ಪಾಕಿಸ್ತಾನದವನನ್ನ ಮದುವೆಯಾಗಲು ಹೊರಟಿದ್ದವಳು ಹೆಣವಾದಳು: ನ್ಯೂ ಇಯರ್​​ ಪಾರ್ಟಿಯಲ್ಲಿ ನಡೆದಿದ್ದೇನು?

ಪಾಕಿಸ್ತಾನದವನನ್ನ ಮದುವೆಯಾಗಲು ಹೊರಟಿದ್ದವಳು ಹೆಣವಾದಳು: ನ್ಯೂ ಇಯರ್​​ ಪಾರ್ಟಿಯಲ್ಲಿ ನಡೆದಿದ್ದೇನು?

Published : Jan 22, 2025, 10:35 AM IST

ಇಬ್ಬರು ಸಾವಿನ ಮನೆಯ ಬಾಗಲಿಗಿ ಹೋಗಿ ನಿಂತಿದ್ರು. ಉಜ್ಮಾ ಪ್ರಾಣವನ್ನೇ ಬಿಟ್ಟರೆ.. ಇಮ್ದಾದ್​​ ಅಸ್ವಸ್ಥನ್ನಾಗಿ ಆಸ್ಪತ್ರೆ ಸೇರಿದ. ಅಷ್ಟಕ್ಕೂ ಆ ಮಟ್ಟಿಗೆ ಇಬ್ಬರೂ ಪ್ರೀತಿಸುತ್ತಿದ್ರೂ. ಗಂಡ ಹೆಂಡತಿ ರೀತಿಯೇ ಇದ್ರೂ.. ಆದ್ರೂ ಆವತ್ತು ಇಬ್ಬರೂ ವಿಷ ಕುಡಿದಿದ್ದೇಕೆ..? ಆ ರೂಮಿನಲ್ಲಿ ಆವತ್ತು ನಡೆದಿದ್ದೇನು..? ಈ ಪ್ರಶ್ನೆಗಳಿಗೆ ಉತ್ತರ ಹುಡುಕ ಹೊರಟ ಪೊಲೀಸರಿಗೆ ಸಿಕ್ಕಿದ್ದು ಒಂದು ಶಾಕಿಂಗ್​ ಮಾಹಿತಿ.

ಬೆಂಗಳೂರು(ಜ.22):  ಆಕೆ ಒಂಟಿ ಜೀವನ ನಡೆಸುತ್ತಿದ್ದವಳು.. ಗಂಡ ಡಿವೋರ್ಸ್​ ಕೊಟ್ಟು ಬೇರೆಯಾದ್ರೆ ಮಕ್ಕಳು ಅವನ ಜೊತೆಯೇ ಹೋಗಿದ್ವು.. ಕಳೆದ ಮೂರು ವರ್ಷದಿಂದ ಆಕೆ ತನ್ನ ಜೀವನವನ್ನ ನೋಡಿಕೊಂಡು ಹೋಗ್ತಿದ್ದಳು.. ಆದ್ರೆ ಆವತ್ತೊಂದು ದಿನ ನ್ಯೂ ಇಯರ್​​ ಪಾರ್ಟಿ ಮಾಡಲು ಸಂಬಂಧಿಕನ ಮನೆಗೆ ಹೋಗಿದ್ಲು.. ಆದ್ರೆ ಆಕೆ ಹೋದ ಮರು ದಿನ ಹೆಣವಾಗಿ ಸಿಕ್ಕಿದ್ದಳು. ಸಂಬಂಧಿಕನ ಮನೆಯಲ್ಲೇ ಆಕೆ ಹೆಣವಾಗಿ ಹೋಗಿದ್ದಳು.

ಇನ್ನೂ ಸಂಬಂಧಿಕ ಕೂಡ ವಿಷ ಕುಡಿದುಬಿಟ್ಟಿದ್ದ. ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಅಂತ ಆತನೇ ಮೆಸೆಜ್​ ಮಾಡಿದ್ದ.. ಅದ್ರೆ ಅವನ ಮೆಸೆಜ್​ ನೋಡಿ ಹೋದವರಿಗೆ ಸಿಕ್ಕಿದ್ದು ಅವಳ ಡೆಡ್​ ಬಾಡಿ ಮತ್ತು ಜೀವನ್ಮರಣದ ಹೋರಾಟ ಮಾಡ್ತಿದ್ದ ಅಕೆಯ ಸಂಬಂಧಿಕ.. ಅಷ್ಟಕ್ಕೂ ಅವರಿಬ್ಬರು ಆತ್ಮಹತ್ಯೆ ಮಾಡಿಕೊಳ್ಳೋ ನಿರ್ಧಾರ ಮಾಡಿದ್ದೇಕೆ? ಆವತ್ತು ಆ ರೂಮ್​​ನಲ್ಲಿ ಏನಾಯ್ತು?. ಮಹಿಳೆಯೊಬ್ಬಳ ದುರಂತ ಅಂತ್ಯದ ಕಥೆಯೇ ಇವತ್ತಿನ ಎಫ್​.ಐ.ಆರ್​.

ಹೌದು.. ಇಬ್ಬರು ಸಾವಿನ ಮನೆಯ ಬಾಗಲಿಗಿ ಹೋಗಿ ನಿಂತಿದ್ರು. ಉಜ್ಮಾ ಪ್ರಾಣವನ್ನೇ ಬಿಟ್ಟರೆ.. ಇಮ್ದಾದ್​​ ಅಸ್ವಸ್ಥನ್ನಾಗಿ ಆಸ್ಪತ್ರೆ ಸೇರಿದ. ಅಷ್ಟಕ್ಕೂ ಆ ಮಟ್ಟಿಗೆ ಇಬ್ಬರೂ ಪ್ರೀತಿಸುತ್ತಿದ್ರೂ. ಗಂಡ ಹೆಂಡತಿ ರೀತಿಯೇ ಇದ್ರೂ.. ಆದ್ರೂ ಆವತ್ತು ಇಬ್ಬರೂ ವಿಷ ಕುಡಿದಿದ್ದೇಕೆ..? ಆ ರೂಮಿನಲ್ಲಿ ಆವತ್ತು ನಡೆದಿದ್ದೇನು..? ಈ ಪ್ರಶ್ನೆಗಳಿಗೆ ಉತ್ತರ ಹುಡುಕ ಹೊರಟ ಪೊಲೀಸರಿಗೆ ಸಿಕ್ಕಿದ್ದು ಒಂದು ಶಾಕಿಂಗ್​ ಮಾಹಿತಿ.

ಇಬ್ಬರೂ ತಮ್ಮ ವೈವಾಹಿಕ ಜೀವನಕ್ಕೆ ಫುಲ್​ ಸ್ಟಾಪ್​ ಇಟ್ಟು... ಹಳೇ ಪ್ರೀತಿಗೆ ಓಕೆ ಅಂದಿದ್ರು.. ಇತ್ತ ಇಮ್ದಾದ್​​ ಉಜ್ಮಾಳನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ.. ಆದ್ರೆ ಉಜ್ಮಾ ತಮ್ಮ ರಿಲೇಷನ್​ಶಿಪ್​ ಬಗ್ಗೆ ಅಷ್ಟು ಸೀರಿಯಸ್​​ ಆಗಿರಲಿಲ್ಲ.. ಹೀಗಾಗೇ ಪ್ರೇಯಸಿಯ ಮೊಬೈಲ್​​ ಅನ್ನ ಟ್ರ್ಯಾಪ್​ ಮಾಡಲು ಆರಂಭಿಸಿದ.. ಆಕೆಗೆ ಬರ್ತಿದ್ದ ಮೆಸೆಜ್​.. ಕಾಲ್​ ಇವನಿಗೆ ಗೊತ್ತಾಗ್ತಿತ್ತು.. ಒಂದು ದಿನ ಆಕೆಗೆ ಎರಡನೇ ಮದುವೆಗೆ ಆಕೆಯ ಕುಟುಂಬ ತಯಾರಿ ನಡೆಸುತ್ತಿದ್ದಿದ್ದು ಗೊತ್ತಾಗಿತ್ತು.. ಮನೆಯಲ್ಲಿ ತೋರಿಸಿದ್ದ ಪಾಕಿಸ್ತಾನ ಮೂಲದ ಆಸ್ಟ್ರೀಯ ಹುಡುಗನಿಗೆ  ಈ ಉಜ್ಮಾ ಓಕೆ ಅಂತಲೂ ಹೇಳಿಬಿಟ್ಟಿದ್ಲು.. ಯಾವಾಗ ಈ ವಿಷಯ ಗೊತ್ತಾಯ್ತೋ ಇಮ್ದಾದ್​​ ಒಂದು ಪ್ಲಾನ್​ ರೆಡಿ ಮಾಡಿದ.. ನ್ಯೂ ಇಯರ್​ ಪಾರ್ಟಿಗೆ ಅಂತ ಕರೆದು ಸೈಲೆಂಟಾಗಿ ಅವಳ ಕಥೆಯನ್ನೇ ಮುಗಿಸಿಬಿಟ್ಟಿದ್ದ.. ನಂತರ ಸೂಸೈಟ್​​ ನಾಟಕ ಶುರು ಮಾಡಿದ ಆದ್ರೆ ಅವನ ನಾಟಕ ಹೆಚ್ಚು ದಿನ ನಡೆಯಲಿಲ್ಲ. 

ಡಿವೋರ್ಸ್​ ಆಗಿ ತನ್ನ ಪಾಡಿಗೆ ತಾನು ಇದ್ದವಳಿಗೆ ಇಮ್ದಾದ್​ ಮತ್ತೆ ಪ್ರೇಮದ ಬಲೆ ಬೀಸಿದ್ದ.. ಹಳೆ ಪ್ರೇಮಿ ಅಂತ ಅವಳೂ ಅವನು ಹೇಳಿದಂತೆಲ್ಲಾ ಕೇಳಿಬಿಟ್ಟಳು.. ಪರಿಣಾಮ ಇವತ್ತು ಮಸಣ ಸೇರಿದ್ದಾಳೆ.. ಇನ್ನೂ ಪ್ರೇಯಸಿಯನ್ನ ಕೊಂದು ಇನ್ನಲ್ಲದಂತೆ ನಾಟಕವಾಡಲು ಹೋದ ಈ ಇಮ್ದಾದ್​ ಕೊನೆಗೂ ತಗ್ಲಾಕಿಕೊಂಡಿದ್ದಾನೆ.

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more