Ramya: 40ನೇ ವರ್ಷಕ್ಕೆ ಕಾಲಿಟ್ಟ ಮೋಹಕ ತಾರೆ: ಜಪಾನಿನಲ್ಲಿ ರಮ್ಯಾ ಹುಟ್ಟು ಹಬ್ಬ ಆಚರಣೆ

Nov 30, 2022, 12:11 PM IST

ರಮ್ಯಾ 40ನೇ ವರ್ಷಕ್ಕೆ ಕಾಲಿಟ್ಟಿದ್ದು, ಜಪಾನಿನಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಜಪಾನ್ ದೇಶದ ಆಕರ್ಷಕ ಫೋಟೋಗಳನ್ನು ಶೇರ್ ಮಾಡಿದ್ದಾರೆ. ರಮ್ಯಾ ಉತ್ತರಕಾಂಡ ಚಿತ್ರದಲ್ಲಿ ನಾಯಕಿಯಾಗಿ ಕಂಬ್ಯಾಕ್ ಆಗಲಿದ್ದು, ಜನವರಿಯಿಂದ ಶೂಟಿಂಗ್ ಶುರು ಮಾಡಲಿದ್ದಾರೆ. ರಮ್ಯಾ 2003ರಲ್ಲಿ ‘ಅಭಿ’ ಚಿತ್ರದೊಂದಿಗೆ ಬಣ್ಣದ ಬದುಕು ಆರಂಭಿಸಿದ್ದರು. ನಂತರ ಆಕಾಶ್, ಕಂಠಿ, ಆದಿ, ರಂಗ ಎಸ್ ಎಸ್ ಎಲ್ ಸಿ, ಜೂಲಿ, ಅಮೃತಧಾರೆ, ಗೌರಮ್ಮ, ‘ತನನಂ ತನನಂ’ ಮತ್ತು ‘ಸಂಜು ವೆಡ್ಸ್ ಗೀತಾ’ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಆ್ಯಪಲ್ ಬಾಕ್ಸ್ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ್ದಾರೆ. ಮೋಹಕ ತಾರೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರವನ್ನು ನಿರ್ಮಿಸಿದ್ದು, ರಾಜ್.ಬಿ.ಶೆಟ್ಟಿ ನಿರ್ದೇಶಿಸಿ, ಸಿರಿ ರವಿಕುಮಾರ್ ನಟಿಸಿದ್ದಾರೆ. ರಮ್ಯಾಗೆ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ಶ್ರುತಿ ಹಾಸನ್‌ ಮುಖಕ್ಕೆ ಏನಾಯಿತು? ಸೆಲ್ಫಿ ಶೇರ್ ಮಾಡಿ ಕಮಲ್ ಪುತ್ರಿ ಹೇಳಿದ್ದೇನು?