5 ವರ್ಷದಲ್ಲಿ 4 ಮದುವೆ.. ರೀಲ್ಸ್ ರಾಣಿಯ ಮ್ಯಾರೇಜ್ ಸ್ಟೋರಿ ಇದು..!

5 ವರ್ಷದಲ್ಲಿ 4 ಮದುವೆ.. ರೀಲ್ಸ್ ರಾಣಿಯ ಮ್ಯಾರೇಜ್ ಸ್ಟೋರಿ ಇದು..!

Published : Dec 29, 2023, 02:24 PM IST

ಗಂಡ ಬದಲಾಗಿದ್ದ ವಿಷ್ಯ ಗಂಡಂದಿರಿಗೇ ಗೊತ್ತಿರಲಿಲ್ಲ..! 
ಮಿಸ್ಸಿಂಗ್ ಕೇಸ್ನಿಂದ ಬಯಲಾಯ್ತು ಅವಳ ನಿಜ ಬಣ್ಣ..!
ಹೇಗೆ ಉಯಾಮಾರಿಸುತ್ತಿದ್ದಳು ಗುಳಿ ಕೆನ್ನೆ ಈ ಸುಂದರಿ..!

ಅವಳು ಫೇಸ್ ಬುಕ್ , ಇನ್ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಸುಂದರಿ, ಪಡ್ಡೆ ಹುಡುಗರೇ ಆಕೆಯ ಫಾಲೋವರ್ಸ್. ಆಕೆ ಮಾಡ್ತಿದ್ದ ರೀಲ್ಸ್ ನೋಡಿದ ಹುಡುಗರು ಹುಚ್ಚೆದ್ದು  ಸ್ನೇಹಕ್ಕೆ ಕೈಚಾಚುತ್ತಿದ್ದರು. ಹೀಗೆ ಫ್ರೆಂಡ್ಸ್ ಆಗೋಣ ಅಂತ ಮೆಸೆಜ್ ಮಾಡಿದ್ರೆ ಈಕೆ ಮಾತ್ರ ಹಸೆಮಣೆಗೇ ಕರೆಯುತ್ತಿದ್ದಳು. 5 ವರ್ಷದಲ್ಲಿ ಈಕೆ ಬರೊಬ್ಬರಿ 4 ಮದುವೆಯಾಗಿದ್ಲು(Marriage). ಆದ್ರೆ ಇಂಟ್ರೆಸ್ಟಿಂಗ್ ಅಂದ್ರೆ ಈಕೆ ಮದುವೆಯಾದ ಗಂಡಂದರಿಗ್ಯಾರಿಗೂ ಈಕೆಯ ನಿಜ ಬಣ್ಣ ಗೊತ್ತಿರಲಿಲ್ಲ. ಎಲ್ಲರೂ ತನ್ನ ಹೆಂಡತಿ ಏಕ ಪತಿ ವೃತಸ್ತೆ ಅಂತಲೇ ಅಂದುಕೊಂಡಿದ್ರು. ಆದ್ರೆ ಯಾವಾಗ ಆವತ್ತು ಆಕೆ ಮಿಸ್ಸಿಂಗ್(Missing) ಆದಳೋ ಈಕೆಯ ಮದುವೆ ಪುರಣ ಹೊರಬಿದ್ದಿತ್ತು. ಅವಳು ಮಾತ್ರ ನನಗೆ ಬೇಡವೇ ಬೇಡ.. ಅಂತ ಹೇಳೋ ಈ ಪುಣ್ಯಾತ್ಮ. ನನ್ನ ಮರ್ಯಾದೆ ಹೋದ್ರೂ ಪರವಾಗಿಲ್ಲ ಆದ್ರೆ ಮತ್ತೆ ಯಾವ ಗಂಡಸೂ ಅವಳಿಂದ ಮೋಸ ಹೋಗಬಾರದು ಅಂತ ಪೊಲೀಸ್ ಠಾಣೆ ಮೆಟ್ಟಿಲ್ಲೇರಿದ್ದೇನೆ ಅಂತ ಹೆಳ್ತಿದ್ದಾನೆ. ಈ ಪ್ರಶಾಂತ ಆ ಲೇಡಿಗೆ ಮೊದಲನೇ ಗಂಡನೇನೂ ಅಲ್ಲ. ಬದಲಿಗೆ ಮೂರನೇಯವನು.. ಆದ್ರೆ ಆತನಿಗೂ ಈಗ ಸೋಡ ಚೀಟಿ ಕೊಟ್ಟುಬಿಟ್ಟಿದ್ದಾಳೆ. ಐದೇ ವರ್ಷದಲ್ಲಿ ನಾಲಕ್ಕು ಮದುವೆಯಾಗಿದ್ದೇಗೆ ಅನ್ನೋದೇ ಇಲ್ಲಿ ಪ್ರಶ್ನೆ. ಟ್ರೈನ್ನಿಂಗ್ ಕ್ಲಾಸ್ನಲ್ಲಿ ಪರಿಚಯವಾದವನನ್ನ ಇವಳೇ ಹಿಂದೆ ಬಿದ್ದು ಮದುವೆಯಾದಳು. ಆದ್ರೆ ಮದುವೆಯಾಗಿ ಮೂರೇ ತಿಂಗಳಿಗೆ ತಾಳಿಯನ್ನ ಅಡವಿಟ್ಟು ಮೊಬೈಲ್ ಖರೀಧಿಸಿದ್ಲು.. ರೀಲ್ಸ್ಗಳನ್ನ(Reels) ಮಾಡೋದಕ್ಕೆ ಶುರು ಮಾಡಿದ್ಲು.. ಅಷ್ಟೇ ಅಲ್ಲ ಗರ್ಭಿಣಿಯಾದ ವಿಷ್ಯ ಗೊತ್ತಾದಾಗ ಗಂಡನಿಗೆ ಹೇಳದೇ ಅಬಾರ್ಷನ್ ಮಾಡಿಸಿದ್ಲು.. ಆದ್ರೆ ಇಲ್ಲಿವರೆಗೆ ಆಕೆಯ ಗಂಡ ಸಹಿಸಿಕೊಂಡಿದ್ದ.. ಅವಳಿಗೆ ಕ್ಷಮೆ  ಮೇಲೆ ಕ್ಷಮೆ ಕೊಟ್ಟಿದ್ದ.. ಆದರೆ ಯಾವಾಗ ಆಕೆ ಕಾಣೆಯಾಗ್ತಾಳೋ ಆಗ ಆತ ಹೆಂಡತಿಗೆ ಮೊದಲ ಗಂಡನ್ನಾಗಿರಲಿಲ್ಲ ಅನ್ನೋ ಸುದ್ದಿ ತಿಳಿಯುತ್ತಿದ್ದಂತೆ ಒಂದು ಕ್ಷಣ ಕುಸಿದು ಹೋಗಿದ್ದ.. ಅಷ್ಟೇ ಅಲ್ಲ ಮಾಧ್ಯಮದ ಎದುರು ನಿಂತು ಅವಳ ಬಂಡವಾಳವನ್ನೆಲ್ಲಾ ಜಗತ್ತಿನೆದುರು ಬಿಚ್ಚಿಟ್ಟಿದ್ದ. ಮದುವೆಯಾಗುವುದಕ್ಕಿಂತ ಮುಂಚೆ ಈ ಕಡೆ ಮೂರು ತಲೆಮಾರು ಆ ಕಡೆ ಮೂರು ತಲೆಮಾರು ವಿಚಾರ ಮಾಡಬೇಕು ಎನ್ನುತ್ತಾರೆ. ಆದರೆ ಇತ್ತಿಚಿನ ದಿನಗಳಲ್ಲಿ ರೀಲ್ಸ್ ಫೇಸ್ ಬುಕ್ ವಾಟ್ಸಾಪ್ ನಲ್ಲೇ ಲವ್ ಆಗಿ ಕೊನೆಗೆ ಹೀಗೆ ಬೀದಿಗೆ ಬೀಳುವ ಸ್ಥಿತಿ ತಲುಪುತ್ತಿದೆ. 

ಇದನ್ನೂ ವೀಕ್ಷಿಸಿ:  Chitradurga: ರಾಯರ ಮಠದಲ್ಲಿ ನಡೀತು ಪವಾಡ..! ಸ್ವಾಧೀನ ಕಳೆದುಕೊಂಡಿದ್ದ ಕಾಲಿಗೆ ಬಂತು ಮರು ಜೀವ..!

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more