
90ರ ದಶಕದ ಬಾಲಿವುಡ್ ನಟ ಗೋವಿಂದ ಅವರು ಸಾಕಷ್ಟ್ರು ಲೇಡಿ ಫ್ಯಾನ್ ಫಾಲೋವರ್ಸ್‌ಗಳನ್ನು ಹೊಂದಿದ್ದ ನಟ. ಅವರಿಗೆ ಎಷ್ಟೊಂದು ಮಹಿಳಾ ಅಭಿಮಾನಿಗಳಿದ್ದರೆಂದರೆ ಆ ಕಾಲದಲ್ಲಿ ಸ್ವತಃ ಬಾಲಿವುಡ್ ಟಾಪ್ ನಟಿ ಎನಿಸಿಕೊಂಡಿದ್ದವರು ಕೂಡ ಗೋವಿಂದ್ ಅವರ ಅಭಿಮಾನಿಯಾಗಿದ್ದರು ಗೋವಿಂದ ಅವರ ಪತ್ನಿ ಸುನೀತಾ ಅಹುಜಾ ಅವರೇ ಈ ವಿಚಾರದ ಬಗ್ಗೆ ಹೇಳಿಕೊಂಡಿದ್ದಾರೆ. ಓರ್ವ ಸೂಪರ್ ಸ್ಟಾರ್ ಪತ್ನಿಯಾಗಿ ಜೀವನ ಹೇಗಿದೆ ಎಂಬ ವಿಚಾರವಾಗಿ ನಟ ಗೋವಿಂದ್ ಪತ್ನಿ ಸುನೀತಾ ಅಹುಜಾ ಮಾತನಾಡಿದ್ದು, ಅವರು ಮಾತುಗಳು ಸಂಚಲನ ಸೃಷ್ಟಿಸಿವೆ.
ನಮಗೆ ಅರವರು ನೋಡುವುದಕ್ಕೂ ಸಿಗುತ್ತಿರಲಿಲ್ಲ, ಮನೆಗೆ ಬಂದು ಸೀದಾ ನಿದ್ದೆ ಮಾಡಲು ಹೋಗುತ್ತಿದ್ದರು. ಅದೇ ಸಮಯದಲ್ಲಿ ಮಗಳು ಟೀನಾ ಜನಿಸಿದಳು. ಹೀಗಾಗಿ ನಾನು ಆಕೆ ಹಾಗೂ ಅತ್ತೆಯ ಜೊತೆ ಸಂಪೂರ್ಣ ಬ್ಯುಸಿಯಾಗಿರುತ್ತಿದೆ. ಹೀಗಾಗಿ ನನಗೆ ಅವರ ಇಲ್ಲದಿರುವಿಕೆ ಅಷ್ಟೊಂದು ಪರಿಣಾಮ ಬೀರಲಿಲ್ಲ, ಆದರೆ ಗೋವಿಂದ ಹೆಚ್ಚು ಕಾಲ ಮನೆಯಲ್ಲಿ ಇರುತ್ತಲೇ ಇರಲಿಲ್ಲ, ಅವರು ಸದಾ ಮನೆಯಿಂದ ದೂರ ಇರುತ್ತಿದ್ದರು.
ಅವಾಗ ಸಿಕ್ಕಾಬಟ್ಟೆ ಔಟ್‌ಡೋರ್ ಶೂಟ್‌ಗಳಿತ್ತು. ಅವರು ಶಿಮ್ಲಾ, ಕಾಶ್ಮೀರ ಅಂತ ಸುತ್ತುತ್ತಲೇ ಇರುತ್ತಿದ್ದರು. ಇದೇ ವೇಳೆ ನಾನು ಮಗಳ ಜೊತೆ ಇರುತ್ತಿದ್ದೆ ಹೀಗಾಗಿ ನನಗೆ ಸಮಯ ಹೋದುದ್ದೇ ಗೊತ್ತಾಗುತ್ತಿರಲಿಲ್ಲ, ಹೀಗಿರುವಾಗ ಸುನೀತಾಗೆ ಗಂಡನ ಜೊತೆ ಸಮಯ ಕಳೆಯುವುದಕ್ಕೆ ಹೇಗೆ ಸಾಧ್ಯವಾಗುತ್ತಿತ್ತು ಎಂದು ಸುನೀತಾ ಅಹುಜಾ ಹೇಳಿಕೊಂಡಿದ್ದಾರೆ. ಕೆಲವೊಮ್ಮೆ ನಾವು ಮದ್ರಾಸ್, ಹೈದರಾಬಾದ್ ಮುಂತಾದ ಸ್ಥಳಕ್ಕೆ ಔಟ್‌ಡೋರ್ ಶೂಟ್ ಹೋದಾಗ ಗೋವಿಂದ ಜೊತೆ ಹೋಗುತ್ತಿದ್ದೆವು. ಶೂಟಿಂಗ್ ಪ್ಯಾಕಪ್ ನಂತರ ಎಷ್ಟು ಸಮಯ ಉಳಿಯುತ್ತಿತ್ತು ಅಷ್ಟು ಸಮಯ ನಮ್ಮದಾಗಿರುತ್ತಿತ್ತು. ಎಂದು ಸುನೀತಾ ಹೇಳಿಕೊಂಡಿದ್ದಾರೆ.
ಇದೇ ಸಂದರ್ಶನದ ವೇಳೆ ಬಾಲಿವುಡ್ ನಟಿ ರವೀನಾ ಟಂಡನ್ ಅವರು ಗೋವಿಂದ ಅವರನ್ನು ಮದ್ವೆಯಾಗಲು ಎಷ್ಟು ಉತ್ಸುಕರಾಗಿದ್ದರು. ಎಂಬುದನ್ನು ಸುನೀತಾ ಅಹುಜಾ ಅವರು ಹೇಳಿಕೊಂಡಿದ್ದಾರೆ. 'ಚಿಚಿ ತುಮ್ ಪೆಹ್ಲೆ ಮಿಲ್ತಾ ತೋ ಮೈನೆ ತೆರೆ ಸೆ ಶಾದಿ ಕರ್ತಿ' ಅಂದರೆ ಚಿಚಿ ನೀವು ನನಗೆ ಮೊದಲೇ ಸಿಕ್ಕಿದ್ದರೆ ನಾನು ನಿಮ್ಮನೇ ಮದ್ವೆಯಾಗುತ್ತಿದ್ದೆ ಎಂದು ರವೀನಾ ಈಗಲೂ ಹೇಳಿಕೊಳ್ಳುತ್ತಾರೆ ಎಂದು ಸುನೀತಾ ಅಹುಜಾ ಹೇಳಿದ್ದಾರೆ. ಈ ವೇಳೆ ಆಕೆಗೆ ನಾನು ಹೀಗೆ ಹೇಳುತ್ತಿದೆ, 'ಲೇ ಜಾ ಪತಾ ಚಾಲೆಗಾ ತೆರೆಕೋ' ಅಂದರೆ ಅವನನ್ನು ಕರೆದುಕೊಂಡು ಹೋಗಿಬಿಡು ನಿನಗೆ ಆಗ ಅವನ ಬಗ್ಗೆ ತಿಳಿಯುವುದು ಎಂದು ತಮಾಷೆಯಾಗಿ ಹೇಳುತ್ತಿದ್ದೆ ಎಂದು ಸುನೀತಾ ಅಹುಜಾ ಹೇಳಿದ್ದಾರೆ.
ಅಲ್ಲದೇ ತನ್ನ ಪತಿಯ ಕೋಸ್ಟಾರ್‌ಗಳ ಜೊತೆ ತಾನು ಹೇಗೆ ಸಮಯ ಕಳೆಯುತ್ತೇನೆ ಎಂಬ ವಿಚಾರದ ಬಗ್ಗೆಯೂ ಸುನೀತಾ ಮಾತನಾಡಿದ್ದು, ಶಿಲ್ಪಾ ಶೆಟ್ಟಿ, ರವೀನಾ ಟಂಡನ್, ಮನೀಷಾ ಕೊಯಿರಾಲಾ ಅವರ ಜೊತೆ ಶೂಟ್ ನಂತರ ಜೊತೆಗೆ ಕುಳಿತು ಊಟ ತಿಂಡಿ ಮಾಡುವ ಮೂಲಕ ಚಿಲ್ ಮಾಡ್ತಿದ್ದೆವು ಎಂದು ಸುನೀತಾ ಅಹುಜಾ ಹೇಳಿದ್ದಾರೆ. ರವೀನಾ ಟಂಡನ್ ಹಾಗೂ ಗೋವಿಂದ ಅವರು ದುಲ್ಹೆ ರಾಜಾ, ಆಂಟಿ ನಂಬರ್ 1, ಬಡೆ ಮೀಯನ್ ಚೋಟೆ ಮಿಯನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.