ಜಗಪತಿ ಬಾಬು ಮಾತನಾಡಿ, ನಾನು ಪ್ರತಿ ನಟನ ಜೊತೆ ಚೆನ್ನಾಗಿರುತ್ತೇನೆ, ಯಾರ ಜೊತೆಗೂ ಯಾವುದೇ ಸಮಸ್ಯೆ ಇಲ್ಲ. ತಾರಕ್ ರೂಮಿಗೆ ಹೋಗಿ ಕುಳಿತು ಮಾತನಾಡುವಷ್ಟು ಒಡನಾಟ ಇದೆ. 'ನಾನ್ನಕು ಪ್ರೇಮತೋ' ಚಿತ್ರೀಕರಣದ ವೇಳೆ ಒಂದು ವಿಷಯದ ಬಗ್ಗೆ ಚರ್ಚೆ ನಡೆಯಿತು. ನಾನೇ ತಾರಕ್‌ಗೆ ಬಾಲಯ್ಯ ಜೊತೆ ಏನು ಸಮಸ್ಯೆ ಎಂದು ಕೇಳಿದೆ. ಹೀಗಿರುವುದು ಸರಿಯಲ್ಲ, ಗೊಂದಲಕ್ಕೆ ಕಾರಣವೇನು ಎಂದು ಕೇಳಿದೆ. ಇಬ್ಬರೂ ಒಟ್ಟಿಗಿರಬೇಕೆಂಬ ಉದ್ದೇಶದಿಂದಲೇ ಕೇಳಿದೆ. ತಾರಕ್ ಸ್ಪಷ್ಟವಾಗಿ ಉತ್ತರಿಸಿದರು. ಅವರ ಜೊತೆ ನನಗೇನು ಸಮಸ್ಯೆ, ಅಸಲಿಗೆ ಸಮಸ್ಯೆ ಏನೆಂದೂ ಗೊತ್ತಿಲ್ಲ. ನನ್ನ ತಂದೆಯ ಸಹೋದರ ಅವರು, ಅವರ ಜೊತೆ ನಾನೇಕೆ ಜಗಳ ಮಾಡಲಿ?