ಸೇಡಿನ ಕಿಡಿ: ಸುಪಾರಿ ಕೊಡಲು ಮನೆಯನ್ನೇ ಮಾರಿದಳು..!

Aug 2, 2020, 11:39 AM IST

ಬೆಂಗಳೂರು(ಆ.01): ನಾಲ್ಕು ವರ್ಷದ ಹಿಂದೆ ಹೊತ್ತಿಕೊಂಡ ರಾಜಕೀಯ ದ್ವೇಷಕ್ಕೆ ಈಗಾಗಲೇ ಎರಡು ಹೆಣಗಳು ಉರುಳಿವೆ. ಆದರೆ ಆ ಸೇಡಿನ ಬೆಂಕಿ ಮಾತ್ರ ಇನ್ನೂ ಆರಿಲ್ಲ. ಗಂಡನ ಕೊಲೆಗೆ ಒಬ್ಬಾಕೆ ಪ್ರತಿಕಾರದ ಪ್ರತಿಜ್ಞೆಯನ್ನೇ ಮಾಡಿಬಿಟ್ಟಿದ್ದಳು.

ಎರಡು ವರ್ಷಗಳಿಂದ ಶತ್ರುಗಳ ರಕ್ತ ನೋಡುವ ಹಪಾಹಪಿಯಲ್ಲಿದ್ದಾಕೆ, ಮನೆಯನ್ನು ಮಾರಿ ಶತ್ರುಗಳನ್ನು ಹತ್ಯೆ ಮಾಡಲು ಸುಪಾರಿಯನ್ನು ನೀಡಿದ್ದಳು. ಜೈಲಿನಲ್ಲೇ ಕುಳಿತು ಡೀಲ್‌ ಮಾಡಿಕೊಂಡ ಹಂತಕರು, ಅಲ್ಲೇ ಸ್ಕೆಚ್ ಕೂಡಾ ರೆಡಿ ಮಾಡಿಕೊಂಡರು. ಬೆಂಗಳೂರು ವಾರ್ಡ್‌ ನಂಬರ್ 70ರ ಆ ರಕ್ತಸಿಕ್ತ ಕಹಾನಿಯೇ ಬಲು ರೋಚಕ.

ವಿಧವೆ ಅತ್ತಿಗೆಯನ್ನೇ ರೇಪ್ ಮಾಡಿದ ಮೈದುನ!

ಒಂದು ಸಣ್ಣ ದ್ವೇಷ ಮುಂದೊಂದು ದಿನ ಸೇಡಿಗೆ ಸೇಡು, ದ್ವೇಷಕ್ಕೆ ದ್ವೇಷ, ರಕ್ತಕ್ಕೆ ರಕ್ತ ಎನ್ನುವಷ್ಟರ ಮಟ್ಟಿಗೆ ತಂದು ನಿಲ್ಲಿಸಬಹುದು. ಅಂತಹದ್ದೇ ಒಂದು ಘಟನೆಗೆ ಇತ್ತೀಚೆಗಿನ ಸೇರ್ಪಡೆ ಬೆಂಗಳೂರಿನ ಹೆಗ್ಗನ ಹಳ್ಳಿಯ ಹತ್ಯಾಕಾಂಡ. ಹೆಣ್ಣಿನ ಸೇಡಿನ ಕಥೆ ಇಂದಿನ ಸುವರ್ಣ ಎಫ್‌ಐಆರ್‌ನಲ್ಲಿ ನೋಡಿ.