vuukle one pixel image

20 ಸೆಕೆಂಡ್.. 20 ಗುಂಡು.. ಮಾಫಿಯಾ ಡಾನ್‌ಗಳ ಖೇಲ್ ಖತಂ ..!

Apr 17, 2023, 12:57 PM IST

ಪುತ್ರನ ಎನ್‌ಕೌಂಟರ್‌ ಬೆನ್ನಲ್ಲೇ ಉತ್ತರ ಪ್ರದೇಶದ ಕುಖ್ಯಾತ ಮಾಫಿಯಾ ಡಾನ್‌, ಮಾಜಿ ಸಂಸದ ಹಾಗೂ ಮಾಜಿ ಶಾಸಕ ಅತೀಕ್‌ ಅಹ್ಮದ್‌ನನ್ನು ಶನಿವಾರ ತಡರಾತ್ರಿ ಹತ್ಯೆ ಮಾಡಲಾಗಿದೆ. ಆತನ ಜತೆ ಸೋದರ ಅಶ್ರಫ್‌ ಅಹ್ಮದ್‌ನನ್ನೂ ಗುಂಡಿಕ್ಕಿ ಸಾಯಿಸಲಾಗಿದೆ. ಟಿವಿ ಕ್ಯಾಮರಾಗಳ ಎದುರೇ ಈ ಘಟನೆ ನಡೆದಿದ್ದು, ಕೃತ್ಯ ಎಸಗಿದ ಮೂವರನ್ನೂ ಬಂಧಿಸಲಾಗಿದೆ. ಪತ್ರಕರ್ತರ ವೇಷದಲ್ಲಿ ಮೂವರು ಬಂದು ‘ಜೈ ಶ್ರೀರಾಂ’ ಎಂದು ಕೂಗಿ ಅತೀಕ್‌ ತಲೆಗೆ ಹಾಗೂ ಅಶ್ರಫ್‌ಗೆ ಪಿಸ್ತೂಲು ಇಟ್ಟು ಗುಂಡು ಹಾರಿಸಿದರು. ಹಾಗಾದ್ರೆ ಅತೀಕ್‌ ಅಹ್ಮದ್‌ ಮತ್ತುಅಶ್ರಫ್‌ ಅಹ್ಮದ್‌ ಹತ್ಯೆ ಮಾಡಿದ್ದು ಯಾರು..? ಅವರ ಹಿನ್ನಲೆ ಏನು..? ಈ ವಿಡಿಯೋ ನೋಡಿ