ತುಮಕೂರು ಹೆದ್ದಾರಿಯಲ್ಲಿ ಕಾಂಡೋಮ್  ರಾಶಿ ರಾಶಿ.. ಹಿಂದಿನ ಕಾರಣ ಸ್ಪಷ್ಟ!

Sep 9, 2021, 3:53 PM IST

ತುಮಕೂರು(ಸೆ. 09)   ತುಮಕೂರು ಹೊರವಲಯದ ಹೆದ್ದಾರಿಯಲ್ಲಿ ಕಿಲೋಮೀಟರ್ ಗಳಷ್ಟೂ ದೂರಕ್ಕೆ ಕಾಂಡೋಮ್ ಸಿಕ್ಕಿದ್ದು ದೊಡ್ಡ ಸುದ್ದಿಯಾಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಶಿರಾಶಿ ಕಾಂಡೋಮ್​​ಗಳನ್ನು ಎಸೆದು ಹೋಗಲಾಗಿತ್ತು.

ಸೆಕ್ಸ್ ಮಾಡುವ ವೇಳೆ ಕಾಂಡೋಮ್ ಸಿಕ್ಕಿಲ್ಲ ಎಂದು ಗಮ್ ಸವರಿಕೊಂಡ!

ಕಾಂಡೋಮ್ 'ಅಲಂಕಾರ' ಕಂಡು ವಾಹನ ಸವಾರರು ಮುಜುಗರ ಅನುಭವಿಸಿದ್ದರು.  ಕ್ಯಾತ್ಸಂದ್ರದಿಂದ ಬಟವಾಡಿ ಬಳಿಯ ಶ್ರೀರಾಜ್ ಚಿತ್ರಮಂದಿರದ ಎದುರು ಇರುವ ಫ್ಲೈಓವರ್ ಮೇಲೆ ಕಿಲೋಮೀಟರ್​​ಗಟ್ಟಲೆ ಕಾಂಡೋಮ್​​​​ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಬೇರೆ ಕಡೆಯಿಂದ ತುಂಬಿಸಿಕೊಂಡು ಬಂದು ದುಷ್ಕರ್ಮಿಗಳು ಬೇಕಂತಲೇ ಎಸೆದು ಹೋಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.