ಇಟ್ಟಿದ್ದಾರೆ ’ಸುಳ್ಳು ಸುದ್ದಿ’ ಲೆಕ್ಕ; ವದಂತಿ ಹಬ್ಬಿಸುವವರಿಗೆ ಕಾದಿದೆ ಮಾರಿಹಬ್ಬ!

Oct 24, 2019, 3:20 PM IST

ತಂತ್ರಜ್ಞಾನ ಅಭಿವೃದ್ಧಿಯಾದಂತೆ ಅಪರಾಧಗಳ ಸ್ವರೂಪವೂ ಬದಲಾಗುತ್ತಿದೆ. ಕಂಪ್ಯೂಟರ್, ಮಾಹಿತಿ ತಂತ್ರಜ್ಞಾನ ಬಳಕೆ ಹೆಚ್ಚಾದಂತೆ ಸೈಬರ್ ಅಪರಾಧಗಳ ಲೋಕ ತೆರೆದುಕೊಂಡಿತು. ಸೋಶಿಯಲ್ ಮೀಡಿಯಾ ಅಸ್ತಿತ್ವಕ್ಕೆ ಬಂದ ಬಳಿಕ ಸುಳ್ಳು ಸುದ್ದಿ ಮತ್ತು ವದಂತಿಗಳ ಹಾವಳಿ ಹಾಗೂ ತೀವ್ರತೆ ಕೂಡಾ ಹೆಚ್ಚಾಯ್ತು. 

ನಿಮಗೆ ವಾಟ್ಸಪ್‌ನಲ್ಲಿ ಬಂದಿರೋ ಸುದ್ದಿ ಸತ್ಯನೋ? ಸುಳ್ಳೋ? ಇಲ್ಲಿ ಚೆಕ್ ಮಾಡಿ....

ಸುಳ್ಳು ಸುದ್ದಿಗಳ  ಮೂಲಕ ವ್ಯಕ್ತಿಗಳ ಚಾರಿತ್ರ್ಯವಧೆ, ಸಂಸ್ಥೆಗಳ ಬಗ್ಗೆ ಕೆಟ್ಟ ಅಭಿಪ್ರಾಯ ಹಾಗೂ ಸಮುದಾಯಗಳ ಬಗ್ಗೆ ಅವಹೇಳನಕಾರಿ ವಿಷಯಗಳನ್ನು  ಹರಡಿಸಲಾಗುತ್ತಿದೆ. ಅವುಗಳ ವಿರುದ್ಧ ಪ್ರಕರಣಗಳು ಕೂಡಾ ದಾಖಲಾಗಿವೆ. ಈಗ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ, ಹೊಸ ಕ್ರಮ ಕೈಗೊಂಡಿದೆ. ಇಲ್ಲಿದೆ ವಿವರ...