ಗುಜರಾತ್‌ನ ಯುನಿಟಿ ಪ್ರತಿಮೆ ಪಕ್ಕದಲ್ಲಿರುವ ಕಾಡು ಪ್ರದೇಶದ ಆವರಣದಲ್ಲಿ ಚಿರತೆಯೊಂದು ಕೃಷ್ಣಮಗ ಬೇಟೆಯಾಡಿದೆ. ಆದರೆ ಚಿರತೆ ದಾಳಿಯಿಂದ ಕೃಷ್ಣಮಗ ಜೊತೆಗಿದ್ದ 7 ಮರಿಗಳು ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆ ಅಚ್ಚರಿ ಮಾಹಿತಿ ಬಹಿರಂಗಪಡಿಸಿದೆ.
ಅಹಮ್ಮದಾಬಾದ್(ಜ.05) ಗುಜರಾತಿನಲ್ಲಿರುವ ಸ್ಟಾಚ್ಯು ಆಫ್ ಯುನಿಟಿ ಪ್ರತಿಮೆ ಪ್ರವಾಸಿಗರ ಪ್ರಮುಕ ಆಕರ್ಷಣೆಯ ಕೇಂದ್ರವಾಗಿದೆ. ನರ್ಮಾದಾ ನದಿ ತಟದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆ ತಲೆ ಎತ್ತಿ ನಿಂತಿದೆ. ನದಿ ಸುತ್ತ ಮುತ್ತ ಕಾಡು ಪ್ರದೇಶವಾಗಿದೆ. ಹೊಸ ವರ್ಷದ ಮೊದಲ ದಿನ ಹಲವು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದರೆ. ಇದೇ ವೇಳೆ ಪಕ್ಕದ ಕಾಡಿನಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದೆ. ಇಷ್ಟೇ ಅಲ್ಲ ಈ ಚಿರತೆ, ಕೃಷ್ಣಮೃಗ ಬೇಟೆಯಾಡಿದೆ. ಕೃಷ್ಣಮೃಗಳ ಗುಂಪೊಂದು ಹುಲ್ಲು ಮೇಯುತ್ತಿದ್ದ ವೇಳೆ ಚಿರತೆ ದಾಳಿ ಮಾಡಿದೆ. ಆದರೆ ಈ ಚಿರತೆ ದಾಳಿ ಆಘಾತದಿಂದ ಗುಂಪಿನಲ್ಲಿದ್ದ 7 ಮರಿ ಕೃಷ್ಣಮೃಗಗಳು ಮೃತಪಟ್ಟ ಘಟನೆ ನಡೆದಿದೆ.
ಯುನಿಟಿ ಪ್ರತಿಮೆ ಬಳಿಯ ಜಂಗಲ್ ಸಫಾರಿ ಬಳಿ ಈ ಘಟನೆ ನಡೆದಿದೆ. ಜನವರಿ 1 ರ ಬೆಳಗ್ಗೆ ಈ ಘಟನೆ ನಡೆದಿದೆ. ಅರಣ್ಯಾಧಿಕಾರಿಗಳ ಪ್ರಕಾರ, ಚಿರತೆ ಫೆನ್ಸಿಂಗ್ ದಾಟಿ ಜಂಗಲ್ ಸಫಾರಿ ಪ್ರದೇಶಕ್ಕೆ ನುಗ್ಗಿದೆ. ನರ್ಮದಾ ನದಿ ತಟದಲ್ಲಿರುವ ಕೆವಾಡಿ ಅರಣ್ಯದಲ್ಲಿ ಚಿರತೆಗಳ ಸಾಮಾನ್ಯವಾಗಿದೆ2. ಕಾಡು ಪ್ರಾಣಿಗಳಿಂದ ಪ್ರವಾಸಿಗರು ಭೇಟಿಗೆ ಸಮಸ್ಯೆಯಾಗಬಾರದು ಎಂದು ಫೆನ್ಸಿಂಗ್ ಹಾಕಲಾಗಿದೆ. ಆದರೆ ಈ ಫೆನ್ಸಿಂಗ್‌ನ್ನು ಚಿರತೆ ದಾಟಿ ಬಂದು ಕೃಷ್ಣಮೃಗಗಳ ಮೇಲೆ ದಾಳಿ ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅರಣ್ಯಧಿಕಾರಿಗಳು ಅಳವಡಿಸಿರುವ ಸಿಸಿಟಿವಿಯಲ್ಲಿ ಚಿರತೆ ದಾಳಿ ಮಾಹಿತಿ ಲಭ್ಯವಾಗಿದೆ. ಫೆನ್ಸಿಂಗ್ ದಾಟಿ ಬಂದ ಚಿರತೆ ಕೃಷ್ಣ ಮೃಗಗಳ ಗುಂಪಿನ ಮೇಲೆ ದಾಳಿ ಮಾಡಿದೆ. ಈ ದಾಳಿಯಲ್ಲಿ ದೊಡ್ಡ ಕೃಷ್ಣಮೃಗವೊಂದನ್ನು ಚಿರತೆ ಬೇಟೆಯಾಡಿದೆ. ಕೃಷ್ಣಮೃಗವನ್ನು ಎಳೆದುಕೊಂಡು ಚಿರತೆ ಕಾಡಿನೊಳಕ್ಕೆ ಹೋಗಿದೆ. ಆದರೆ ಈ ದಾಳಿ ಗುಂಪಿನಲ್ಲಿದ್ದ ಪುಟ್ಟ ಕೃಷ್ಣಮೃಗಗಳ ಮರಿಗಳಿಗೆ ಶಾಕ್ ನೀಡಿದೆ. ಭಯ ಹಾಗೂ ಆತಂಕಕ್ಕೆ 7 ಮರಿ ಕೃಷ್ಣಮೃಗಗಳು ಮೃತಪಟ್ಟಿದೆ.
ಅನ್ನ ಹಾಕಿದ ಮನೆಯವರ ಪ್ರಾಣ ಉಳಿಸಲು ಚಿರತೆ ವಿರುದ್ಧ ನಾಯಿ ಹೋರಾಟ, ಭೀಕರ ದೃಶ್ಯ ಸೆರೆ!
ಸತ್ತು ಬಿದ್ದಿದ್ದ ಕೃಷ್ಣಮೃಗ ಮರಿಗಳನ್ನು ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಇತ್ತ ಚಿರತೆ ತಿಂದು ತೇಗಿದ ಕೃಷ್ಣಮೃಗದ ಕಳೇಬರಹವೂ ಪತ್ತೆಯಾಗಿದೆ. ಇತ್ತ ಸಿಸಿಟಿವಿ ಮೂಲಕ ದಾಖಲೆ ಪರಿಶೀಲಿಸಿದ್ದಾರೆ. ಈ ವೇಳೆ ಚಿರತೆಯೊಂದು ಫೆನ್ಸಿಂಗ್ ದಾಟಿ ಬಂದಿರುವುದು ಪತ್ತೆಯಾಗಿದೆ. ಇತ್ತ ಮರಣೋತ್ತರ ಪರೀಕ್ಷಾ ವರದಿಯಲ್ಲಿ 7 ಕೃಷ್ಣಮೃಗ ಮರಿಗಳು ಆಘಾತದಿಂದ ಮೃತಪಟ್ಟಿದೆ ಎಂದಿದೆ. ಇದು ಅರಣ್ಯಾಧಿಕಾರಿಗಳಲ್ಲೂ ಅಚ್ಚರಿ ಹುಟ್ಟಿಸಿದೆ. ಕಾಡು ಪ್ರಾಣಿಗಳು, ಮರಿಗಳು ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿರುತ್ತದೆ.ಆದರೆ ಆಘಾತದಿಂದ ಮೃತಪಟ್ಟಿರುವ ಘಟನೆ ನಿಜಕ್ಕೂ ಅಚ್ಚರಿ ಎಂದಿದ್ದಾರೆ.
ಜನವರಿ 1 ರಂದು ಚಿರತೆ ದಾಳಿಯಾಗಿದೆ. ಯುನಿಟಿ ಆಫ್ ಸ್ಟಾಚ್ಯು ಬಳಿ ಈ ದಾಳಿ ನಡೆದಿದೆ. ಸಿಸಿಟಿವಿಯಲ್ಲಿ ಚಿರತೆ ದಾಳಿ ಪತ್ತೆಯಾದ ಬೆನ್ನಲ್ಲೇ ಯುನಿಟಿ ಪ್ರತಿಮೆ , ಜಂಗಲ್ ಸಫಾರಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. 48 ಗಂಟೆಗಳ ಕಾಲ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಸಿಸಿಟಿವಿ ಮೇಲೆ ಅರಣ್ಯಾಧಿಕಾರಿಗಳು ತೀವ್ರ ನಿಘಾ ಇಟ್ಟಿದ್ದಾರೆ. ಜನವರಿ 1 ಹಾಗೂ ಜನವರಿ 2ರಂದು ಸಂಪೂರ್ಣ ಯುನಿಟಿ ಪ್ರತಿಮೆ ಆವರಣಕ್ಕೆ ಪ್ರವಾಸಿಗರನ್ನು ನಿರ್ಬಂಧಿಸಲಾಗಿತ್ತು. ಆದರೆ ಸದ್ಯ ಕಾಣಿಸಿಕೊಂಡ ಚಿರತೆ ಎಲ್ಲಿದೆ ಅನ್ನೋದು ಪತ್ತೆಯಾಗಿಲ್ಲ. ಹೀಗಾಗಿ ಆತಂಕ ಹೆಚ್ಚಾಗಿದೆ.
ಯುನಿಟಿ ಪ್ರತಿಮೆಯ ಕೆಲ ದೂರದಲ್ಲಿ ಶೂಲಪನೇಶ್ವರ ವನ್ಯಜೀವಿ ಹಾಗೂ ಅಭಯಾರಣ್ಯವಿದೆ. ಇಲ್ಲಿ ಚಿರತೆ ಸಾಮಾನ್ಯವಾಗಿದೆ. ಅತೀ ಹೆಚ್ಚು ಚಿರತೆಗಳು ಈ ಕಾಡಿನಲ್ಲಿದೆ. ಈ ಚಿರತೆಗಳು ಪ್ರವಾಸಿಗರ ಭೇಟಿ ಪ್ರದೇಶಗಳ ಬಳಿ ಬರದಂತೆ ಫೆನ್ಸಿಂಗ್ ಮಾಡಲಾಗಿದೆ. ಇದೀಗ ಈ ಫೆನ್ಸಿಂಗ್ ದಾಟಿ ಚಿರತೆ ಬಂದಿರುವುದು ಆತಂಕ ಹೆಚ್ಚಿಸಿದೆ. ಇಷ್ಟೇ ಅಲ್ಲ ಇದೀಗ ಅರಣ್ಯಾಧಿಕಾರಿಗಳು ಯಾವ ಭಾಗದ ಫೆನ್ಸಿಂಗ್ ದಾಟಿ ಈ ಚಿರತೆ ಒಳ ಪ್ರವೇಶಿಸಿದೆ ಅನ್ನೋ ಕುರಿತು ಶೋಧಿಸುತ್ತಿದ್ದಾರೆ.
ಚಾಮರಾಜನಗರದಲ್ಲಿ ಚಿರತೆ ದಾಳಿಗೆ ಹಸು ಬಲಿ: ಅರಣ್ಯಾಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ