ಕಾರಿಂದ ಇಳಿಯುವಾಗ ಬಾಡಿಗಾರ್ಡ್‌ ಮೇಲೆ ಬಿದ್ದ ನಿಸಾ: ವಿಡಿಯೋ ಸಖತ್‌ ವೈರಲ್‌

Apr 27, 2023, 3:35 PM IST

ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಮತ್ತು ಕಾಜೋಲ್ ಪುತ್ರಿ ನಿಸಾ ಕಾರಿಂದ ಇಳಿಯುವಾಗ ಬಾಡಿಗಾರ್ಡ್ ಮೇಲೆ ಬಿದ್ದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್‌ ವೈರಲ್‌ ಆಗಿದೆ. ಇತ್ತೀಚೆಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡ ನಿಸಾ ಅದ್ದೂರಿ ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ. ಭಾನುವಾರ ತನ್ನ ಗೆಳೆಯರಿಗೆ ನಿಸಾ ಪಾರ್ಟಿ ಆಯೋಜಿಸಿದ್ದರು. ಮುಂಬೈನ ಬಾಂದ್ರಾದಲ್ಲಿರುವ ರೆಸ್ಟೋರೆಂಟ್ ಬಾರ್‌ನಲ್ಲಿ ಅದ್ದೂರಿ ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ. ಕಾರಿನಿಂದ ಇಳಿಯಾವಾಗ ನಿಸಾ ಜಾರಿದ್ದಾರೆ. ಕೆಳಗೆ ಬೀಳುವುದರಲ್ಲಿದ್ದ ನಿಸಾ ಜಾರಿ ಮುಂದೆ ನಿಂತಿದ್ದ ಭದ್ರತಾ ಸಿಬ್ಬಂದಿಗೆ ಹೋಗಿ ಡಿಕ್ಕಿ ಹೊಡೆದರು. ಈ ವಿಡಿಯೋಗೆ ಅಭಿಮಾನಿಗಳು ತರಹೇವಾರಿ ಕಾಮೆಂಡ್‌ ಮಾಡುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ: ಸಮಂತಾ 10ನೇ ತರಗತಿ ಮಾರ್ಕ್ಸ್‌ಕಾರ್ಡ್ ವೈರಲ್‌: ನಟಿ ಪಡೆದ ಅಂಕವೆಷ್ಟು ಗೊತ್ತಾ?