ಡಾಲಿ ಧನಂಜಯ್‌ ಮನಸ್ಸು ಕದ್ದ ಡಾಕ್ಟರ್ ಧನ್ಯತಾ ಯಾರು? ಫೆಬ್ರವರಿಯಲ್ಲಿ ಮದುವೆ!

First Published | Nov 1, 2024, 9:12 AM IST

ನಟ ಡಾಲಿ ಧನಂಜಯ್ ಮದುವೆಯಾಗುತ್ತಿದ್ದಾರೆ. ಹಲವು ವೇದಿಕೆಗಳಲ್ಲಿ ಮದುವೆ ವಿಚಾರಕ್ಕೆ ಹಾರಿಕೆ ಉತ್ತರ ನೀಡುತ್ತಿದ್ದ ಧನಂಜಯ್ ಇದೀಗ ತಮ್ಮ ಪ್ರೀತಿ ವಿಚಾರ ಬಹಿರಂಗಪಡಿಸಿದ್ದು ಮಾತ್ರವಲ್ಲ, ಮದುವೆ ಅಧಿಕೃತವಾಗಿ ಘೋಷಿಸಿದ್ದಾರೆ. ಡಾಲಿ ಧನಂಜಯ್ ಮನಸ್ಸು ಕದ್ದ ಹುಡುಗಿ ಯಾರು? 

ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಮದುವೆ ಫಿಕ್ಸ್ ಆಗಿದೆ. ಹುಡುಗಿ ಯಾರು? ಈ ಪ್ರಶ್ನೆಗ ಖುದ್ದು ಡಾಲಿ ಧನಂಜಯ್ ಉತ್ತರಿಸಿದ್ದಾರೆ. ಹಲವು ವೇದಿಕೆಗಳಲ್ಲಿ, ಕುಟುಂಬ ಆಪ್ತರು, ಗೆಳೆಯರು ಡಾಲಿ ಧನಂಜಯ್ ಮದುವೆ ಯಾವಾಗ ಅನ್ನೋ ಪ್ರಶ್ನೆ ಕೇಳುತ್ತಲೇ ಇದ್ದರು. ಪ್ರೀತಿ, ಮದುವೆ ವಿಚಾರಗಳಲ್ಲಿ ಮೌನವಹಿಸಿದ್ದ ಡಾಲಿ ಧನಂಜಯ್ ಇದೀಗ ವೈದ್ಯೆ ಕೈಹಿಡಿಯುತ್ತಿದ್ದಾರೆ. ಹೌದು ವೈದ್ಯ ಧನ್ಯತಾ ಕೆಲ ವರ್ಷಗಳ ಹಿಂದಯೇ ಡಾಲಿ ಮನಸ್ಸು ಕದ್ದಿದ್ದಾರೆ.

ಚಿತ್ರದುರ್ಗ ಮೂಲದ ವೈದ್ಯೆ ಧನ್ಯತಾ ಜೊತೆ ಡಾಲಿ ಧನಂಜಯ್ ಮದುವೆಯಾಗುತ್ತಿದ್ದಾರೆ. ಫೆಬ್ರವರಿಯಲ್ಲಿ ಇವರ ಮದುವೆ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಇದೀಗ ಡಾಲಿ ಹಾಗೂ ಧನ್ಯತಾ ಪ್ರೀತಿ ಶುರುವಾಗಿದ್ದು ಎಲ್ಲಿ? ಹೇಗೆ? ಮೊದಲು ಪ್ರಪೋಸ್ ಮಾಡಿದ್ದು ಯಾರು ಅನ್ನೋ ಹಲವು ಪ್ರಶ್ನೆಗಳು ಇದೀಗ ಹಲವರಲ್ಲಿ ಕಾಡುತ್ತಿದೆ.

Tap to resize

ಡಾಲಿ ಧನಂಜಯ್ ಹಾಗೂ ಧನ್ಯತಾ ಹಲವು ವರ್ಷಗಳಿಂದ ಪರಿಚಯಸ್ಥರಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಇವರ ಪರಿಚಯ ಪ್ರೀತಿಗೆ ತಿರುಗಿದೆ. ಧನಂಜಯ್ ಮೂಲಕ ಅರಸೀಕರೆ. ಆದರೆ ಓದಿದ್ದು ಮೈಸೂರಿನಲ್ಲಿ. ಇತ್ತ ಧನ್ಯತಾ ಕೂಡ ವೈದ್ಯಕೀಯ ಶಿಕ್ಷಣ ಮಾಡಿದ್ದು ಮೈಸೂರನಲ್ಲಿ. 

ಇವರಿಬ್ಬರ ಪರಿಚಯ ಮೈಸೂರಿನಿಂದ ಆರಂಭಗೊಂಡಿದೆ. ಬಳಿಕ ಧನಂಜಯ್ ಚಿತ್ರರಂಗದಲ್ಲಿ ಬ್ಯೂಸಿಯಾಗಿದ್ದರೆ, ಧನ್ಯತಾ ಗೈನಾಕಾಲಜಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಚಯ, ಸ್ನೇಹ, ಪ್ರೀತಿಗೆ ನೀರೆರೆದ ಮೈಸೂರೇ ಇವರ ಫೇವರಿಟ್ ಸ್ಪಾಟ್. ಹೀಗಾಗಿ ಮೈಸೂರಿನ ಎಕ್ಸಿಬಿಷನ್‌ ಮೈದಾನದಲ್ಲಿ ಅದ್ಧೂರಿಯಾಗಿ ಡಾಲಿ ಧನಂಜಯ್ -ಧನ್ಯತಾ ಮದುವೆ ಆಯೋಜಿಲಾಗಿದೆ.
 

ಮದುವೆ ಹಾಗೂ ರಿಸೆಪ್ಶನ್ ಒಂದೇ ದಿನ ಮೈಸೂರಿ ಎಕ್ಸಿಬಿಷನ್ ಮೈದಾನದಲ್ಲಿ ಆಯೋಜಿಸಲಾಗಿದೆ. ಇವರಿಬ್ಬರ ಮದುವೆ ಕುರಿತ ತಯಾರಿಗಳು, ಮಾತುಕತೆಗಳು ನಡೆಯುತ್ತಿದೆ. ಆಮಂತ್ರಣ ಪತ್ರಿಕೆ, ಆಹ್ವಾನ ಸೇರಿದಂತೆ ಹಲವು ವಿಚಾರಗಳ ಕುರಿತು ಎರಡೂ ಕುಟುಂಬದವರು ಚರ್ಚಿಸಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಇದೀಗ ಮದುವೆ ಸಂಭ್ರಮ ಕಳೆಗಟ್ಟಿದೆ.

ಡಾಲಿ ಧನಂಜಯ್ ಹಾಗೂ ಭಾವಿ ಪತ್ನಿ ಧನ್ಯತಾ ಜೊತೆಗಿನ ಸುಂದರ ಫೋಟೋಶೂಟ್ ಇದೀಗ ಎಲ್ಲೆಡೆ ವೈರಲ್ ಆಗಿದೆ.ಮುದ್ದಾದ ಜೋಡಿಗೆ ಶುಭಾಶಯಗಳ ಸುರಿಮಳೆ ವ್ಯಕ್ತವಾಗುತ್ತಿದೆ. ದಾರಾ ಬೇಂದ್ರ ಅವರ ಕವನ ಹೇಳುವ ಮೂಲಕ ಪ್ರೀತಿಯಿಂದ ಧನ್ಯತಾ ಪರಿಚಯ ಮಾಡಿಕೊಟ್ಟಿದ್ದಾರೆ. ಇವರಿಬ್ಬರ ಮುದ್ದಾಡ ಫೋಟೋ ವಿಡಿಯೋಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Latest Videos

click me!