ಭಾದ್ರಪದ ಚೌತಿಯೆಂದು ಚಂದ್ರನನ್ನು ಯಾಕಾಗಿ ನೋಡಬಾರದು?

Oct 19, 2020, 12:07 PM IST

ಒಮ್ಮೆ ಗಣೇಶ ಭಾದ್ರಪದ ಶುಕ್ಲ ಚೌತಿಯೆಂದು ಭಕ್ತರ ಮನೆಯ ಕಡುಬುಗಳನ್ನು, ನೈವೇದ್ಯಗಳನ್ನು ಸ್ವೀಕರಿಸಿ ದೇವಲೋಕಕ್ಕೆ ಮರಳುತ್ತಾನೆ. ತಂದೆ-ತಾಯಿಯರಿಗೆ ಅಡ್ಡ ಬೀಳಲು ಹೋಗುತ್ತಾನೆ. ಆಗ ಅವನ ಹೊಟ್ಟೆ ಅಡ್ಡ ಬರುತ್ತದೆ. ಗಣಪತಿಯ ಸ್ಥಿತಿ ನೋಡಿ ಶಿವನ ಶಿರದಲ್ಲಿದ್ದ ಚಂದ್ರ ಜೋರಾಗಿ ನಕ್ಕು ಬಿಡುತ್ತಾನೆ.

ಶಿವನ ದೇವಸ್ಥಾನದಲ್ಲಿ ನಂದಿ ಯಾಕಾಗಿ ಇರುತ್ತಾನೆ?

ಇದರಿಂದ ಕೋಪಗೊಂಡ ತಾಯಿ ಪಾರ್ವತಿ ದೇವಿ ಚಂದ್ರನಿಗೆ ಶಾಪ ಕೊಡುತ್ತಾಳೆ. ನಿನ್ನನ್ನು ಚೌತಿ ದಿನ ಯಾರು ನೋಡುತ್ತಾರೋ ಅವರ ಮೇಲೆ ಆರೋಪ ಬರುವಂತಾಗಲಿ ಎನ್ನುತ್ತಾಳೆ. ಮುಂದೆ ದೇವಾನುದೇವತೆಗಳೆಲ್ಲರೂ ಸೇರಿ ಆಕೆಯ ಕೋಪವನ್ನು ಶಾಂತಗೊಳಿಸಿ, ಶಾಪ ವಿಮೋಚನೆಯಾಗುವಂತೆ ಮಾಡುತ್ತಾರೆ.