ವಯನಾಡಲ್ಲಿ ರಂಜನಿ ರಾಘವನ್ ಲಂಗ ಎಳೆದ ಕೋತಿ… ನನ್ನ ಪರ್ಸನಲ್ ಸ್ಟೈಲಿಸ್ಟ್ ಎಂದ ಕನ್ನಡತಿ!

First Published | Nov 20, 2024, 8:32 PM IST

ಕನ್ನಡತಿ ಖ್ಯಾತಿಯ ನಟಿ ರಂಜನಿ ರಾಘವನ್ ಕೇರಳದ ಪ್ರಸಿದ್ಧ ಪ್ರವಾಸಿ ತಾಣವಾದ ವಯನಾಡಿಗೆ ತೆರಳಿದ್ದು, ಅಲ್ಲಿನ ಸುಂದರ ಫೋಟೊಗಳನ್ನು ಹಂಚಿಕೊಂಡಿದ್ದಾರೆ. 
 

ಕನ್ನಡತಿಯ ಭುವಿಯಾಗಿ ಜನಪ್ರಿಯತೆ ಪಡೆದ ರಂಜನಿ ರಾಘವನ್ (Ranjani Raghavan) ಸದ್ಯ ಸಿನಿಮಾ, ಸೀರಿಯಲ್, ನಟನೆ, ಬರವಣಿಗೆ ಎಲ್ಲದಕ್ಕೂ ಬ್ರೇಕ್ ಕೊಟ್ಟು ಟ್ರಾವೆಲ್ ಮಾಡುತ್ತಾ ಎಂಜಾಯ್ ಮಾಡ್ತಿದ್ದಾರೆ. 
 

ರಂಜನಿ ರಾಘವನ್ ದೇವರ ನಾಡದ ಕೇರಳದ ಸುಂದರ ತಾಣಗಳಲ್ಲಿ ಒಂದಾದ ವಯನಾಡಿಗೆ (Watanad)ತೆರಳಿದ್ದು, ಅಲ್ಲಿನ ಕುರುವಾ ಐಲ್ಯಾಂಡಲ್ಲಿ ದಿನ ಕಳೆದು, ಅಲ್ಲಿನ ಸುಂದರ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

Tap to resize

ಕುರುವಾ ಐಲ್ಯಾಂಡ್ ರೆಸಾರ್ಟ್ ನಲ್ಲಿ ಕುಳಿತಿರುವ ಫೋಟೊ ಹಾಗೂ ಕೋತಿಯೊಂದು ತಮ್ಮ ಲಂಗವನ್ನು ಎಳೆಯುತ್ತಿರುವ ಫೋಟೊ ಒಂದನ್ನು ಶೇರ್ ಮಾಡಿರುವ ರಂಜನಿ ನಾನು ನನ್ನ ಪರ್ಸನಲ್ ಸ್ಟೈಲಿಸ್ಟ್ (personal stylist)ಜೊತೆಗೆ ಎಂದು ಬರೆದಿದ್ದಾರೆ. 
 

ಇದರ ಜೊತೆಗೆ ವಯನಾಡಿನ ಅತಿ ದೊಡ್ಡದಾದ ಭತ್ತದ ಗದ್ದೆಯ ಮಧ್ಯದಲ್ಲಿ ನಿಂತೂ ಕೂಡ ಫೋಟೊ ತೆಗೆಸಿಕೊಂಡಿದ್ದಾರೆ. ಈ ಭತ್ತದ ಗದ್ದೆ ಬರೋಬ್ಬರಿ 250 ಎಕರೆ ಪ್ರದೇಶದಲ್ಲಿ ಹರಡಿದೆ. 
 

ಇನ್ನು ಕಬಿನಿ ರಿವರ್ ಬ್ಯಾಕ್ ಡ್ರಾಪ್ ಫೋಟೊ ಶೇರ್ ಮಾಡಿದ್ದು, ಬಿಸಿಲು ನೆರಳಿನ ಫೋಟೊ ಹಿನ್ನೆಲೆಯಲ್ಲಿ ಹರಿಯುತ್ತಿರುವ ಸುಂದರವಾದ ಕಬಿನಿಯ ನೋಟ ಅದ್ಭುತವಾಗಿದೆ. 
 

ಮತ್ತೊಂದಿಷ್ಟು ಫೋಟೊಗಳಲ್ಲಿ ಕುರುವಾ ಐ ಲ್ಯಾಂಡ್ (Kuruva Islance)ಸುಂದರ ಪ್ರಕೃತಿಯ ನಡುವೆ ಮರದ ಸೇತುವೆ ಮೇಲೆ ನಿಂತು ನಟಿ ಪೋಸ್ ಕೊಟ್ಟಿದ್ದಾರೆ. ಕನ್ನಡತಿಯ ಸಿಂಪ್ಲಿಸಿಟಿಯನ್ನು ಅಭಿಮಾನಿಗಳು ಹೊಗಳಿದ್ದಾರೆ. ಸಿಂಪಲ್ ಸುಂದರಿ ಅಂತಾನೂ ಹೇಳಿದ್ದಾರೆ. 
 

ಮತ್ತೊಂದು ಫೋಟೊದಲ್ಲಿ ಬಿಲ್ಲು ಬಾಣವನ್ನ, ಗುರಿಯೆಡೆಗೆ ಹಿಡಿದು ನಿಂತಿರುವ ಫೋಟೊ ಹಂಚಿಕೊಂಡಿರುವ ನಟಿ, ಟಾರ್ಗೆಟ್ ತಲುಪಿದ್ದೇನಾ? ಇಲ್ವಾ? ಅಂತ ಮಾತ್ರ ಕೇಳ್ಬೇಡಿ ಎಂದಿದ್ದಾರೆ. 
 

ಹರಿಯುತ್ತಿರುವ ನದಿಯೊಂದರ ತಟದಲ್ಲಿರುವ ಬಂಡೆ ಕಲ್ಲಿನಿಂದ ಇಳಿಯುತ್ತಿರುವ ಒಂದು ಕ್ಯಾಂಡಿಡ್ ಫೋಟೊವನ್ನು ಶೇರ್ ಮಾಡಿರುವ ನಟಿ ಸ್ಟೈಲ್ ಆಗಿ ಬಂಡೆ ಕಲ್ಲಿನಿಂದ ಇಳಿಯೋದಕ್ಕೆ ಟ್ರೈ ಮಾಡ್ತಿರೋದು ಎಂದಿದ್ದಾರೆ. 
 

ಕೊನೆಯದಾಗಿ ವಯನಾಡಿನ ಪ್ರಸಿದ್ಧವಾದ ತಿರುನೆಲ್ಲಿ ದೇವಸ್ಥಾನದ (Tirunelly Temple) ಅಂಗಣದಲ್ಲಿ ನಿಂತು ಪೋಸ್ ಕೊಟ್ಟಿದ್ದಾರೆ. ಇದು ವಯನಾಡಿನ ಪ್ರಾಚೀನ ದೇಗುಲವಾಗಿದೆ. ರಂಜನಿ ಫೋಟೊ ನೋಡಿ ಕನ್ನಡತಿಯ ಅಮ್ಮಮ್ಮ ಚಿತ್ಕಳಾ ಬಿರದಾರ್ ರಂಜು ಮಂದಹಾಸಕ್ಕೆ ಸರಿದಿದೆ ಮಂಜು ಎಂದು ಕಾಮೆಂಟ್ ಮಾಡಿದ್ದಾರೆ. 
 

Latest Videos

click me!