ಸರ್ಪಗಳಿಗೂ, ಗರುಡಕ್ಕೂ ಯಾಕೆ ಶತ್ರುತ್ವ.? ದೇವಿ ಭಾಗವತದ ಕತೆ ಹೀಗಿದೆ

May 2, 2021, 5:00 PM IST

ಕಶ್ಯಪನ ಪತ್ನಿಯರಾದ ಕದ್ರು ಹಾಗೂ ವಿರತ ಒಮ್ಮೆ ಸಮುದ್ರ ತೀರದಲ್ಲಿ ವಿಹಾರ ಮಾಡುತ್ತಿದ್ದರು. ಆಗ ಅವರಿಗೆ ಸೂರ್ಯನ ಕುದುರೆ ಕಾಣಿಸುತ್ತದೆ. ಇಬ್ಬರೂ ಆ ಕುದುರೆ ಎಷ್ಟು ಬೆಳ್ಳಗಿದೆ ಅಂದುಕೊಳ್ಳುತ್ತಾರೆ. ಆಗ ಕದೃ ಬಾಲ ಬೆಳ್ಳಗಿಲ್ಲವಲ್ಲ ಎನ್ನುತ್ತಾಳೆ. ವಾಗ್ವಾದ ನಡೆಯುತ್ತದೆ. ಕದ್ರು ಹೀಗೆ ಹೇಳುತ್ತಾಳೆ. ಈ ಪಂಥದಲ್ಲಿ ಸೋತವರಿಗೆ ಜೀವನ ಪರ್ಯಂತ ದಾಸಿಯಾಗಿರಬೇಕು ಎನ್ನುತ್ತಾಳೆ. ವಿರತ ಒಪ್ಪಿಕೊಳ್ಳುತ್ತಾಳೆ. ಅಂದು ರಾತ್ರಿ ಕದ್ರು ಕುಮಾರರಾದ ನಾಗಕುಮಾರನನ್ನು ಕರೆದು, ಕುದುರೆ ಬಾಲವನ್ನು ಕಪ್ಪಗೆ ಮಾಡಿ ಎನ್ನುತ್ತಾಳೆ. ಅದಕ್ಕೆ ಕುಮಾರರು ಒಪ್ಪಲಿಲ್ಲ. ಜನಮಜೇಯ ರಾಜ ಮಾಡುವ ಯಾಗದಲ್ಲಿ ಬಿದ್ದು ಸತ್ತು ಹೋಗಿ ಎಂದು ಶಪಿಸುತ್ತಾಳೆ.