ಬರ್ತಡೆ ದಿನ ಪಕ್ಕ ನಿಂತವಗೆ ದರ್ಶನ್ ಕಪಾಳ ಮೋಕ್ಷ ಇದೊಂದು ಪಾಠ!

Feb 16, 2020, 6:08 PM IST

ಬೆಂಗಳೂರು(ಫೆ. 16)  ಚಾಲೆಂಜಿಂಗ್ ಸ್ಟಾರ್, ಸ್ಯಾಂಡಲ್ ವುಡ್ ಸುಲ್ತಾನ ದರ್ಶನ್ ಜನ್ಮದಿನ ಅಂದರೆ ಕೇಳಬೇಕೆ ಅದು ಅಭಿಮಾನಿಗಳಿಗೆ ಹಬ್ಬ. ದರ್ಶನ್ ಜನ್ಮದಿನಕ್ಕೆ ಅಭಿಮಾನಿಗಳ ಸಾಗರವೇ ಹರಿದು ಬಂದಿತ್ತು.

ರಾಬರ್ಟ್ ಸಿನಿಮಾದಿಂದ ಬಂತು ಶುಭ ಸುದ್ದಿ

ಈ ವೇಳೆ ದರ್ಶನ್ ಅಭಿಮಾನಿಗಳಿಗೆ ದರ್ಶನ ನೀಡಿದರು. ಜತೆಗೆ ಒಬ್ಬೊಬ್ಬರಿಗೂ ಕೈ ನೀಡಿ ಮಾತನಾಡಿಸಿ ಮುಂದೆ ಕಳುಹಿಸುತ್ತಿದ್ದರು. ಈ ವೇಳೆ ದರ್ಶನ್ ಪಕ್ಕದಲ್ಲಿದ್ದ ವ್ಯಕ್ತಿ ಅಭಿಮಾನಿಗಳನ್ನು ಮುಂದೆ ತಳ್ಳಿದಾಗ ಕೊಂಚ ಕೋಪಗೊಂಡ ದಾಸ ಆತನ ತಲೆಗೆ ಒಂದು ಏಟು ಹಾಕಿ ಅಭಿಮಾನಿಗಳೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬ ಪಾಠ ಹೇಳಿದರು. ದಾಸ ದರ್ಶನ್ ಅವರಿಗೆ ನಮ್ಮ ಕಡೆಯಿಂದಲೂ ಜನ್ಮದಿನದ ಶುಭಾಶಯ.