'ಈ ಪಾಪಿ ದುನಿಯಾ ಪ್ರೀತಿ ಕಲಿಸಿ.. ಉಳಿಸೋದು ಕಲಿಸಿಲ್ಲ..' ಗಗನಸಖಿಯನ್ನು ಕೊಂದಿದ್ದು ಆಕೆಯ ಪ್ರೇಮಿ!

Mar 15, 2023, 6:24 PM IST

ಬೆಂಗಳೂರು (ಮಾ.15): ಆಕೆ ವಿಮಾನದಲ್ಲಿ ಮಿಠಾಯಿ ಕೊಡುವ ಚೆಲುವೆ. ಹಿಮಾಚಲ ಪ್ರದೇಶದ ಈ ಸುಂದರಿ ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದಳು. ಬಂದ ಪ್ರಯಾಣಿಕರಿಗೆ ಗೈಡ್ ಮಾಡಿಕೊಂಡು ಅವರಿಗೆ ಸಹಾಯ ಮಾಡಿಕೊಂಡಿದ್ದ ಈ ಗಗನ ಸಖಿ ಅವತ್ತು ಬೆಂಗಳೂರಿನಲ್ಲಿ ಸಾವನ್ನಪ್ಪಿಬಿಟ್ಟಿದ್ದಳು. ಕೋರಮಂಗಲದ 4 ಮಹಡಿ ಕಠಡದ ಮೇಲಿಂದ ಬಿದ್ದು ಆಕೆ ಜೀವವನ್ನೇ ಬಿಟ್ಟುಬಿಟ್ಟಿದ್ದಳು. ಹಿಮಾಚಲದ ಹುಡುಗಿ ದುಬೈನಲ್ಲಿ ಕೆಲಸ ಮಾಡ್ತಿದ್ದವಳು ಬೆಂಗಳೂರಿಗೆ ಬಂದು ಯಾಕೆ ಸಾವು ಕಂಡಳು?

ಇದೊಂದು ಪ್ರಶ್ನೆ ಅವತ್ತು ಕೇಸ್ ದಾಖಲಿಸಿಕೊಂಡ ಪೊಲೀಸರಿಗೂ ಬಂದಿತ್ತು.. ಮೊದಲಿಗೆ ಅಕಸ್ಮಾತ್‌ ಆಗಿ ಆಕೆ ಸತ್ತದ್ದಿರಬಹುದು ಅಂತ ತನಿಖೆ ಆರಂಭಿಸಿದ್ದ ಪೊಲೀಸರಿಗೆ ಪ್ರತೀ ಹಂತದಲ್ಲೂ ಒಂದೊಂದು ಶಾಕಿಂಗ್ ಮಾಹಿತಿ ಸಿಗೋದಕ್ಕೆ ಶುರುವಾಯ್ತು.. ಕೊನೆಗೆ ಅದು ಆ್ಯಕ್ಸಿಡೆಂಟ್ ಅಲ್ಲ ಕೊಲೆ ಅನ್ನೋದನ್ನ ಪೊಲೀಸರು ಪತ್ತೆ ಹಚ್ಚಿದರು.

ಬಾಯ್‌ಫ್ರೆಂಡ್‌ ನೋಡಲು ದುಬೈನಿಂದ ಬಂದಿದ್ದ ಗಗನಸಖಿ ಸೂಸೈಡ್‌, ರೂಮ್‌ಅಲ್ಲಿ ಆಗಿದ್ದೇನು?

ಕೇಸ್‌ ದಾಖಲಿಸಿಕೊಂಡ ಪೊಲೀಸರಿಗೆ ಆ ಬಿಲ್ಡಿಂಗ್‌ನ ನಾಲ್ಕನೇ ಮಹಡಿಯಲ್ಲಿ ಆಕೆಗೆ ಗೊತ್ತಿರೋರು ಯಾರಿದ್ದಾರೆ ಅನ್ನೋದನ್ನ ಪರಿಶೀಲಿಸಿದರು. ಆಗಲೇ ನೋಡಿ ಕಥೆಗೆ ಅವನ್ನೊಬ್ಬನ ಎಂಟ್ರಿ ಆಗೋದು. ಅದು ಬೇರೆ ಯಾರೂ ಅಲ್ಲ. ಅರ್ಚನಾಳ ಬಾಯ್ ಫ್ರೆಂಡ್.  ಅವತ್ತು ಗೆಳೆಯನ ಎದುರಲ್ಲೇ ಅರ್ಚನಾ ಸಾವನ್ನಪ್ಪಿದ್ದಳು.