ರಾಗಿಣಿ ಅಲರ್ಟ್‌ ಆಗ್ತಿದ್ದಂತೆ ಸಂಜನಾ ಅಲರ್ಟ್; ಸಿಸಿಬಿ ಮುಂದೆ ನಡೀಲಿಲ್ಲ ಬಚಾವ್ ಪ್ಲಾನ್!

Oct 3, 2020, 10:40 AM IST

ಬೆಂಗಳೂರು (ಅ. 03): ಡ್ರಗ್ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಡ್ರಾಮಾ ಮಾಡುತ್ತಿದ್ದ ಸಂಜನಾ ಗರ್ಲಾನಿ ಬಗ್ಗೆ ವಿಚಾರಣೆ ವೇಳೆ ಒಂದೊಂದೇ ವಿಚಾರಗಳು ಹೊರ ಬರುತ್ತಿವೆ. ಸೆ. 04 ಕ್ಕೆ ರಾಗಿಣಿ ದ್ವಿವೇದಿ ಅರೆಸ್ಟ್ ಆಗುತ್ತಿದ್ದಂತೆ ತಾನೂ ಕೂಡಾ ಅರೆಸ್ಟ್ ಆಗುತ್ತೇನೆ ಎಂದು ಸಂಜನಾಗೆ ತಿಳಿದಿತ್ತು. ಹಾಗಾಗಿ ಡ್ರಗ್ ಕೇಸ್‌ನಲ್ಲಿ ಎಫ್‌ಐಆರ್ ಆದರೆ ಏನಾಗುತ್ತೆ? ಯಾವ ರೀತಿ ಸಿಸಿಬಿ ವಿಚಾರಣೆ ನಡೆಯುತ್ತೆ? ಎಂಬುದರ ಬಗ್ಗೆ ಲಾಯರ್‌ಗಳಿಗೆ ಕರೆ ಮಾಡಿ ಮಾಹಿತಿ ಕಲೆ ಹಾಕಿದ್ದರು ಎನ್ನಲಾಗಿದೆ. 

ಬಡ್ಡಿ ಸಂಜನಾ ಬ್ಯಾಂಕ್ ಖಾತೆ ನೋಡಿ ಅಧಿಕಾರಿಗಲೇ ಥಂಡಾ!

NDPS ಕಾಯ್ದೆ ಅಂದ್ರೇನು? ಎನ್ನುವುದರ ಬಗ್ಗೆಯೂ ಗೂಗಲ್ ಮಾಡಿದ್ದರು. ಅಂದರೆ ಮಾನಸಿಕವಾಗಿ ಅರೆಸ್ಟ್ ಆಗುವುದಕ್ಕೆ ತಯಾರಿ ನಡೆಸಿದ್ದರು. ಆದರೆ ಮಾಧ್ಯಮಗಳ ಮುಂದೆ ನನಗೇನೂ ಗೊತ್ತಿಲ್ಲ ಎಂದು ಹೈಡ್ರಾಮಾ ಮಾಡಿದ್ದರು. ಆದರೆ ಸಿಸಿಬಿ ಮುಂದೆ ಇವರ ಆಟ ನಡೆಯಲಿಲ್ಲ.