Sep 10, 2020, 11:20 AM IST
ಬೆಂಗಳೂರು (ಸೆ. 10): ಡ್ರಗ್ ಮಾಫಿಯಾ ತನಿಖೆ ಬೆನ್ನತ್ತಿರುವ ಸಿಸಿಬಿಗೆ ಇನ್ನಷ್ಟು ಸ್ಫೋಟಕ ಮಾಹಿತಿ ಲಭ್ಯವಾಗುತ್ತಿದೆ. ಡ್ರಗ್ಗಿಣಿ ಗ್ಯಾಂಗ್‌ನಲ್ಲಿ 150 ಜನರ ನೆಟ್‌ವರ್ಕ್ ಇರುವುದು ತಿಳಿದು ಬಂದಿದೆ. ಒಂದೊಂದು ಟೀಮ್‌ಗೆ ಒಂದೊಂದು ಜವಾಬ್ದಾರಿ ನೀಡಲಾಗಿದೆ. ಮೊದಲ ಟೀಮ್ ಡ್ರಗ್ಸ್ ವ್ಯಾಪಾರಕ್ಕೆ ಗ್ರಾಹಕರನ್ನು ಸೆಳೆಯುವುದು. ಎರಡನೇ ಟೀಂ ಗ್ರಾಹಕರಿಗೆ ಪಾರ್ಟಿ ಆಯೋಜಿಸುತ್ತದೆ. ಮೂರನೇ ಟೀಂ ಬೇರೆ ಬೇರೆ ಕಡೆಯಿಂದ ಡ್ರಗ್ ಪೂರೈಕೆ ಮಾಡುತ್ತದೆ. ಈ ಗ್ಯಾಂಗ್‌ನಲ್ಲಿ ಸಂಜನಾ, ರಾಗಿಣಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು.
ಡ್ರಗ್ಸ್ ಶಿಕಾರಿಗಿಳಿದ ಸಿಸಿಬಿಗೆ ಸಿಕ್ಕೇ ಬಿಡ್ತು ಮಹತ್ವದ ಸಾಕ್ಷಿ..!
ಈ ಜಾಲವನ್ನು ಭೇದಿಸಲು ಸಿಸಿಬಿ ಮಹಾ ಆಪರೇಶನ್ ಮಾಡಿದೆ. 150 ಮಂದಿಯ ಪಟ್ಟಿಯನ್ನು ಸಿದ್ಧಪಡಿಸಿದೆ. ರಾಗಿಣಿ, ಸಂಜನಾ, ಲೂಮ್ ಪೆಪ್ಪರ್, ರವಿಶಂಕರ್, ವೀರೇನ್ ಖನ್ನಾ ಗ್ಯಾಂಗ್ ಡ್ರಗ್ ಆಪರೇಶನ್ ರೋಚಕವಾಗಿದೆ. ಸಿಸಿಬಿ ತನಿಖೆಯಲ್ಲಿ ಬಯಲಾದ ಇಂಟರೆಸ್ಟಿಂಗ್ ಕಹಾನಿ ಇದು..!