100ಕ್ಕೆ 100 ಅಂಕ ಗಳಿಸಿದ ಮುದ್ದು ಅಕ್ಷರದ ರಕ್ಷಿತಾ ಇವಳೇ ನೋಡಿ!

Feb 27, 2020, 10:24 AM IST

ವಿಜಯಪುರ[ಫೆ.27]: ವಿದ್ಯಾರ್ಥಿಗಳೆಲ್ಲಾ ಸದ್ಯ ಪರೀಕ್ಷೆ ಎದುರಿಸುವ ಸಿದ್ಧತೆಯಲ್ಲಿದ್ದಾರೆ. SSLC ವಿದ್ಯಾರ್ಥಿಗಳಂತೂ ಓದಿನಲ್ಲಿ ಬ್ಯೂಸಿಯಾಗಿದ್ದಾರೆ. ಹೀಗಿರುವಾಗ ಕೆಲ ದಿನಗಳ ಹಿಂದೆ ವಿಜಯಪುರದ ಹತ್ತನೇ ತರಗತಿ ವಿದ್ಯಾರ್ಥಿನಿ ರಕ್ಷಿತಾ ಎಂಬಾಕೆಯ SSLC ಪೂರ್ವ ಸಿದ್ಧತಾ ಪರೀಕ್ಷೆಯ ಉತ್ತರ ಪತ್ರಿಕೆ ಭಾರೀ ವೈರಲ್ ಆಗಿತ್ತು. ಕನ್ನಡ ಪರೀಕ್ಷೆಯಲ್ಲಿ ಈಕೆ 625ಕ್ಕೆ 625 ಅಂಕ ಗಳಿಸಿದ್ದು ಇದಕ್ಕೆ ಕಾರಣವಾಗಿತ್ತು.

ಉತ್ತರ ಪತ್ರಿಕೆಯಲ್ಲಿ ಮುತ್ತಿನಂತೆ ಪೋಣಿಸಿದ್ದ ಸುಂದರ ಬರವಣಿಗೆ ಇಡೀ ರಾಜ್ಯದ ಗಮನ ಸೆಳೆದಿತ್ತು. ಹೀಗಿರುವಾಗ ಈ ವಿದ್ಯಾರ್ಥಿನಿಯನ್ನು ಸುವರ್ಣ ನ್ಯೂಸ್ ಪತ್ತೆ ಹಚ್ಚಿದೆ. ಆಕೆ ಈ ಸಾಧನೆ ಮಾಡಿದ್ದು ಹೇಗೆ? ಇಲ್ಲಿದೆ ವಿವರ

100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿನಿಯ ಕನ್ನಡ ಉತ್ತರ ಪತ್ರಿಕೆ ಹೀಗಿದೆ ನೋಡಿ..

ರಕ್ಷಿತಾ ಹೇಳುವಂತೆ ಆಕೆಯ ಅಕ್ಷರಗಳು ಹೇಳುವಷ್ಟು ಚೆನ್ನಾಗಿರಲಿಲ್ಲ. ಆದರೆ ಗುರುಗಳು ಹೇಳಿದಂತೆ ಪ್ರ್ಯಾಕ್ಟೀಸ್ ಮಾಡಿ ಆಕೆ ತ್ನನ ಬರವಣಿಗೆ ಸುಧಾರಿಸಿಕೊಂಡಿದ್ದಾಳೆ. ಓದಿನಲ್ಲಿ ಒಂದು ಹೆಜ್ಜೆ ಮುಂಚೂಣಿಯಲ್ಲಿರುವ ರಕ್ಷಿತಾಗೆ ಆಕೆಯ ಬರವಣಿಗೆ ಅತ್ಯುತ್ತಮ ಅಂಕ ಗಳಿಸಿಕೊಳ್ಳಲು ಸಹಾಯ ಮಾಡಿದೆ. ಅಂದ ಹಾಗೆ ಈಕೆಗೆ ತಾನು ಮುಂದೆ ಚೆನ್ನಾಗಿ ಓದಿ ಜಿಲ್ಲಾಧಿಕಾರಿಯಾಗಿ ಸಮಾಜದ ಸೇವೆ ಮಾಡಬೇಕೆಂಬ ಮಹದಾಸೆ ಇದೆ.