ಹಾಂಕಾಂಗ್ ಸಿಕ್ಸ್ ಕ್ರಿಕೆಟ್ ಟೂರ್ನಿ ಇಂದಿನಿಂದ ಆರಂಭವಾಗಲಿದ್ದು, ಟೂರ್ನಿಯಲ್ಲಿ ಪ್ರಶಸ್ತಿಗಾಗಿ 12 ತಂಡಗಳು ಕಾದಾಡಲಿವೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಹಾಂಕಾಂಗ್: ಹಾಂಕಾಂಗ್ ಸಿಕ್ಸ್ ಕ್ರಿಕೆಟ್ ಟೂರ್ನಿ ಬರೋಬ್ಬರಿ 7 ವರ್ಷಗಳ ಬಳಿಕ ಮತ್ತೆ ಶುಕ್ರವಾರದಿಂದ ಆರಂಭಗೊಳ್ಳಲಿದೆ. 3 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ ಭಾರತ ಸೇರಿದಂತೆ 12 ತಂಡಗಳು ಪಾಲ್ಗೊಳ್ಳಲಿವೆ.
ಟೂರ್ನಿಯನ್ನು 1993ರಿಂದಲೂ ಹಾಂಕಾಂಗ್ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿದೆ. ಕೆಲ ಆವೃತ್ತಿಗಳಲ್ಲಿ ಭಾರತ ಆಡಿದ್ದು, 2005ರಲ್ಲಿ ಚಾಂಪಿಯನ್ ಆಗಿತ್ತು. ಆದರೆ 2017ರ ಬಳಿಕ ಟೂರ್ನಿ ಸ್ಥಗಿತಗೊಂಡಿತ್ತು. ಈ ಬಾರಿ ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್, ಶ್ರೀಲಂಕಾ ತಂಡಗಳೂ ಪಾಲ್ಗೊಳ್ಳಲಿವೆ.
undefined
ಟೂರ್ನಿಯನ್ನು ತಲಾ 3 ತಂಡಗಳ 4 ಗುಂಪುಗಳನ್ನಾಗಿ ವಿಂಗಡಿಸಲಾಗಿದ್ದು, ಭಾರತ ‘ಸಿ’ ಗುಂಪಿನಲ್ಲಿ ಪಾಕಿಸ್ತಾನ, ಯುಎಇ ಜೊತೆಗಿದೆ. ಭಾರತ ಶುಕ್ರವಾರ ಪಾಕಿಸ್ತಾನ, ಶನಿವಾರ ಯುಎಇ ವಿರುದ್ಧ ಸೆಣಸಾಡಲಿದೆ. ಪ್ರತಿ ಗುಂಪಿನ ಅಗ್ರ-2 ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ. ಕ್ವಾರ್ಟರ್ ಪಂದ್ಯಗಳು ಶನಿವಾರ, ಸೆಮೀಸ್, ಫೈನಲ್ ಭಾನುವಾರ ನಿಗದಿಯಾಗಿದೆ.
ಮುಂಬೈ ಟೆಸ್ಟ್: ಭಾರತ ಎದುರು ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ
ಭಾರತ ರಾಬಿನ್ ಉತ್ತಪ್ಪ ನಾಯಕತ್ವದಲ್ಲಿ ಆಡಲಿದ್ದು, ಕೇದಾರ್ ಜಾಧವ್, ಮನೋಜ್ ತಿವಾರಿ, ಸ್ಟುವರ್ಟ್ ಬಿನ್ನಿ, ಶ್ರೀವತ್ಸ ಗೋಸ್ವಾಮಿ, ಭರತ್ ಚಿಪ್ಲಿ, ಶಾಬಾಜ್ ನದೀಂ ತಂಡದಲ್ಲಿದ್ದಾರೆ.
ವಿಭಿನ್ನ ನಿಯಮ: ಟೂರ್ನಿ ಸಾಧಾರಣ ಕ್ರಿಕೆಟ್ ಪಂದ್ಯಕ್ಕಿಂತ ವಿಭಿನ್ನವಾದ ನಿಯಮಗಳನ್ನು ಹೊಂದಿದೆ. ಪ್ರತಿ ತಂಡದಲ್ಲಿ ಆರು ಆಟಗಾರರು ಇರಲಿದ್ದು, ತಲಾ 5 ಓವರ್ ಆಟ ನಡೆಯಲಿದೆ. ಫೈನಲ್‌ನಲ್ಲಿ ಮಾತ್ರ ಪ್ರತಿ ಓವರ್‌ಗೆ 8 ಎಸೆತಗಳು ಇರಲಿವೆ.
ಬಾಂಗ್ಲಾ ವಿರುದ್ಧ ದ.ಆಫ್ರಿಕಾಕ್ಕೆ ಇನ್ನಿಂಗ್ಸ್, 273 ರನ್ ಗೆಲುವು
ಚಿತ್ತಗಾಂಗ್: ಬಾಂಗ್ಲಾದೇಶ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಹಾಗೂ 273 ರನ್ ಬೃಹತ್ ಗೆಲುವು ದಾಖಲಿಸಿದೆ. ಈ ಮೂಲಕ ಎರಡು ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕೈವಶಪಡಿಸಿಕೊಂಡಿತು.
ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 575 ರನ್ ಗಳಿಸಿ ಡಿಕ್ಲೇರ್ ಘೋಷಿಸಿದ್ದ ದ.ಆಫ್ರಿಕಾ, ಗುರುವಾರ ಬಾಂಗ್ಲಾವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 159 ರನ್‌ಗೆ ನಿಯಂತ್ರಿಸಿತು. ಮೋಮಿನುಲ್ ಹಕ್(82) ಏಕಾಂಗಿ ಹೋರಾಟ ಪ್ರದರ್ಶಿಸಿದರು. ರಬಾಡ 5 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್‌ನಲ್ಲಿ 416 ರನ್ ಮುನ್ನಡೆ ಪಡೆದ ದ.ಆಫ್ರಿಕಾ ತಂಡ ಬಾಂಗ್ಲಾ ಮೇಲೆ ಫಾಲೋ-ಆನ್ ಹೇರಿತು. 2ನೇ ಇನ್ನಿಂಗ್ಸ್‌ನಲ್ಲೂ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾದ ಬಾಂಗ್ಲಾ 143 ರನ್‌ಗೆ ಆಲೌಟಾಯಿತು. ಕೇಶವ್ ಮಹಾರಾಜ್ 5, ಸೇನುರಾನ್ ಮುತ್ತುಸ್ವಾಮಿ 4 ವಿಕೆಟ್ ಕಿತ್ತರು.
ಆರ್‌ಸಿಬಿ ತಂಡದ ನಾಯಕತ್ವಕ್ಕೆ ಹಿಂದಿರುಗಿದ ವಿರಾಟ್ ಕೊಹ್ಲಿ!
ಟಾನೊ ಡೆ ಜೊರ್ಜಿ ಪಂದ್ಯಶ್ರೇಷ್ಠ, ರಬಾಡ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು. ಇತ್ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ದ.ಆಫ್ರಿಕಾ 7 ವಿಕೆಟ್‌ಗಳಿಂದ ಗೆದ್ದಿತ್ತು.