ಯಪ್ಪಾ..ಕಣ್ಣರಲ್ಲಿ ರಕ್ತ ಬರ್ತಿದೆ; ಬಿಗ್ ಬಾಸ್ ಧನುಶ್ರೀ ಕೂದಲು ಕಲರ್‌ಗೆ ಕಾಲೆಳೆದ ನೆಟ್ಟಿಗರು!

Published : Apr 25, 2024, 04:06 PM IST

ಧನುಶ್ರೀ ಕೂದಲು ಕಲರ್‌ ಇಷ್ಟ ಆಗ್ತಿಲ್ಲ ಎಂದು ಕಾಲೆಳೆದ ನೆಟ್ಟಿಗರು. ಲುಕ್ ಹೇಗಿದೆ ನೋಡಿ.... 

PREV
17
ಯಪ್ಪಾ..ಕಣ್ಣರಲ್ಲಿ ರಕ್ತ ಬರ್ತಿದೆ; ಬಿಗ್ ಬಾಸ್ ಧನುಶ್ರೀ ಕೂದಲು ಕಲರ್‌ಗೆ ಕಾಲೆಳೆದ ನೆಟ್ಟಿಗರು!

ಟಿಕ್ ಟಾಕ್ - ಇನ್‌ಸ್ಟಾಗ್ರಾಂ ರೀಲ್ಸ್‌ ಕ್ವೀನ್, ಬಿಗ್ ಬಾಸ್ ಸ್ಪರ್ಧಿ ಧನುಶ್ರೀ ತಮ್ಮ ಕೂದಲ ಬಣ್ಣ ಬದಲಾಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮತ್ತು ಫೋಟೋ ಅಪ್ಲೋಡ್ ಮಾಡಿದ್ದಾರೆ.

27

ಸಾಮಾನ್ಯವಾಗಿ ಎರಡು ಮೂರು ತಿಂಗಳಿಗೊಮ್ಮೆ ಏನಾದರೂ ವಿಭಿನ್ನವಾಗಿ ತಮ್ಮ ಕೂದಲು, ಉಗುರು ಬಣ್ಣ ಮತ್ತು ಕಣ್ಣಿನ ರೆಪ್ಪೆಗಳಿಗೆ ವಿನ್ಯಾಸ ಮಾಡಿಸುತ್ತಲೇ ಇರುತ್ತಾರೆ. 

37

ಹಲವರು ನನಗೆ ಮೆಸೇಜ್ ಮಾಡಿ ನಿಮ್ಮ ಕೂದಲು ಕಲರ್ ಮಾಡಿಸಲ್ವಾ ಎಂದು ಕೇಳುತ್ತಿದ್ದಾರೆ ಹೀಗಾಗಿ ಸಂಪೂರ್ಣವಾಗಿ ಒಂದು ಚೇಂಜ್‌ ಇರಲಿ ಎಂದು ಹೇಳುತ್ತಾ ಧನು ತಮ್ಮ ಇಡೀ ಕೂದಲನ್ನು ಬ್ಲಾಂಡ್ ಮಾಡಿಸುತ್ತಾರೆ.

47

ಈ ಬ್ಲಾಂಡ್ ಹೇರ್‌ ಕಲರ್‌ನಲ್ಲಿ ಧನುಶ್ರೀ ಅವರನ್ನು ನೋಡಿದರೆ ಫಾರಿನ್‌ ಹುಡುಗಿ ರೀತಿ ಕಾಣಿಸುತ್ತಾರೆ. ಮೆಚ್ಚುಗೆ ಎಷ್ಟು ಹರಿದು ಬರುತ್ತಿದೆ ಅಷ್ಟೇ ಟೀಕೆ ಎದುರಾಗುತ್ತಿದೆ. ಫ್ಯಾಮಿಲಿ ರಿಯಾಕ್ಷನ್ ಕೂಡ ಪೋಸ್ಟ್ ಮಾಡಿದ್ದಾರೆ.

57

ಕಪ್ಪು ಬಣ್ಣ ಮಾಡಿಸಿಕೊಳ್ಳಬೇಕಿತ್ತು ಎಂದು ತಂದೆ ಹೇಳಿದ್ದಾರೆ. ಯಪ್ಪಾ ಚೆನ್ನಾಗಿಲ್ಲ ಎಂದು ತಾಯಿ ಮುಖಕ್ಕೆ ಉತ್ತರ ಕೊಟ್ಟಿದ್ದಾರೆ. ಇನ್ನು ಅತ್ತಿಗೆ ಸಂಪೂರ್ಣವಾಗಿ ಶಾಕ್ ಆಗಿದ್ದಾರೆ.

67

ಇನ್ನು ಧನುಶ್ರೀ ಹೇರ್‌ ಕಲರ್‌ ನೋಡಿ ನಮಗೆ ಕಣ್ಣಲ್ಲಿ ರಕ್ತ ಬರುತ್ತಿದೆ, ಮೊದಲೇ ಮೇಕಪ್‌ ಇಲ್ಲದೆ ಮುಖ ನೋಡಲು ಭಯವಾಗುತ್ತದೆ ಈಗ ಇದೊಂದು ಬೇರೆ ಎಂದು ತುಂಬಾ ಟೀಕೆ ವ್ಯಕ್ತವಾಗುತ್ತಿದೆ. 

77

ಅಪ್ಪ ಈ ಕಲರ್ ಬೇಡ ಎನ್ನುತ್ತಿದ್ದಾರೆ ಹೀಗಾಗಿ ನಾನು ಸ್ವಲ್ಪ ದಿನಗಳ ನಂತರ ಕೂದಲು ಬಣ್ಣವನ್ನು ಡಿಮ್ ಅಂದ್ರೆ ಕಡಿಮೆ ಮಾಡಿಸುತ್ತೀನಿ ಎಂದು ಸ್ವತಃ ಧನುಶ್ರೀ ವಿಡಿಯೋ ಮಾಡಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories