IndieScoop: ಅಪ್ಪ ಮಗ್ಗಳ ಜುಗಲ್‌ಬಂಧಿ, ಈ ವಾರದ ಮ್ಯೂಸಿಕ್ ಬ್ಯಾಂಡ್ ಅತಿಥಿ

Apr 7, 2023, 10:24 PM IST

ಬೆಂಗಳೂರು (ಏ.7):  Indigomusic.com ನಲ್ಲಿ IndieScoop ನ ಮತ್ತೊಂದು ಆವೃತ್ತಿಯಲ್ಲಿ ದೇಶಾದ್ಯಂತ  ಸ್ವತಂತ್ರ ಕಲಾವಿದರು ಹೊಚ್ಚ ಹೊಸ ಸಂಗೀತವನ್ನು ಪ್ರದರ್ಶಿಸಿದ್ದಾರೆ.  ದುಬೈನಿಂದ  ತಂದೆ-ಮಗಳು ಜೋಡಿ V.I.S.H. ಮತ್ತು ಕೀರಾ ಅವರು  'ದಿ ನಕಾಮಾ ಥಿಯರಿ' ಮೂಲಕ ತಮ್ಮ ಪ್ರದರ್ಶನ ನೀಡಿದ್ದಾರೆ.  ಮತ್ತೊಬ್ಬ ಸ್ವತಂತ್ರ ಕಲಾವಿದೆ ಕೆನಡಾದಲ್ಲಿ ನೆಲೆಸಿರುವ ನೀಲಾ ಎಂಬಾಕೆ ಮೂಲತಃ ಭಾರತೀಯಳಾಗಿದ್ದಾಳೆ. ಹೊಚ್ಚ ಹೊಸ ಟ್ರ್ಯಾಕ್ 'ಯೂ ವಿಲ್ ನೆವರ್ ನೋ' ಅನ್ನು ಬಿಡುಗಡೆ ಮಾಡಿದ್ದಾರೆ.