೨೦೨೫ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೆಗಾ ಹರಾಜಿನ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಮ್ಮ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಎಂಎಸ್ ಧೋನಿಯವರನ್ನು ಉಳಿಸಿಕೊಂಡಿದೆ.
ಮುಂಬೈ: 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೆಗಾ ಹರಾಜಿನ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಮ್ಮ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಎಂಎಸ್ ಧೋನಿಯವರನ್ನು ಉಳಿಸಿಕೊಂಡಿದೆ. ಆದ್ರೆ ಕೇವಲ 4 ಕೋಟಿ ರೂಪಾಯಿಗೆ ಧೋನಿಯವರನ್ನು ಉಳಿಸಿಕೊಂಡಿದ್ದರ ಬಗ್ಗೆ ಚರ್ಚೆಗಳು ಆರಂಭಗೊಂಡಿವೆ. 43 ವರ್ಷದ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಅನ್‌ಕ್ಯಾಪಡ್ ಪ್ಲೇಯರ್ ಆಗಿದ್ದಾರೆ. ಕಳೆದ ಐದು ವರ್ಷಗಳಿಂದ ಮಹೇಂದ್ರ ಸಿಂಗ್ ಧೋನಿ ಯಾವುದೇ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಅನ್‌ಕ್ಯಾಪ್ ಪ್ಲೇಯರ್ ಹರಾಜು ಪ್ರಕ್ರಿಯೆಯ ನಿಯಮಗಳಲ್ಲಿ ಬದಲಾವಣೆ ತಂದಿದ್ದರಿಂದ ಚೆನ್ನೈಗೆ ಧೋನಿಯವರನ್ನು ಉಳಿಸಿಕೊಳ್ಳಲು ಸಾಧ್ಯವಾಯ್ತು. ಧೋನಿಯನ್ನು ಉಳಿಸಿಕೊಂಡಿದ್ದರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಎಂಎಸ್ ಧೋನಿ ಜೊತೆಗೆ ರುತುರಾಜ್ ಗಾಯಕ್ವಾಡ್ ಅವರನ್ನು 18 ಕೋಟಿ, ಶ್ರೀಲಂಕಾದ ಮಥೀಶ ಪತಿರಾನ 13 ಕೋಟಿ., ಶಿವಂ ದುಬೆ 12 ಕೋಟಿ ರೂ., ರವೀಂದ್ರ ಜಡೇಜಾ ಅವರನ್ನು 18 ಕೋಟಿ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ಉಳಿಸಿಕೊಂಡಿದೆ.
ಇದನ್ನೂ ಓದಿ: ಆರ್‌ಸಿಬಿ ತಂಡದ ನಾಯಕತ್ವಕ್ಕೆ ಹಿಂದಿರುಗಿದ ವಿರಾಟ್ ಕೊಹ್ಲಿ!
ಆಟಗಾರರನ್ನು ಉಳಿಸಿಕೊಳ್ಳಲು 75 ಕೋಟಿ ಖರ್ಚು ಮಾಡಿದ ಮುಂಬೈ
ಇನ್ನು ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಇಬ್ಬರನ್ನು ಸಹ ಉಳಿಸಿಕೊಂಡಿದೆ. ಜಸ್ಪ್ರೀತ್ ಬುಮ್ರಾಗೆ 18 ಕೋಟಿ ರೂಪಾಯಿ ನೀಡಿ ಮುಂಬೈ ಇಂಡಿಯನ್ಸ್ ಉಳಿಸಿಕೊಂಡಿದೆ. ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯಗೆ ತಲಾ 16.35 ಕೋಟಿ ನೀಡಿದ್ರೆ, ರೋಹಿತ್ ಶರ್ಮಾಗೆ 16.30 ಕೋಟಿ ಮತ್ತು ತಿಲಕ್ ವರ್ಮಾಗೆ 8 ಕೋಟಿ ರೂಪಾಯಿ ನೀಡಿ ಉಳಿಸಿಕೊಳ್ಳಲಾಗಿದೆ. ಇದುವರೆಗೂ ಮುಂಬೈ ಇಂಡಿಯನ್ಸ್ 75 ಕೋಟಿ ಖರ್ಚು ಮಾಡಿದ್ದು, 45 ಕೋಟಿ ಬಾಕಿ ಉಳಿದಿದೆ. 2025ರ ಹರಾಜು ಪ್ರಕ್ರಿಯೆಯಲ್ಲಿ 45 ಕೋಟಿಯಲ್ಲಿ ಉಳಿದ ಆಟಗಾರರನ್ನು ಖರೀದಿಸಬೇಕಾಗುತ್ತದೆ.
ಆರು ಆಟಗಾರರನ್ನು ಉಳಿಸಿಕೊಂಡ ಕೆಕೆಆರ್
2025ರ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಆರು ಆಟಗಾರರನ್ನು ಉಳಿಸಿಕೊಂಡಿದೆ. 55 ಲಕ್ಷ ಬೇಸ್ ಪ್ರೈಸ್‌ನ ರಿಂಕು ಸಿಂಗ್ ಅವರಿಗೆ 13 ಕೋಟಿ ನೀಡಿ ಕೆಕೆಆರ್ ಉಳಿಸಿಕೊಂಡಿದೆ. ವರುಣ್ ಚಕ್ರವರ್ತಿ 12 ಕೋಟಿ, ಸುನಿಲ್ ನಾರಾಯಣ್ 12 ಕೋಟಿ, ಆಂಡ್ರೆ ರಸೆಲ್ 12 ಕೋಟಿ, ಹರ್ಷಿತ್ ರಾಣಾ 4 ಕೋಟಿ ಮತ್ತು ರಮನ್‌ದಿನ್ ಸಿಂಗ್‌ಗೆ 4 ಕೋಟಿ ನೀಡಿ ಉಳಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ₹ 37 ಕೋಟಿಗೆ ಕೇವಲ ಮೂವರನ್ನು ಉಳಿಸಿಕೊಂಡ ಆರ್‌ಸಿಬಿ, ವಿರಾಟ್ ಕೊಹ್ಲಿಗೆ ಕೊಟ್ಟಿದ್ದೆಷ್ಟು?
Super 5️⃣quad REPRESENT! 🦁🔥 pic.twitter.com/dIhMwAEqoG
— Chennai Super Kings (@ChennaiIPL)