ಕಳಪೆ ಪ್ರದರ್ಶನ ಕಂಡರೂ ₹ 75 ಕೋಟಿ ಕೊಟ್ಟು ಹಳೆ ಆಟಗಾರರನ್ನು ಉಳಿಸಿಕೊಂಡ ಮುಂಬೈ ಇಂಡಿಯನ್ಸ್

First Published | Oct 31, 2024, 8:14 PM IST

ಕಳೆದ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಕಳಪೆ ಪ್ರದರ್ಶನ ನೀಡಿ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. ಹೀಗಾಗಿ, ಮುಂಬರುವ ಐಪಿಎಲ್ 2025ರ ಸೀಸನ್‌ಗಾಗಿ ಯಾವ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲಿದೆ ಎಂಬ ಕುತೂಹಲ ಹೆಚ್ಚಾಗಿತ್ತು. ಮುಂಬೈ ತಂಡವು ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ಇತ್ತೀಚೆಗೆ ಪ್ರಕಟಿಸಿದೆ. ಬರೋಬ್ಬರಿ 75 ಕೋಟಿ ರೂ. ಖರ್ಚು ಮಾಡಿ ಅದೇ ಹಳೆಯ ಆಟಗಾರರನ್ನು ಉಳಿಸಿಕೊಂಡಿದೆ.

ಮುಂಬೈ ಇಂಡಿಯನ್ಸ್ ಐಪಿಎಲ್ 2025

ಕಳೆದ 2024ರ ಐಪಿಲ್‌ ಸೀಸನ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನದಿಂದ ಕೊನೆಯ ಸ್ಥಾನಕ್ಕೆ ಮುಂಬೈ ಇಂಡಿಯನ್ಸ್ ತಲುಪಿತ್ತು. ಆದರೆ, ಇದೀಗ ಮುಂಬೈ ಇಂಡಿಯನ್ಸ್ ತನ್ನ ಬಳಿ  ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರರ ಪಟ್ಟಿ ಪ್ರಕಟ ಮಾಡಿದೆ. ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ತಿಲಕ್ ವರ್ಮ ಮತ್ತು ರೋಹಿತ್ ಶರ್ಮಾರನ್ನು ಉಳಿಸಿಕೊಂಡಿದೆ.

ಮಾರಕ ಬೌಲಿಂಗ್ ಹೊಂದಿರುವ ಜಸ್ಪ್ರೀತ್ ಬುಮ್ರಾಗೆ 18 ಕೋಟಿ ರೂ., ಸೂರ್ಯ ಕುಮಾರ್ ಯಾದವ್ 16.5 ಕೋಟಿ ರೂ. ಹಾರ್ದಿಕ್ ಪಾಂಡ್ಯಗೆ 16.5 ಕೋಟಿ ರೂ., ರೋಹಿತ್ ಶರ್ಮಾಗೆ 16.30 ಕೋಟಿ ರೂ. ಹಾಗೂ ತಿಲಕ್ ವರ್ಮಾಗೆ 8 ಕೋಟಿ ರೂ. ಕೊಟ್ಟು ಮುಂಬೈ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.

Latest Videos


ಇನ್ನು ಇಶಾನ್ ಕಿಶನ್, ಟಿಮ್ ಡೇವಿಡ್ ಮತ್ತು ನೆಹಾಲ್ ವಧೇರಾ ವೇಲಂ ಪೂಲ್‌ಗೆ ಮರಳಿದ್ದಾರೆ. ಆದರೆ, ಒಬ್ಬ ಆಟಗಾರನನ್ನು RTM ಕಾರ್ಡ್ ಬಳಸಿ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಮುಂಬೈ ಬಿಡುಗಡೆ ಮಾಡಿದ ಆಟಗಾರರು: ಡೆವಾಲ್ಡ್ ಬ್ರೀವಿಸ್, ಇಶಾನ್ ಕಿಶನ್, ಟಿಮ್ ಡೇವಿಡ್, ಹಾರ್ವಿಕ್ ದೇಸಾಯ್, ಅರ್ಜುನ್ ತೆಂಡೂಲ್ಕರ್, ಇತ್ಯಾದಿ ಆಟಗಾರರನ್ನು ಹರಾಜಿಗೆ ಬಿಡುಗಡೆ ಮಾಡಿದೆ.

ತಿಲಕ್ ವರ್ಮ

ಐಪಿಎಲ್ 2025ರ ಆಕ್ಷನ್‌ಗೆ ಮುಂಬೈ ಇಂಡಿಯನ್ಸ್ ಬಳಿ  ಕೇವಲ 45 ಕೋಟಿ ರೂ. ಮಾತ್ರ ಬಾಕಿ ಉಳಿಸಿಕೊಂಡಿದೆ.  ಮುಂಬೈ ನಾಯಕ ಯಾರು? ಹಾರ್ದಿಕ್ ಪಾಂಡ್ಯನೇ ಮುಂದುವರಿಯುತ್ತಾರಾ? ಅಥವಾ ಹೊಸ ನಾಯಕ ಬರುತ್ತಾರಾ? ಸೂರ್ಯಕುಮಾರ್ ಯಾದವ್ ಅಥವಾ ರೋಹಿತ್ ಶರ್ಮಾ ನಾಯಕರಾಗುವ ಸಾಧ್ಯತೆ ಇದೆ.

click me!