ಸಲ್ಮಾನ್‌ ಖಾನ್‌ ಸಿನಿಮಾದಲ್ಲಿ ನಟಿಸಿದ ಆಕೆಯನ್ನು ಅವಳ ತಂಗಿಯೇ ವಂಚಿಸಿದಳು!

By Bhavani Bhat  |  First Published Jan 5, 2025, 4:58 PM IST

ಈ ನಟಿ ನೀಡಿದ ವೈರಲ್ ಸಂದರ್ಶನವೊಂದರಲ್ಲಿ, ತನ್ನ ಬಳಿ ಆಹಾರಕ್ಕಾಗಿಯೂ ಹಣವಿಲ್ಲದೆ ನಿರ್ಗತಿಕಳಾಗಿದ್ದ ಹೊತ್ತಿನಲ್ಲಿ ಬಂದು ನೆರವು ನೀಡಿದವನು ಹಳೆಯ ಸ್ನೇಹಿತ ಸಲ್ಮಾನ್ ಖಾನ್ ಎಂದಿದ್ದಳು. ಆಕೆಗೆ ಅವಳ ಸ್ವಂತ ತಂಗಿಯೇ ವೈರಿಯಾಗಿದ್ದಳು. 


ಇದು ಪಾಕಿಸ್ತಾನ ಮೂಲದ ನಟಿಯಬ್ಬಳ ಕತೆ. ಅವಳು ಬಾಲವುಡ್‌ನಲ್ಲಿ ನೆಲಕಚ್ಚಿ ದೃಢವಾಗಿ ನಿಂತಿದ್ದರೆ ಇಲ್ಲೇ ನೆಲೆ ಕಂಡುಕೊಳ್ಳಬಹುದಿತ್ತು. ಅಥವಾ ಪಾಕಿಸ್ತಾನದ ಸಿನಿಮಾ ಇಂಡಸ್ಟ್ರಿಯಲ್ಲಾದರೂ ಮಿಂಚಬಹುದಿತ್ತು. ಎರಡೂ ಸಾಧ್ಯವಾಗಲಿಲ್ಲ. ಕಡೆಗೆ ಮದುವೆಯಾಗಿ ಸುಖವಾಗಿರೋಣ ಅಂದುಕೊಂಡರೆ ಅಲ್ಲೂ ಆಕೆಯ ಗಂಡನನ್ನು ಅವಳ ತಂಗಿಯೇ ವಂಚಿಸಿ ಅಪಹರಿಸಿ ಮದುವೆಯಾದಳು. 

ಹೌದು, ಇಂಥದೊಂದು ದುರಂತ ಬದುಕಿಗೆ ತುತ್ತಾದವಳು ಪಾಕ್‌ ಮೂಲದ ನಾಯಕ ನಟಿ ಹುಮಾ ಖಾನ್. ಈಕೆ ತನ್ನ ವೃತ್ತಿಜೀವನದ ಒಂದು ಕರಾಳ ಹಂತದಲ್ಲಿ, ತನ್ನ ಹಳೆಯ ಸ್ನೇಹಿತ ಸಲ್ಮಾನ್ ಖಾನನೇ ತನ್ನ ಜೀವನದಲ್ಲಿ ಮರಳಿ ಬಂದು ತನ್ನನ್ನು ಉಳಿಸಲು ಸಹಾಯ ಮಾಡಿದ್ದ ಎಂಬ ವಿಷಯ ಬಹಿರಂಗಪಡಿಸಿದಳು. ಅಲ್ಲಿಯವರೆಗೂ ಆಕೆಯ ಬಗ್ಗೆ ಮೀಡಿಯಾ ಕೂಡ ಹೆಚ್ಚು ಗಮನ ಹರಿಸಿರಲಿಲ್ಲ. 

Tap to resize

Latest Videos

ಭಾರತೀಯ ಚಲನಚಿತ್ರೋದ್ಯಮದಲ್ಲಿ ಹಲವಾರು ತಾರೆಯರು ತಮ್ಮ ಮೊದಲ ಚಿತ್ರದಲ್ಲಿ ಉತ್ತಮ ಯಶಸ್ಸನ್ನು ಗಳಿಸಿದ್ದಾರೆ. ನಂತರ ಅನಿರೀಕ್ಷಿತವಾಗಿ ಕಣ್ಮರೆಯಾಗಿದ್ದಾರೆ. ಈಕೆಯೂ ಹಾಗೆ ಬಾಲಿವುಡ್‌ನ ಅತಿದೊಡ್ಡ ಹಿಟ್‌ಗಳಲ್ಲಿ ಒಂದರಲ್ಲಿ, ಸಲ್ಮಾನ್ ಖಾನ್ ಜೊತೆಗೆ ನಟಿಸಿದವಳು. ಆದರೆ ನಂತರ ಅವಳ ಜೀವನದಲ್ಲಿ ಹಿನ್ನಡೆಯನ್ನೇ ಕಂಡಳು. 

ಹುಮಾ ಖಾನ್ 1960ರ ದಶಕದಲ್ಲಿ ಪಾಕಿಸ್ತಾನದಲ್ಲಿ ಜನಿಸಿದವಳು. ಅವಳು ಪಾಕಿಸ್ತಾನಿ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಬಾಲ ಕಲಾವಿದೆಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದಳು. ಆದರೆ ಹಿಂದಿ ಚಿತ್ರರಂಗದ ಮೇಲಿನ ಅವಳ ತೀರದ ವ್ಯಾಮೋಹ ಆಕೆಯನ್ನು 1980ರ ದಶಕದಲ್ಲಿ ಭಾರತಕ್ಕೆ ಕರೆತಂದಿತು. 80ರ ದಶಕದಲ್ಲಿ ಹುಮಾ ಆಗಿನ ಉದಯೋನ್ಮುಖ ನಟ ಸಲ್ಮಾನ್ ಖಾನ್ ಅವರೊಂದಿಗೆ ಸ್ನೇಹಿತೆಯಾದಳು. ಈ ಸ್ನೇಹದಿಂದಾಗಿ ಸೂರಜ್ ಬರ್ಜತ್ಯಾ ಅವರ ʼಮೈನೆ ಪ್ಯಾರ್ ಕಿಯಾʼ ಚಿತ್ರದಲ್ಲಿ ಆಕೆಗೆ ಒಂದು ಪಾತ್ರ ಸಿಕ್ಕಿತು. ಆಕೆಯ ಪಾತ್ರವು ಚಿಕ್ಕದಾಗಿದ್ದರೂ, ಅದು ಗಮನ ಸೆಳೆಯಿತು. ಜೊತೆಗೆ ಫಿಲಂ ಬಾಕ್ಸ್ ಆಫೀಸ್ ದಾಖಲೆಗಳನ್ನು ಸ್ಥಾಪಿಸಿತು.

ಮೈನೆ ಪ್ಯಾರ್ ಕಿಯಾ ಬಾಲಿವುಡ್ ಇತಿಹಾಸದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಚಲನಚಿತ್ರಗಳಲ್ಲಿ ಒಂದು. ಹುಮಾ ನಂತರ ಸಲ್ಮಾನ್ ಜೊತೆಗೆ ಮತ್ತೊಂದು ಹಿಟ್ ಚಿತ್ರ ʼಹಮ್ ಸಾಥ್ ಸಾಥ್ ಹೈʼನಲ್ಲಿ ನಟಿಸಿದಳು. ಎರಡು ಪ್ರಮುಖ ಚಿತ್ರಗಳಲ್ಲಿ ಸಲ್ಮಾನ್ ಜೊತೆ ಕೆಲಸ ಮಾಡಿದ ನಂತರ, ಅವಳು ನಿಧಾನವಾಗಿ ಜನಮನದಿಂದ ಮರೆಯಾದಳು. ಅದಕ್ಕೆ ಒಂದು ಕಾರಣ, ಬೇಡಿಕೆ ಇದ್ದಾಗಲೇ ಅವಳು ಸಾಕಷ್ಟು ಫಿಲಂಗಳಲ್ಲಿ ಅವಕಾಶಗಳನ್ನು ಬಾಚಿಕೊಳ್ಳಲಿಲ್ಲ. ನೆಲೆ ನಿಲ್ಲಲು ಯತ್ನಿಸಲಿಲ್ಲ. ಮತ್ತು ಮದುವೆ ಆಫರ್‌ ಬಂತು, ಮದುವೆಯಾಗಿಬಿಟ್ಟಳು. 

1992ರಲ್ಲಿ, ಹುಮಾ ಬಾಲಿವುಡ್‌ನಲ್ಲಿ ಸಕ್ರಿಯವಾಗಿದ್ದಾಗಲೇ, ಫ್ಯಾಮಿಲಿಯವರು ಫಿಕ್ಸ್‌ ಮಾಡಿದಂತೆ ಅರೇಂಜ್ಡ್ ಮ್ಯಾರೇಜ್‌ ಮಾಡಿಕೊಂಡಳು. ನಂತರ ಬಾಲಿವುಡ್‌ ಬಿಟ್ಟು ವೈವಾಹಿಕ ಜೀವನದತ್ತ ಗಮನ ಹರಿಸಲು ನಿರ್ಧರಿಸಿದಳು. ಕೆಲವೇ ವರ್ಷಗಳಲ್ಲಿ ಆಕೆಗೆ ಜೀವನದ ಅತಿ ದೊಡ್ಡ ಆಘಾತ ಎದುರಾಯ್ತು. ಸ್ವತಃ ಆಕೆಯ ತಂಗಿಯೇ ಆಕೆಗೆ ದ್ರೋಗ ಬಗೆದು, ಭಾವನನ್ನು ಬುಟ್ಟಿಗೆ ಹಾಕಿಕೊಂಡಿದ್ದಳು. ಆಕೆ ನೈಮಾ. 

ಹುಮಾಳ ಸಹೋದರಿ ನೈಮಾ ಕೂಡ ಪಾಕಿಸ್ತಾನದಲ್ಲಿ ನಟಿಯಾಗಿದ್ದಳು. ಈಕೆ ಹುಮಾಳ ಗಂಡನನ್ನು ಅದ್ಹೇಗೋ ಸೆಳೆದುಕೊಂಡಳು. ಹುಮಾಳ ಪತಿ ಆಕೆಗೆ ವಿಚ್ಛೇದನ ನೀಡಿ ನೈಮಾಳನ್ನು ವಿವಾಹವಾದ. ಹುಮಾ ಸರಿಯಾದ ಜೀವನಾಂಶ ಕೂಡ ಪಡೆಯದೆ ಆತನಿಂದ ಬೇರೆಯಾದಳು. ಅಕ್ಷರಶಃ ಆಕೆ ನಿರ್ಗತಿಕಳಾದಳು. ಹತಾಶೆಯ ಅಂಚಿಗೆ ಹೋದಳು. 

ಆ ಫಿಲಂಗಳಲ್ಲಿ ಕಾಣಿಸೋದೆಲ್ಲ ನಿಜವಾ? ಸ್ಟಾರ್‌ಗಳು ಹೇಳೋದೇನು?

ಆಗ ಆಕೆಗೆ ನೆರವಾದವನು ಸಲ್ಮಾನ್.‌ ಆಕೆ ನೀಡಿದ ವೈರಲ್ ಸಂದರ್ಶನವೊಂದರಲ್ಲಿ, ಹುಮಾ ತನ್ನ ಜೀವನ ಮತ್ತು ವೃತ್ತಿಜೀವನದ ಕರಾಳ ಹಂತದಲ್ಲಿ, ತನ್ನ ಹಳೆಯ ಸ್ನೇಹಿತ ಸಲ್ಮಾನ್ ಖಾನ್ ತನ್ನ ಜೀವನದಲ್ಲಿ ಮರಳಿ ಬಂದು ತನ್ನನ್ನು ಉಳಿಸಲು ಸಹಾಯ ಮಾಡಿದ ಎಂದು ಬಹಿರಂಗಪಡಿಸಿದರು. ತನ್ನ ಬಳಿ ಆಹಾರಕ್ಕಾಗಿಯೂ ಹಣವಿಲ್ಲದ ಸಮಯವಿತ್ತು ಮತ್ತು ತನ್ನನ್ನು ಆಗ ರಕ್ಷಿಸಿದವನು ಸಲ್ಮಾನ್ ಎಂದು ಹೇಳಿಕೊಂಡಳು. 

ತನ್ನ ಕಾನೂನು ಹೋರಾಟದ ಸಮಯದಲ್ಲಿಯೂ ಸಲ್ಮಾನ್ ಆರ್ಥಿಕವಾಗಿ ತನಗೆ ಬೆಂಬಲ ನೀಡಿದ್ದ ಎಂದು ಹುಮಾ ಉಲ್ಲೇಖಿಸಿದ್ದಾಳೆ. ತಾನು ಇಂದಿಗೂ ಬದುಕಿರುವುದಕ್ಕೆ ಸೂಪರ್‌ಸ್ಟಾರ್‌ ಸಲ್ಮಾನ್‌ ಮಾತ್ರ ಕಾರಣ ಎಂದಳು. ಪ್ರಸ್ತುತ, ಹುಮಾ ಮುಂಬೈನಲ್ಲಿ ಜನರಿಂದ ದೂರವಾಗಿ ಒಂಟಿಯಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. 

ನಟ ಗೋವಿಂದ್‌ ಮದ್ವೆಯಾಗಲು ಬಯಸಿದ್ರಾ ರವೀನಾ ಟಂಡನ್‌ ಸುನೀತಾ ಅಹುಜಾ ಹೇಳಿದ್ದೇನು?
 

click me!