Cine Success Meet: ಪ್ರೇಮಂ ಪೂಜ್ಯಂ 25 ದಿನದತ್ತ

Nov 29, 2021, 3:16 PM IST

ಬೆಂಗಳೂರು (ನ. 29): ಲವ್ಲಿ ಸ್ಟಾರ್ ಪ್ರೇಮ್ ನಟನೆಯ ಪ್ರೇಮಂ ಪೂಜ್ಯಂ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ನೆನಪಿರಲಿ ಪ್ರೇಮ್ (Nenapiral Prem)  ಸಿನಿ ವೃತ್ತಿಯ 25ನೇ ಸಿನಿಮಾ. ಪ್ರೇಮಂ ಪೂಜ್ಯಂ (Premam Pujyam) ಚಿತ್ರ 25ನೇ ದಿನದತ್ತ ಮುನ್ನುಗ್ಗುತ್ತಿದೆ. ಹೀಗಾಗಿ ಬೆಂಗಳೂರಿನ ಗಾಂಧಿನಗರದಲ್ಲಿರೋ ಮೂವಿ ಲ್ಯಾಂಡ್ ಚಿತ್ರಮಂದಿರದಲ್ಲಿ ಪ್ರೇಮಂ ಪೂಜ್ಯಂ ಸಿನಿಮಾ ಕಾಲೇಜ್ ವಿದ್ಯಾರ್ಥಿಗಳಿಂದಲೇ ತುಂಬಿ ತುಳುಕುತ್ತಿದೆ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಲವ್ಲಿ ಸ್ಟಾರ್ ಪ್ರೇಮ್ (Loverly Star Prem) ಹಾಗೂ ನಾಯಕಿ ಬೃಂದಾ ಆಚಾರ್ಯ(Brinda Acharya) ಚಿತ್ರಮಂದಿರಕ್ಕೆ ಬಂದು ಪ್ರೇಕ್ಷಕರ ಜೊತೆ ಕೂತು ಮತ್ತೊಮ್ಮೆ ಸಿನಿಮಾ ನೋಡಿದ್ದಾರೆ. 

Puneeth Rajkumar social work:ಶಕ್ತಿಧಾಮದ ಬಗ್ಗೆ ಕುಟುಂಬದ ನಿರ್ಧಾರವಿದು!

ಸದಾ ನಾಯಿಯೊಂದಿಗೇ ಕಾಣಿಸಿಕೊಳ್ಳುವ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಮತ್ತ ನನ್ನ ಮುದ್ದಿನ ಔರಾದ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಶೂಟಿಂಗ್ ಸೆಟ್‌ಗೂ ಈ ಶ್ವಾನವನ್ನು ಕರೆದುಕೊಂಡು ಹೋಗುತ್ತಾರಂತೆ ರಶ್ಮಿಕಾ. ಹಾಗಾಗಿ ಕೋ ಸ್ಟಾರ್ಸ್‌‌ಗೂ ಈ ಔರಾ (Aura) ಕಂಡರೆ ತುಸು ಪ್ರೀತಿ ಜಾಸ್ತಿ. ಇದೀಗ ಯಾಕೋ ಗೊತ್ತಿಲ್ಲ ರಶ್ಮಿಕಾ ಫಾರಿನ್‌ಗೆ ಹೋಗಿದ್ದಾರೆನ್ನುವ ಸುದ್ದಿಯೂ ಇದೆ. ಒಮ್ಮೆ ಅಮೆರಿಕ ಅಂತಾರೆ, ಮತ್ತೊಮ್ಮೆ ದುಬೈ ಎನ್ನುತ್ತಾರೆ. ಒಟ್ಟಿನಲ್ಲಿ ವಿಜಯ್ ದೇವರಕೊಂಡ ತಮ್ಮ ಚಿತ್ರಕ್ಕಾಗಿ ಶೂಟಿಂಗ್ ನಡೆಸುತ್ತಿರುವ ದೇಶಕ್ಕೇ ರಶ್ಮಿಕಾ ಹೋಗಿದ್ದಾರೆ ಎನ್ನುವ ಗುಸು ಗುಸು ಇದೆಯಪ್ಪ.