Mar 13, 2021, 5:39 PM IST
ಬೆಂಗಳೂರು (ಮಾ. 12): ಗುಮ್ಮಟನಗರಿ ವಿಜಯಪುರಕ್ಕೂ, ಪರಮಾತ್ಮ ಶಿವನಿಗೂ ಎಲ್ಲಿಲ್ಲದ ನಂಟು. ಯಾಕಂದ್ರೆ ದೇಶದಲ್ಲೆ ಅಪರೂಪದ ಶಿವಲಿಂಗಗಳು ವಿಜಯಪುರದಲ್ಲಿವೆ. ತಲೆಯ ಮೇಲೆ ಶ್ರೀಚಕ್ರ ಹೊಂದಿರುವ ದೇಶದ ವಿರಳ ಲಿಂಗಗಳಲ್ಲಿ ಇಲ್ಲಿರುವ ಶಿವಲಿಂಗವು ಒಂದು. ಇನ್ನು ವಿಚಿತ್ರ ಎನಿಸುವಂತ ಉಲ್ಟಾ ಶಿವಲಿಂಗ ಕೂಡ ಇಲ್ಲಿದೆ. ಇಲ್ಲಿಗೆ ಭೇಟಿ ನೀಡಿ, ಶಿವನ ದರ್ಶನ ಪಡೆದರೆ ಒಳಿತಾಗುವುದು ಎಂಬ ನಂಬಿಕೆ ಇದೆ..!