Jan 6, 2024, 2:56 PM IST
ಅವಳು ಅಪರೂಪದ ಸುಂದರಿ. ಅಪ್ಪ ಹಣ್ಣು ವ್ಯಾಪಾರಿ ಆದ್ರೂ ಮಗಳು ಮಾತ್ರ ಹೆಸರಾಂತ ಮಾಡೆಲ್(model). ಬಾಲಿವುಡ್(bollteood) ನಟರ ಜೊತೆಯೂ ಆಕೆ ಫೋಟೋಗೆ ಫೋಸ್ ಕೊಟ್ಟಿದ್ಲು. ಆದ್ರೆ ಇಂಥವಳು ಆವತ್ತೊಂದು ದಿನ ಆಗಿದ್ಲು. ಎಲ್ಲಿ ಹುಡುಕಿದ್ರೂ ಸಿಗಲಿಲ್ಲ. ಹೆತ್ತವರು ಮಿಸ್ಸಿಂಗ್ ಕೇಸ್ ದಾಖಲಿಸುತ್ತಾರೆ. ಆದ್ರೆ ಆ ಸುಂದರಿಯ ಮಿಸ್ಸಿಂಗ್ ಕೇಸ್ ಇಡೀ ದೇಶದಲ್ಲಿ ಸೆನ್ಸೇಷನ್ ಸೃಷ್ಟಿಸುತ್ತೆ ಕಾರಣ ಆಕೆ ಕೇವಲ ಮಾಡೆಲ್ ಆಗಿರಲಿಲ್ಲ. ಬದಲಿಗೆ ಗ್ಯಾಂಗ್‌ಸ್ಟರ್ ಒಬ್ಬನ ಫೇಕ್ ಎನ್ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿದ್ಲು. 7 ವರ್ಷ ಜೈಲು ಶಿಕ್ಷೆ ಅನುಭವಿಸಿ ಬಂದು ಕೆಲವೇ ತಿಂಗಳುಗಳಲ್ಲಿ ಆಕೆ ಮಿಸ್ಸಿಂಗ್ ಆಗಿದ್ಲು. ತನಿಖೆ ನಡೆಸಿದ ಪೊಲೀಸರು ಆಕೆ ಡೆಡ್ ಅಂತ ಹೇಳ್ತಿದ್ದಾರೆ ಆದ್ರೆ ಮೃತದೇಹ ಮಾತ್ರ ಸಿಕ್ಕಿಲ್ಲ ಅಂತಿದ್ದಾರೆ. ದಿವ್ಯಾ ಮೃತದೇಹವನ್ನ ಶಿಫ್ಟ್ (Deadbody shift)ಮಾಡಲು ಬಳಸಿದ್ದ ಕಾರನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಿವ್ಯಾ ಸಾವು ಇಡೀ ದೇಶಕ್ಕೆ ಶಾಕ್ ಆಗಿತ್ತು. ಕಾರಣ ಆಕೆಯ ಹಿಸ್ಟರಿ.. ಚಿಕ್ಕ ವಯಸ್ಸಿನಲ್ಲೇ ನೇಮು ಫೇಮು ಗಿಟ್ಟಿಸಿಕೊಂಡ ದಿವ್ಯಾ ಆಗಿನ ಕಾಲದಲ್ಲಿ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಆಗಿದ್ದವನ ಪ್ರೀತಿಯ ಬಲೆಗೆ ಬಿದ್ದಿದ್ಲು. ಆದ್ರೆ ಅದಾಗಿ ಒಂದೇ ವರ್ಷಕ್ಕೆ ಆ ಗ್ಯಾಂಗ್ಸ್ಟರ್ ಎನ್ಕೌಂಟರ್ನಲ್ಲಿ ಹತನಾಗಿಬಿಡ್ತಾನೆ.. ಆ ಏನ್ಕೌಂಟರ್ ವೇಳೆ ದಿವ್ಯಾ ಅದೇ ಸ್ಪಾಟ್ನಲ್ಲಿ ಇರುತ್ತಾಳೆ. ನಂತರ ಈ ಎನ್ಕೌಂಟರ್ ಫೆಕ್ ಎನ್ಕೌಂಟರ್ ಅಂತ ಕೇಸ್ ದಾಖಲಾದಾಗ. ಈಕೆಯೂ ಆ ಕೇಸ್‌ನಲ್ಲಿ ಆರೋಪಿಯಾಗಿ ಜೈಲು ಸೇರ್ತಾಳೆ.. ಆದ್ರೆ ವಾಪಸ್ ಬಂದ ದಿವ್ಯಾಗೆ ಪರಿಚಯವಾದವನೇ ಈ ಅಭಿಜಿತ್.. ಮೂರು ತಿಂಗಳ ಗೆಳೆತನದಲ್ಲಿ ಅದೇಗೋ ದಿವ್ಯಾ ಅಭಿಜಿತ್ನ ಖಾಸಗಿ ವಿಡಿಯೋವನ್ನ ಸಂಪಾದಿಸಿಬಿಡ್ತಾಳೆ.. ಆ ವಿಡಿಯೋವನ್ನ ಇಟ್ಟುಕೊಂಡು ಸದಾ ಬ್ಲ್ಯಾಕ್ಮೇಲ್ ಮಾಡ್ತಿದ್ಲು.. ಆಕೆ ಕೇಳಿದಷ್ಟು ಹಣ ಕೊಡ್ತಿದ್ದ ಅಭಿಜಿತ್ ಆವತ್ತೊಂದು ದಿನ ಅವಳನ್ನೇ ಮುಗಿಸೋ ನಿರ್ಧಾರ ಮಾಡಿಬಿಟ್ಟಿದ್ದ.ಟೀನೇಜ್ನಲ್ಲೇ ಸೋಷಿಯಲ್ ಮೀಡಿಯ ಇನ್ಫ್ಲೂವೆನ್ಸರ್ ಆಗಿದ್ದವಳು 27ಕ್ಕೇ ಕೊನೆಯುಸಿರು ಎಳೆಯುತ್ತಾಳೆ ಅಂದರೆ ನಿಜಕ್ಕೂ ದುರಂತ. ಆದ್ರೆ ಇಷ್ಟು ವರ್ಷದಲ್ಲೇ ಗ್ಯಾಂಗ್ಸ್ಟರ್..ಎರಡೆರಡು ಲವ್, ನಖಲಿ ಎನ್ಕೌಂಟರ್, ಜೈಲು ಎಲ್ಲವನ್ನ ನೋಡಿಬಿಟ್ಟಿದ್ಲ ಇನ್ನೂ ಆಕೆಯ ಮೃತದೇಹ ಪತ್ತೆಯಾಗೋದು ಬಾಕಿ ಇದೆ.. ಅದು ಸಿಕ್ಕೋವರೆಗೂ ಈ ಕೇಸ್ನಲ್ಲಿ ಏನನ್ನೂ ಹೆಳೋದಕ್ಕೆ ಆಗೋದಿಲ್ಲ ಅಂತ ಹೇಳ್ತಾ ಇವತ್ತಿನ ಎಪಿಸೋಡ್ ಮುಗಿಸುತ್ತಿದ್ದೇನೆ.
ಇದನ್ನೂ ವೀಕ್ಷಿಸಿ: ಅಯೋಧ್ಯೆಯಲ್ಲಿ ರಾಮ ಸಂಭ್ರಮ.. ರಾಜ್ಯದಲ್ಲಿ "ರಾಮ" ರಾಜಕೀಯದ ಕಿಚ್ಚು..!