದಾರೆ.ಈ ವಾರವೂ ಘಟಾನುಘಟಿಗಳು ನಾಮಿನೇಟ್ ಆಗಿದ್ದಾರೆ. ಈ ಕಾರಣಕ್ಕೆ ಎಲಿಮಿನೇಟ್ ಆಗೋದು ಯಾರು ಎಂಬ ಕುತೂಹಲ ಈ ವಾರ ಇದೆ.

Tap to resize

ಇನ್ನು ಟಾಸ್ಕ್‌ ನಲ್ಲಿ ಅತೀ ಹೆಚ್ಚು ಬಿಬಿ ಪಾಯಿಂಟ್ ಪಡೆದ ಮಂಜು, ಶೋಭಾ, ಹನುಮಂತ, ಚೈತ್ರಾ, ರಜತ್‌  ಕ್ಯಾಪ್ಟನ್ಸಿ  ಆಡಲು ಆಯ್ಕೆ ಆದರು. ಇದರಲ್ಲಿ ಮಂಜು ಕೊನೆಗೆ ಗೆದ್ದು ಮನೆಯ ನಾಯಕನಾಗಿದ್ದಾರೆ. ಕಳೆದವಾರ ಶೋಭಾ ಶೆಟ್ಟಿ, ರಜತ್‌ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಯೊಳಗೆ ಎಂಟ್ರಿ ಕೊಟ್ಟ ಬಳಿಕ ಮನೆಯಲ್ಲಿ ಬದಲಾವಣೆ ಆಗಿರುವುದು. ಆಟಗಾರರ ಮನಸಿನಲ್ಲಿ ಉಳಿಯುವಿಕೆಯ ಬಗ್ಗೆ ಪ್ರಶ್ನೆ ಎದ್ದಿರುವುದು ಸುಳ್ಳಲ್ಲ. ಇದರ ನಡುವೆ ರಜತ್‌ ಆಟಿಟ್ಯೂಡ್ ಮನೆಯಲ್ಲಿ ಜಗದೀಶ್ ಗಿಂತ ಸ್ವಲ್ಪ ಹೆಚ್ಟೇ ಇದೆ ಎಂದು ತೋರುತ್ತಿದೆ. ಮನೆಯಲ್ಲಿ ಅನೇಕ ಬೀಪ್‌.... ಪದಗಳನ್ನು ಬಳಸಿದ್ದಾರೆ.

ರಜತ್‌ ಅವರ ಆಟಿಟ್ಯೂಡ್ ತುಂಬಾ ಕೆಟ್ಟದಾಗಿದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ರಜತ್‌ ದುರಂಹಂಕಾರದ ಮಾತುಗಳಿಗೆ ವೀಕೆಂಡ್‌ ನಲ್ಲಿ ಕಿಚ್ಚ ಕ್ಲಾಸ್‌ ತೆಗೆದುಕೊಳ್ಳಲೇಬೇಕು ಎಂದು ಸೋಷಿಯಲ್‌ ಮೀಡಿಯಾದಲ್ಲಿ ಒತ್ತಾಯ ಕೇಳಿಬಂದಿದೆ. ಇದರ ಮಧ್ಯೆ ಕಳಪೆ ಎಂದು ಮನೆಮಂದಿ ರಜತ್‌ನನ್ನು ಜೈಲಿಗೆ ಕಳುಹಿಸಿದ್ದಾರೆ. ಇದರಿಂದ ಕೋಪಗೊಂಡ ರಜತ್‌  ಸೆಡೆ ನನ್‌ ಮಕ್ಕಳನ್ನು ಮನೆಯಿಂದ ಹೊರಗೆ ಕಳಿಸಿಯೇ ಹೋಗೋದು ಎಂದು ಹೇಳಿದ್ದಾರೆ. ಹೀಗಾಗಿ ತಮ್ಮ ತಪ್ಪನ್ನು ರಜತ್ ಅರಿತುಕೊಂಡಿಲ್ಲ. ಜೈಲುವಾಸದಲ್ಲೂ ನಾಲಿಗೆ ಹರಿಬಿಟ್ಟಿದ್ದಾರೆ.

ಇನ್ನು ಕಳೆದ ವಾರ ಪಂಚಾಯಿತಿಯಲ್ಲಿ ಹನುಮಂತುಗೆ ಕೊಟ್ಟ ಭರವಸೆಯಂತೆಯೇ ಕಿಚ್ಚ ಸುದೀಪ್‌ ಅವರು ಹನುಮಂತನಿಗೆ ಉತ್ತಮವಾದ ಬಟ್ಟೆಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅಂಡರ್ವೇರ್  ಕೂಡ ಕಳುಹಿಸಿ ಕೊಟ್ಟಿದ್ದಾರೆ. ಇದರ ಖುಷಿ ವ್ಯಕ್ತಪಡಿಸಿದ ಹನುಮಂತ ಕಿಚ್ಚ ಕೊಟ್ಟ ಬಟ್ಟೆ ಹಾಕಿಕೊಂಡು ಖುಷಿಪಟ್ಟಿದ್ದಾರೆ.

ಈ ಹಿಂದೆ  ಜಗದೀಶ್ ಕೆಟ್ಟ ಪದ ಬಳಕೆ ಮಾಡಿದ್ರು ಮನೆಯಲ್ಲಿ ಗಲಾಟೆಗೆ ಕಾರಣವಾದ್ರು ಎಂಬ ಕಾರಣಕ್ಕೆ ಜಗದೀಶ್ ಮತ್ತು ರಂಜಿತ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಲಾಯ್ತು. ಆದರೆ ಟಾಸ್ಕ್‌ವೊಂದರಲ್ಲಿ ಆಟ ಆಡುವಾಗ ರಜತ್, ಗೋಲ್ಡ್‌ ಸುರೇಶ್ ವಿರುದ್ಧ ಅವ್ಯಾಚ ಪದಗಳನ್ನು  ಬಳಸಿದ್ದಾರೆ. ಆದರೂ ಯಾಕಿನ್ನೂ ಅವರನ್ನು ಮನೆಯೊಳಗೆ ಇರಿಸಿಕೊಂಡಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಕೇಳುತ್ತಿದ್ದಾರೆ.

Latest Videos

click me!