Aug 26, 2020, 2:29 PM IST
ಬೆಂಗಳೂರು (ಆ. 26): ಮೊದಲು 54 ಅಂಕ, ಮರು ಮೌಲ್ಯಮಾಪನದಲ್ಲಿ 100 ಅಂಕ. SSLC ಮೌಲ್ಯಮಾಪನದಲ್ಲಾದ ಎಡವಟ್ಟು ಇದು. ಸೊರಬ ತಾಲೂಕು ಕುಬಟೂರಿನ ವಿದ್ಯಾರ್ಥಿನಿ ಸೌಂದರ್ಯ ಅವರ ಉತ್ತರ ಪತ್ರಿಕೆ ಮೌಲ್ಯಮಾಪನದಲ್ಲಾದ ಭಾರೀ ಎಡವಟ್ಟಿದು.
ಈ ವಿದ್ಯಾರ್ಥಿನಿ ಕನ್ನಡ ಭಾಷೆಯನ್ನು ತೃತೀಯ ಭಾಷೆಯಾಗಿ ಆಯ್ಕೆ ಮಾಡಿಕೊಂಡಿದ್ದರು. ಫಲಿತಾಂಶ ಪ್ರಕಟವಾದಾಗ ಕನ್ನಡದಲ್ಲಿ 54 ಅಂಕ ಬಂದಿತ್ತು. ಮರುಮೌಲ್ಯಮಾಪನಕ್ಕೆ ಹಾಕಿದಾಗ 100 ಅಂಕ ಬಂದಿದೆ. ಇಷ್ಟು ದೊಡ್ಡ ವ್ಯತ್ಯಾಸ ಬಂದಿರುವುದಕ್ಕೆ ವಿದ್ಯಾರ್ಥಿನಿ, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
6 ನೇ ತರಗತಿಯ ವಿವಾದಿತ ಪಾಠ ರದ್ದು; ಸುರೇಶ್ ಕುಮಾರ್