ಯೋಗೇಶ್ವ‌ರ್‌ಗೆ ಲೂಸ್‌ ಟಾಕ್‌ ಬಿಡಿ ಎಂದಿದ್ದೆ: ಕುಮಾರಸ್ವಾಮಿ

By Kannadaprabha News  |  First Published Oct 31, 2024, 8:19 PM IST

ನನ್ನ ಕಾಲದಲ್ಲಿ ಬಿಜೆಪಿ ಸರ್ಕಾರ ಕೊಟ್ಟ ಅನುದಾನಕ್ಕೆ ಈಗ ಅವರು ಪೂಜೆ ಮಾಡಿದ್ದಾರೆ. ರಾಮನಗರ ಚನ್ನಪಟ್ಟಣ ಹುಬ್ಬಳಿ ಧಾರವಾಡ ತರ ಅವಳಿ ನಗರ ಆಗುವುದರಲ್ಲಿ ಅನುಮಾನ ಬೇಡ. ರಾಮನಗರ ಚನ್ನಪಟ್ಟಣ ಸೇರಿ ಮಹಾನಗರ ಪಾಲಿಕೆ ಮಾಡಿದ್ರೆ ಬೆಳವಣಿಗೆ ಆಗುತ್ತೆ ಎಂದ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ  
 


ಚನ್ನಪಟ್ಟಣ(ಅ.31):  ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದು ನಾನೇ, ಎನ್‌ಡಿಎ ಮೈತ್ರಿ ಮಾಡಿದ್ದು ನಾನೇ, ಮಂಜುನಾಥ್ ಗೆಲ್ಲಿಸಿದ್ದು ನಾನೇ ಎಂದು ಹೇಳಿಕೊಂಡು ಓಡಾಡುತ್ತಿದ್ದ ಯೋಗೇಶ್ವ‌ರ್ ಅವರಿಗೆ ಲೂಸ್ ಟಾಕ್ ಬಿಡಿ ಎಂದಿದ್ದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ವಿರುದ್ಧ ವಾಗ್ದಾಳಿ ನಡೆಸಿದರು. 

ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು,ಚನ್ನಪಟ್ಟಣದ ಎನ್‌ಡಿಎ ಟಿಕೆಟ್‌ಗೆ ಸಂಬಂಧಿಸಿದಂತೆ ಜೆ.ಪಿ.ನಡ್ಡಾರವರು ಜೆಡಿಎಸ್‌ನಿಂದ ಸ್ಪರ್ಧೆ ಮಾಡಲಿ ಎಂದರು, ಎಲ್ಲ ಪ್ರಹಸನದ ನಂತರ ಕೊನೆಗೆ ಪ್ರಹ್ಲಾದ್ ಜೋಶಿ ಬಿಜೆಪಿ ಅಭ್ಯರ್ಥಿ ಆಗಲು ತಿಳಿಸಿದರು. ಆದರೆ, ಕೊನೆಗೆ ಎಲ್ಲರಿಗೂ ಟೋಪಿ ಹಾಕಿದ ಅವರು ಕಾಂಗ್ರೆಸ್‌ಗೆ ಹೋದರು ಎಂದು ಆರೋಪಿಸಿದರು. ನಾನು ನಿಖಿಲ್‌ ನಿಲ್ಲಿಸಬೇಕು ಅಂದುಕೊಂಡಿರಲಿಲ್ಲ. ಈ ವಿಚಾರಕ್ಕೆ ನನ್ನ ಮಗನಿಗೂ ನನಗೂ ದೊಡ್ಡಗಲಾಟೆ ಆಯ್ತು. ಕೊನೆಗೆ ಕಣ್ಣೀರು ಹಾಕೊಂಡು ಒಮ್ಮೊಂಡ. ನಿಜವಾದ ಭಗೀರಥ ಸದಾನಂದಗೌ ಡಹಾಗೂ ಬಸವ ರಾಜ ಬೊಮ್ಮಾಯಿಯವರು, ಬಿಜೆಪಿ ಸರ್ಕಾರ ಇದ್ದಾಗ ನನ್ನ ಎಲ್ಲ ಲೆಟರ್‌ಗೂ ಕೆಲಸ ಆಗಿವೆ. ಯಡಿ ಯೂರಪ್ಪ, ಬೊಮ್ಮಾಯಿ ಸೇರಿದಂತೆ ಸಚಿವರು ಕೆಲಸ ಮಾಡಿಕೊಟ್ಟಿದ್ದಾರೆ.ಆದರೆ,ಇವರುಅವರೇಭಗೀರಥ ಎನುತ್ತಿದ್ದಾರೆ ಎಂದರು. 

Tap to resize

Latest Videos

undefined

ಕುಮಾರಸ್ವಾಮಿಗೆ ಹಳ್ಳಿಗಳ ಹಸರೇ ಗೊತ್ತಿಲ್ಲ ಅಂದ್ರೆ, ಅವರ ಮಗನಿಗೆ ಏನು ಗೊತ್ತು: ಯೋಗೇಶ್ವ‌ರ್

ಡಿಕೆಶಿ ವಿರುದ್ಧ ವಾಗ್ದಾಳೆ: 

ಕಳೆದ ನಾಲ್ಕು ತಿಂಗಳಿಂದ ಅಣ್ಣ ತಮ್ಮಂದಿರು 20 ಬಾರಿ ಬಂದಿದ್ದೀವಿ ಅಂತಾರೆ. ಯಾವ ಕೆಲಸ ಮಾಡಿದ್ದಾರೆ ಹೇಳಬೇಕು. ಯುಜಿಡಿ ಕೆಲಸ ಮಾಡಲು ಕಂಟ್ರಾಕ್ಟರ್‌ ಅನ್ನು ಬಂದು ಭೇಟಿ ಮಾಡಿ ಅಂತಾರೆ. ಇವರು ಶಂಕುಸ್ಥಾಪನೆ ಮಾಡಿರೋದಕ್ಕೆ ಯಾವುದಕ್ಕೂ ಸರ್ಕಾರಿ ಆದೇಶ ಆಗಿಲ್ಲ, ಹಣವೂ ಬಿಡುಗಡೆ ಆಗಿಲ್ಲ. ನನ್ನ ಕಾಲದಲ್ಲಿ ಬಿಜೆಪಿ ಸರ್ಕಾರ ಕೊಟ್ಟ ಅನುದಾನಕ್ಕೆ ಈಗ ಅವರು ಪೂಜೆ ಮಾಡಿದ್ದಾರೆ. ರಾಮನಗರ ಚನ್ನಪಟ್ಟಣ ಹುಬ್ಬಳಿ ಧಾರವಾಡ ತರ ಅವಳಿ ನಗರ ಆಗುವುದರಲ್ಲಿ ಅನುಮಾನ ಬೇಡ. ರಾಮನಗರ ಚನ್ನಪಟ್ಟಣ ಸೇರಿ ಮಹಾನಗರ ಪಾಲಿಕೆ ಮಾಡಿದ್ರೆ ಬೆಳವಣಿಗೆ ಆಗುತ್ತೆ ಎಂದರು. 

ಉಪಚುನಾವಣೆ ಗೆಲ್ಲಿಸಿ: ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ರಾಜ್ಯದಿಂದ ಕಿತ್ತೊಗೆಯಬೇಕು ಅಂತ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಕಾಂಗ್ರೆಸ್‌ನವರು ಮೋದಿ ಸರ್ಕಾರ ಅಸ್ಥಿರಗೊಳಿಸಬೇಕು ಅಂತ ಮಾಡ್ತಿದ್ದಾರೆ. ಅದಕ್ಕೆ ಶಕ್ತಿ ತುಂಬಬೇಕು ಅಂದ್ರೆ ಮೂರು ಉಪಚುನಾವಣೆ ಗೆಲ್ಲಬೇಕು ಎಂದರು. ಕಾಂಗ್ರೆಸ್ ಸರ್ಕಾರವನ್ನು ನಾವು ತೆಗೆಯಬೇಕಿಲ್ಲ. ಅವ್ರ ಈಗ ಸರ್ಕಾರ ಬೀಳಿಸಿಕೊಳ್ತಾರೆ. ನಾವು ಏನು ಮಾಡೋ ಅಗತ್ಯ ಇಲ್ಲ. ಈ ಸರ್ಕಾರ ಉಳಿಯಲ್ಲ. 6 ತಿಂಗಳು ಗವರ್ನರೂಲ್ ಬರಬಹುದು ಎಂದು ಭವಿಷ್ಯ ನುಡಿದರು. 

ಚನ್ನಪಟ್ಟಣ ಉದ್ಧಾರ ಮಾಡ್ತಾರೆಂದರೆ ನಂಬೀರಾ?:

ವಿಪಕ್ಷ ನಾಯಕ ಆ‌ರ್.ಅಶೋಕ್‌ ಮಾತನಾಡಿ, ಅಧಿಕಾರಕ್ಕೆ ಬಂದು ಇಷ್ಟು ದಿನವಾದರೂ ಚನ್ನಪಟ್ಟಣ, ರಾಮ ನಗರಕ್ಕೆ ಬಾರದ ಮುಖ್ಯಮಂತ್ರಿಗಳು ನಾನು ಚನ್ನ ಪಟ್ಟಣವನ್ನು ಉದ್ಧಾರಮಾಡುತ್ತೇನೆ ಎಂದು ಹೇಳಿದರೆ ನಂಬಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಡಿ.ಕೆ.ಶಿವಕುಮಾರ್‌ ಇಲ್ಲಿ ಚುನಾವಣೆಗೆ ನಿಲ್ಲುವುದಾಗಿ ಹೇಳಿ ದ್ದರು. ಜನರೂ ಅದೇ ರೀತಿ ಭಾವಿಸಿದ್ದರು. ಈಗ ಕೈಕೊಟ್ಟ ಅನ್ನಬೇಕಲ್ಲವೇ? ಕೈಕೊಟ್ಟು ಹೋದವರಿಗೆ ಮತ ಕೊಡಬೇಕೇ ಎಂದು ಯೋಚಿಸಿ ಎಂದರು. 
ಸರ್ಕಾರದ ಅವಧಿ ಈಗಾಗಲೇ ಸುಮಾರು ವರ್ಷ ಮುಗಿದಿದೆ. ಸರಕಾರ ಇದ್ದರೆ 3 ವರ್ಷ ಆಯುಸ್ಸಿದೆ. ಮುಡಾ ಮತ್ತಿತರ ಹಗರಣದಿಂದ ಹೆಚ್ಚು ಕಮ್ಮಿ ಆದರೆ ಇನ್ನೊಂದು ವರ್ಷಕ್ಕೆ ಚುನಾವಣೆ ಬರಬಹುದು. ಮುಳುಗಿ ಹೋಗುವ, ಬಿದ್ದು ಹೋಗುವ ಕಾಂಗ್ರೆಸ್ಸಿಗೆ ರೆಲ್ಲರೂ ಇದನ್ನು ಜನಕ್ಕೆ ತಿಳಿಸಿ ಎನ್‌ಡಿಎ ಅಭ್ಯರ್ಥಿ ನಿಖಿಲ್‌ರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು. 

ಮುಖ್ಯಮಂತ್ರಿ ಬಡವರಿಗೆ ನಿವೇಶನ ಕೊಡುವ ಬದಲು ಕುಟುಂಬಕ್ಕೆ ಸೈಟ್ ಕೊಡಿಸಿಸಿಕ್ಕಿ ಹಾಕಿಕೊಂಡಿ ದ್ದಾರೆ. ಮುಡಾದಲ್ಲೂ ವಾಲ್ಮೀಕಿ ನಿಗಮದಲ್ಲೂ ಲೂಟಿ ಮಾಡಿದ ಲೂಟಿಕೋರ ಟಿಕೋರ ಸರ್ಕಾರವನ್ನು ಬೆಂಬ ಲಿಸಬೇಡಿ. ಅದರಿಂದ ಲೂಟಿಕೋರರಿಗೆ ಸರ್ಟಿಫಿಕೇಟ್ ಕೊಟ್ಟಂತಾಗಲಿದೆ ಎಂದು ಎಚ್ಚರಿಸಿದರು. ಬಿಜೆಪಿ ಅವಧಿಯ ಸರ್ಕಾರದಲ್ಲಿ ಆದ ಅಭಿವೃದ್ಧಿ ಮತ್ತು ಕಾಂಗ್ರೆ ಸ್ಸಿನ ಅಭಿವೃದ್ಧಿ ಶೂನ್ಯತೆ ಬಗ್ಗೆ ಚರ್ಚೆಗೆ ನಾವು ಸಿದ್ದ ಎಂದು ಸವಾಲೆಸೆದರು.

ಸೀಟು ಹೋಗುವ ಭಯ: 

ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಹೆಚ್ಚಿನ ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ಯಾವಾಗ ನನ್ನ ಸೀಟು ಹೋಗುತ್ತೋ, ಏನಾಗುತ್ತೋ ಎಂಬ ಆತಂಕ ಕಾಡುತ್ತಿದೆ. ಅವರು ಮಾಡಿದ ಕರ್ಮದ ಕಾರಣಕ್ಕೆ ಕಾಂಗ್ರೆ ಸ್ಸಿಗರು ಆತಂತ್ರ ದಲ್ಲಿದ್ದು, ಯಾವ ಕ್ಷಣದಲ್ಲೂ ಏನು ಬೇಕಾದರೂ ಆಗಬಹುದು ಎಂದರು.

ರಾಜ್ಯದ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಅಭಿವೃದ್ಧಿಯಂತೂ ಕಾಣುತ್ತಿಲ್ಲ. ಕಾಂಗ್ರೆಸ್ ಸರಕಾರ ಬೆಳೆಗಾರ ಮತ್ತು ಬಳಕೆದಾರರ ಮಧ್ಯದಲ್ಲಿ ದಲ್ಲಾಳಿ ಯನ್ನು ತಂದುವ್ಯಾಪಾರಿಗೆ ಅನುಕೂಲ ಮಾಡುವಂಥ ಸರಕಾರ ಎಂದು ದೂರಿದರು. ಈ ವೇಳೆ ಸಂಸದ ಸಿ. ಎನ್.ಮಂಜುನಾಥ್, ಮಾಜಿ ಸಚಿವ ಕೆ.ಎನ್. ನಾರಾಯಣಗೌಡ, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಮುಂತಾದವರು ಇದ್ದರು.

ಎಚ್‌ಎಂಟಿ ಜಾಗಕ್ಕೆ ಈಶ್ವರ್ ಖಂಡ್ರೆ ಅತಿಕ್ರಮ ಪ್ರವೇಶ: ಎಚ್.ಡಿ.ಕುಮಾರಸ್ವಾಮಿ

ಕಾಂಗ್ರೆಸ್‌ನವರು ಕಟುಕರು: ಅಶೋಕ್ 

ಕುಮಾರಸ್ವಾಮಿ ಭಾವನಾತ್ಮಕ ಜೀವಿ. ಆದರೆ ಕಾಂಗ್ರೆಸ್‌ನವರು ಕಟುಕರು, ಅದಕ್ಕೆ ಟೀಕೆ ಮಾಡುತ್ತಾರೆ. ದೇವೇಗೌಡರ ವಯಸ್ಸಿನ ಬಗ್ಗೆ ಟೀಕೆ ಮಾಡುತ್ತಾರೆ. ಆ್ಯಂಬುಲೆನ್ಸ್‌ನಲ್ಲಿ ಬರುತ್ತಾರೆ ಎನ್ನುತ್ತಾರೆ ಇವರಿಗೆ ವಯಸ್ಸೇ ಆಗಲ್ವಾ? ಇವರಿಗೆ ನಾಚಿಕೆಯಾಗಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ರೈತರ ಜಮೀನನ್ನ ಯಾರೂಕಬಳಿಸಲು ಆಗಲ್ಲ. ಪ್ರಧಾನಿಮೋದಿಪಾರ್ಲಿಮೆಂಟ್ ನಲ್ಲಿಬಿಲ್ ಪಾಸ್ ಮಾಡುತ್ತಾರೆ. ಇಲ್ಲಿರುವ ರೈತರು ಎಚ್ಚರಿಕೆಯಿಂದ ಇರಬೇಕು ನಿಮ್ಮ ಜಮೀನಿಗೂ ವಕ್ ಬೋರ್ಡ್ ಎಂದು ಬರಬಹುದು ಎಂದರು. ಚನ್ನಪಟ್ಟಣದಲ್ಲಿ ನೀರಾವರಿ ಆಗಿದ್ದು ಬಿಜೆಪಿ ಸರ್ಕಾರ. ಬಸವರಾಜ ಬೊಮ್ಮಾಯಿ, ಸದಾನಂದಗೌಡರು ಸಿಎಂ ಆಗಿದ್ದಾಗ ಹಣ ಬಿಡುಗಡೆ ಮಾಡಲಾಯಿತು. ಯೋಗೇಶ್ವರ್ ಈ ಯೋಜನೆಗೆ ಕಾರಣರಲ್ಲ. ಎಂಜಿನಿ ಯರ್‌ ವೆಂಕಟೇಗೌಡರು ಎಂಬುವರಿಂದ ಈ ಯೋಜನೆ ಆಗಿದೆ. ಯೋಗೇಶ್ವರ್‌ನ ಡೀಲ್ ಮಾಡಿದ್ದು ಕೆ.ಜೆ.ಜಾರ್ಜನ್,  ಹಿಂದೆಯೇ ಡೀಲ್ ಆಗಿತ್ತು. ಕುಮಾರಣ್ಣ ಸೀಟ್ ಬಿಟ್ಟು ಕೊಡಲು ಸಿದ್ಧರಿದ್ದರು. ಆದರೆ, ಅವರು ಕಾಂಗ್ರೆಸ್‌ಗೆ ಹೋದರು ಎಂದರು. 

click me!