'ಗುರು ಪೂರ್ಣಿಮೆ' ಯಂದು ದತ್ತಾತ್ರೇಯರನ್ನು ಯಾಕಾಗಿ ಸ್ಮರಿಸಬೇಕು? ಇಲ್ಲಿದೆ ಉತ್ತರ

Jul 11, 2020, 6:27 PM IST

ನಮ್ಮ ಸಂಸ್ಕೃತಿ, ಸಂಪ್ರದಾಯದಲ್ಲಿ ಗುರು ವಿಗೆ ದೇವರ ಸ್ಥಾನ ನೀಡಿದ್ದೇವೆ.  ಎಂದೆಂದಿಗೂ ಮುಗಿಯದ ಅವರ ಋಣವನ್ನು ತೀರಿಸುವುದಾರೂ ಹೇಗೆ? ಇವರಿಗೆ ನಾವು ಕೊಡುವುದಾದರೂ ಏನು? ಅವರ ಋಣವನ್ನು ಅಲ್ಪವೇ ಆಗಲಿ ಅವರ ನೆನಪಿಗಾಗಿ ಪ್ರತೀವರ್ಷ ಆಷಾಢ ಮಾಸದ ಹುಣ್ಣಿಮೆಯನ್ನು 'ಗುರು ಪೌರ್ಣಿಮೆ' ಎಂದು ಆರಿಸುತ್ತಾರೆ.

ಪವಿತ್ರ ಹಾಗೂ ಪಾವನ ತಿರ್ಥ ಕ್ಷೇತ್ರವಾಗಿರುವ ಶ್ರೀಕ್ಷೇತ್ರ ಗಾಣಗಾಪುರ ಮಠ

ನಮಗೆ ಜ್ಞಾನವನ್ನು ಕೊಡುವ ಮತ್ತು ಸುಸಂಸ್ಕೃತರನ್ನಾಗಿ ಮಾಡುವ ಗುರುವಿಗೆ ಕೃತಜ್ಞತೆಯಿಂದ ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ. ಗುರು ಪೂರ್ಣಿಮೆಯನ್ನು ವ್ಯಾಸ ಪೂರ್ಣಿಮೆ ಎಂತಲೂ ಕರೆಯುತ್ತಾರೆ. ನಮ್ಮ ಬದುಕಿಗೆ ದಾರಿ ತೋರುವ, ಬದುಕಿಕೊಂಡು ಅರ್ಥ ಕೊಡುವ, ತಿದ್ದಿ ತೀಡುವವರೇ ಗುರು. ಗುರು ಪೂರ್ಣಿಮೆಯಂದು ಗುರು ತತ್ವದ ಬಗ್ಗೆ , ಗುರು ದತ್ತಾತ್ರೇಯರ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ ಬನ್ನಿ..!